ಪಂಚಾಯತ್ ನಿಂದ ಪಾರ್ಲಿಮೆಂಟ್ ವರೆಗೂ ಬಿಜೆಪಿ: ನಮ್ಮ ಜಿಲ್ಲೆಗೆ ಬಂದು ನೋಡಿ ಕಲಿಯಿರಿ- ಸಚಿವ ಸಿ.ಟಿ ರವಿ ಹೀಗೆ ಹೇಳಿದ್ದು ಯಾರಿಗೆ ಗೊತ್ತೆ…?

kannada t-shirts

ಚಿಕ್ಕಮಗಳೂರು,ಆ,1,2020(www.justkannada.in):   ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಬಿಜೆಪಿ ಎಂಎಲ್ ಸಿ ಸಿ.ಪಿ ಯೋಗೇಶ್ವರ್ ನಡುವೆ ವಾದ- ವಾಗ್ವಾದ ಆರೋಪ ಪ್ರತ್ಯಾರೋಪದ ಬಗ್ಗೆ ಪ್ರತಿಕ್ರಿಯಿಸಿದ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ  ಸಿ.ಪಿ ಯೋಗೇಶ್ವರ್ ಅವರಿಗೆ ಕೆಲ ಸಲಹೆಗಳನ್ನ ನೀಡಿದ್ದಾರೆ.jk-logo-justkannada-logo

ರಾಮನಗರದಲ್ಲಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ ಕೆಲಸಗಳು ನಡೆಯುತ್ತವೆ. ನಮ್ಮ ಜಿಲ್ಲೆಗೆ ಬಂದು ನೋಡಿ ಕಲಿಯಿರಿ. ಪಂಚಾಯತ್ ನಿಂದ ಪಾರ್ಲಿಮೆಂಟ್ ವರೆಗೂ ಬಿಜೆಪಿ ಇದೆ. ಇದೇ ರೀತಿ ರಾಮನಗರದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದರೇ ರಾಮನಗರವನ್ನ ಮಾದರಿ ಜಿಲ್ಲೆಯಾಗಿ ಮಾಡಬಹುದು ಎಂದು ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಗೆ ಸಚಿವ ಸಿ.ಟಿ ರವಿ ಸಲಹೆ ನೀಡಿದರು.

ಚಿಕ್ಕಮಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸಿ.ಟಿ ರವಿ, ಭ್ರಷ್ಟಾಚಾರದ ಬಗ್ಗೆ ಡಿ.ಕೆ ಶಿವಕುಮಾರ್ ಮಾತನಾಡುತ್ತಾರೆ. ಇದು ಭೂತದ ಬಾಯಲ್ಲಿ ಭಗವತ್ಗೀತೆ ಬಂದಂತೆ.  ಡಿ.ಕೆ ಶಿವಕುಮಾರ್ ಪ್ರಮಾಣಿಕರಾಗಿದ್ರೆ ಆತ್ಮಸಾಕ್ಷಿ ಪರೀಕ್ಷಿಸಿಕೊಳ್ಳಲಿ ಎಂದು ಟಾಂಗ್ ನೀಡಿದರು.minister-ct-ravi-bjp-cp-yogeshwar-dk-shivakumar-congress

ಡಿ.ಕೆ ಶಿವಕುಮಾರ್ ಮತ್ತು ಸಿದ್ಧರಾಮಯ್ಯ ನಡುವೆ ಆಂತರಿಕ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್ ಗೆ ಸಂಸ್ಥೆಗಳ ಮೇಲೆ ನಂಬಿಕೆಯೇ ಇಲ್ಲ ಎಂದು ಕಿಡಿಕಾರಿದ ಸಚಿವ ಸಿ.ಟಿ ರವಿ, ಯಾರು ಯಾವಾಗ ಎಲ್ಲಿ ಕಾಲಿಗೆ ಬಿದ್ದರೋ ಗೊತ್ತಿಲ್ಲ. ರಾಜಕೀಯಕ್ಕಾಗಿ ಕಾಲಿಗೆ ಬಿದ್ದರೇ ಅದು ತಪ್ಪು.  ಹಿರಿತನ, ಸಂಸ್ಕಾರಕ್ಕೆ ಕಾಲಿಗೆ ಬಿದ್ದರೇ ತಪ್ಪಲ್ಲ ಎಂದು ತಿಳಿಸಿದರು.

Key words: minister- CT Ravi-bjp- cp yogeshwar- dk shivakumar-congress

website developers in mysore