ಶಾಸಕ ಆನಂದ್ ಸಿಂಗ್ ರಾಜೀನಾಮೆ ಕುರಿತು ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದೇನು ಗೊತ್ತೆ..?

ಬೆಂಗಳೂರು,ಜು,1,2019(www.justkannada.in):  ಆನಂದ್ ಸಿಂಗ್ ಪಕ್ಷ ಬಿಟ್ಟು‌ಹೋಗುವಂತವರಲ್ಲ. ಅವರು ಪಕ್ಷದಲ್ಲಿಯೇ ಇರುತ್ತಾರೆ. ಅವರನ್ನ ಮನವೊಲಿಸಲು ಪ್ರಯತ್ನ ಮಾಡುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದರು.

ಶಾಸಕ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಸಚಿವ ಡಿ.ಕೆ ಶಿವಕುಮಾರ್, ಕೆಲವೊಂದು ಕಾರಣಗಳಿಂದ ಆನಂದ್ ಸಿಂಗ್ ರಾಜೀನಾಮೆ ನೀಡಿರಬಹುದು. ಅವರ ಜೊತೆ ನಾನು ಮಾತನಾಡುತ್ತೇನೆ. ಅವರ ಮನವೊಲಿಸುವ ಪ್ರಯತ್ನ ಮಾಡುತ್ತೇನೆ. ಅವರು ವೈಯುಕ್ತಿಕ ನೋವಿನಿಂದ ಆ ನಿರ್ಧಾರ ಮಾಡಿರಬಹುದು. ಯಾವ ಶಾಸಕರು ರಾಜೀನಾಮೆ ನೀಡಲ್ಲ. ಅಧಿಕಾರ,ಸ್ಥಾನದ ಆಸೆಯಿರುತ್ತದೆ ಅಷ್ಟೇ ಎಂದು ಹೇಳಿದರು.

ಪರೋಕ್ಷವಾಗಿ ರಮೇಶ್ ಜಾರಕಿಹೊಳಿಗೆ ಕುಟುಕಿದ ಡಿಕೆಶಿ..

ಇದೇ ವೇಳೆ ಪರೋಕ್ಷವಾಗಿ ಶಾಸಕ ರಮೇಶ್ ಜಾರಕಿಹೊಳಿಗೆ ಕುಟುಕಿದ ಸಚಿವ ಡಿ.ಕೆ ಶಿವಕುಮಾರ್, ಅಧಿಕಾರ, ಸ್ಥಾನಮಾನಕ್ಕೆ ಕೆಲವರಲ್ಲಿ ಅಸಮಾಧಾನವಿರುತ್ತದೆ. ಹೊಟ್ಟೆ ನೋವು ಬಂದಾಗ ಅದಕ್ಕೆ ಮೆಡಿಷನ್ ತೆಗೆದುಕೊಳ್ಳಬೇಕು. ಅಧಿಕಾರ ಇಲ್ಲ ಅಂತ ಕೆಲವರಿಗೆ ಹೊಟ್ಟೆ ನೋವಿರಬಹುದು. ಅವರು ಮೆಡಿಸನ್ ತೆಗೆದುಕೊಳ್ಳಬೇಕು. ಅದು ಬಿಟ್ಟು ಹಾಗೆ ಮಾಡ್ತೀನಿ, ಈಗ್ ಮಾಡ್ತೀನಿ ಅಂದ್ರೆ ಆಗಲ್ಲ. ಯಾರಿಗೂ ಶಾಸಕ ಸ್ಥಾನ ಕಳೆದುಕೊಳ್ಳೋಕೆ ಇಷ್ಟವಿಲ್ಲ ಎಂದು ಟಾಂಗ್ ಕೊಟ್ಟರು.

ಜಿಂದಾಲ್ ವಿಚಾರ ವೈಯಕ್ತಿಕ ವಿಚಾರ ಅಲ್ಲ. ಬಿಜೆಪಿ ಸರ್ಕಾರ ಇದ್ದಾಗ  ಜಿಂದಾಲ್ ಗೆ ಭೂಮಿ ಕೊಟ್ಟಿದ್ದು. ಹಿಂದೆ ಯಡಿಯೂರಪ್ಪ ಸಹಿ ಮಾಡಿದ್ದ, ಈಗ  ಜಾರ್ಜ್ ಮುಂದುವರಿಸಿದ್ದಾರೆ. ಕೈಗಾರಿಕೆ ಉತ್ತೇಜನಕ್ಕೆ ಪ್ರೋತ್ಸಾಹಿಸೋದಿಕ್ಕೆ ಮಾಡಿದ್ದೇವೆ ನೂನ್ಯತೆ ಸರಿ ಪಡಿಸಿ ಮಾಡ್ತಿದ್ದೇವೆ. ಈ ವಿಚಾರವನ್ನ ಸಂಪುಟ ಉಪ ಸಮಿತಿಗೆ ಸಿಎಂ ನೀಡಿದ್ದಾರೆ. ಇದರ ಬಗ್ಗೆ ಆನಂದ್ ಸಿಂಗ್ ಹೇಳಿರೋದು ನಿಜ. ಸಮಸ್ಯೆ ಇದ್ದರೆ ಸರಿಪಡಿಸೋಣ. ರಾಜೀನಾಮೆ ಕೊಡುವುದು ಯಾರಿಗೂ ಬೇಕಿಲ್ಲ ಎಂದರು.

Key words: Minister- DK Sivakumar – about – resignation –MLA- Anand Singh.