ಹಿರೇಕೇರೂರಿನಲ್ಲಿ  ನಾಳೆ ಸಿಎಂ ಬಿಎಸ್ ವೈಗೆ ಅಭಿನಂದನಾ ಸಮಾರಂಭ…

ಬೆಂಗಳೂರು ಮಾ,6,2020(www.justkannada.in):  ಹಾವೇರಿ ಜಿಲ್ಲಾ ಹಿರೇಕೆರೂರ ತಾಲೂಕಿನ ಸರ್ವಕ್ಷೇತ್ರಗಳ ಅಭಿವೃದ್ಧಿಯ ದೃಷ್ಟಿಯಿಂದ ಹಾಗೂ ಜನಪರ ಯೋಜನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹಾಗೂ ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಶ್ರಮಿಸುತ್ತಿರುವ ಹಿರೇಕೆರೂರ ಕ್ಷೇತ್ರದ ಶಾಸಕರ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಲಿದ್ದಾರೆ.

ನಾಳೆ ಮಾರ್ಚ್ 7 ರಂದು ಬೆಳಿಗ್ಗೆ 11ಗಂಟೆಗೆ “ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ದೂದಿಹಳ್ಳಿ” ಯಲ್ಲಿ ಮುಖ್ಯಮಂತ್ರಿಗಳಿಗೆ ಅಭಿನಂದನಾ ಸಮಾರಭ ಆಯೋಜಿಸಲಾಗಿದೆ. ಹಾಗೂ  ಅಂದು ಕ್ಷೇತ್ರದ ಒಟ್ಟು 330.94 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳ ಅಮೃತ ಹಸ್ತದಿಂದ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಲಿದೆ ಎಂದು ಕೃಷಿ ಸಚಿವ  ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

ತುಂಗಾ ಮೇಲ್ದಂಡೆ  ರಟ್ಟೀಹಳ್ಳಿ ನೀರಾವರಿ ಇಲಾಖೆಯ ಯೋಜನೆಯಡಿ ಹಿರೇಕೆರೂರ ಮತ್ತು ರಟ್ಟೀಹಳ್ಳಿ ಭಾಗದ ಕೆರೆಗಳಿಗೆ ನೀರು ತುಂಬಿಸುವ ಸರ್ವಜ್ಞ ಏತ ನೀರಾವರಿ, ಸಮಾಜ ಕಲ್ಯಾಣ ಇಲಾಖೆಯ ರಟ್ಟೀಹಳ್ಳಿ ಗ್ರಾಮದ ಇಂದಿರಾಗಾಂಧಿ ವಸತಿ ಶಾಲೆಯ ಸಮುಚ್ಛಯ ನಿರ್ಮಾಣ ಕಾಮಗಾರಿ ಶಿಲಾನ್ಯಾಸ, ಹಿರೇಕೆರೂರ ಪಟ್ಟಣದ ಬಸವೇಶ್ವರರ ನಗರದಲ್ಲಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣ ಶಿಲಾನ್ಯಾಸ, ಪರಿಶಿಷ್ಟ ಜಾತಿಯ ಕಾಲೋನಿಗಳಿಗೆ ಹೈಮಾಸ್ಕ್ ದೀಪಗಳ ಅಳವಡಿಕೆ 40 ಗ್ರಾಮಗಳ ಶಿಲಾನ್ಯಾಸ(ಪ್ರತಿ ಘಟಕಕ್ಕೆ 2.50 ಲಕ್ಷ ರಂತೆ) ಕೆ.ಆರ್.ಐ.ಇ.ಎಸ್ ದೂದಿಹಳ್ಳಿ ಗ್ರಾಮದ ಸಮೀಪದಲ್ಲಿರುವ ಕಿತ್ತೂರ ಚನ್ನಮ್ಮ ವಸತಿ ಶಾಲೆ ಹಾಗೂ ಮೊರಾರ್ಜಿ ದೇಸಾಯಿ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.

ಸಣ್ಣ ನೀರಾವರಿ ಇಲಾಖೆಯ ಹಾವೇರಿ ಜಿಲ್ಲೆ ಹಿರೇಕೆರೂರ ತಾಲೂಕಿನ ಕುಮದ್ವತಿ ನದಿಗೆ ಅಡ್ಡಲಾಗಿ ಮಾಸೂರ ಹಿರೇಮೊರಬ ರಟ್ಟಿಹಳ್ಳಿ ಗ್ರಾಮದ ಹತ್ತಿರ ಬ್ಯಾರೇಜ್ ಸಹಿತ ಸೇತುವೆ ನಿರ್ಮಾಣ ಮತ್ತು ಹಿರೇಮಾದಾಪುರ ಗ್ರಾಮದ ಹತ್ತಿರ ಬ್ಯಾರೇಜ್ ನಿರ್ಮಾಣ ಕಾಮಗಾರಿ ಶಿಲಾನ್ಯಾಸ,ಹೆಸ್ಕಾಂ ಹಿರೇಕೆರೂರ 1192ಫಲಾನುಭವಿಗಳಿಗೆ ಅಕ್ರಮ ಸಕ್ರಮ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸುವುದು, ಕೃಷಿ ಇಲಾಖೆಯ ಬರಗಾಲ ತಡೆಗಟ್ಟುವಿಕೆ ಕಾರ್ಯಕ್ರಮದಡಿ ರಾಜ್ಯ ಜಲಾನಯನ ಅಭಿವೃದ್ಧಿ ಅಡಿಯಲ್ಲಿ 8ಗ್ರಾಮ ಪಂಚಾಯತ್‌ಗಳ 13ಗ್ರಾಮಗಳ 3133ಹೆಕ್ಟರ್ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮ ಶಿಲಾನ್ಯಾಸ, ಹಿರೇಕೆರೂರ ಹಿಂದುಳಿದ ವರ್ಗಗಳ ಕಲ್ಯಾಣ ಅಡಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಹಿರೇಕೆರೂರ ಶಿಲಾನ್ಯಾಸ, ಶಿಕ್ಷಣ ಇಲಾಖೆಯ ಹಿರೇಕೆರೂರ ರಟ್ಟಿಹಳ್ಳಿ ತಾಲೂಕಿನ 35ಪ್ರಾಥಮಿಕ ಶಾಲೆಗಳ ಕೊಠಡಿಗಳ ಶಿಲಾನ್ಯಾಸ ಕಾರ್ಯಕ್ರಮವೂ ನಾಳೆ ಜರುಗಲಿದೆ,

ಇನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಿರೇಕೆರೂರ ಕಡೂರ,ಹಳ್ಳೂರ,ಸೋಮನಹಳ್ಳಿ ಬಸರಿಹಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿ ಶಿಲಾನ್ಯಾಸ,ಕೆಆರ್‌ಐಡಿಎಲ್ ಬಸರೀಹಳ್ಳಿ ಬಳಿ ಹೆಲಿಪ್ಯಾಡ್ ನಿರ್ಮಾಣ ಕಾಮಗಾರಿ ಶಿಲಾನ್ಯಾಸ,ತೋಟಗಾರಿಕರ ಕಚೇರಿ ಕಟ್ಟಡ ಶಿಲಾನ್ಯಾಸ, ನಿರ್ಮಿತಿ ಕೇಂದ್ರದ ವಾಲ್ಮೀಕಿ ಭವನ ಹಂಸಭಾವಿ ಹಾಗೂ ಮಾಸೂರ ಶಿಲಾನ್ಯಾಸ, ಹಿರೇಕೆರೂರ ತಾಲೂಕ ದೂದಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಕೊಠಡಿ ನಿರ್ಮಾಣ ಕಾಮಗಾರಿ, ಮತ್ತಿಹಲ್ಳಿ 2ಅಂಗನವಾಡಿ ನಿರ್ಮಾಣ ಕಾಮಗಾರಿ, ನೂಲಗೆರಿ ಗ್ರಾಮದ ಪದವಿಪೂರ್ವ ಕಾಲೇಜು ನೂತನ ಕಟ್ಟೆ ಉದ್ಘಾಟನೆ, ಮಾವಿನತೋಪು  ಕೇಂದ್ರ ಶಿತೀಕೊಂಡ ಯಲವದಹಳ್ಳಿ 2ನೇ ಕೇಂದ್ರ ಚಿಕ್ಕಯಡಚಿ 1ನೇ ಕೇಂದ್ರ ಮತ್ತು ಮಿನಿ ಅಂಗನವಾಡಿ ಕೇಂದ್ರ 5 ಅಂಗನವಾಡಿ ನೂತನ ಕಟ್ಟಡಗಳ ಉದ್ಘಾಟನೆ ನೆರವೇರಲಿದೆ.

Key words: minister-BC Patil- hirekerur- Congratulations-CM BS yeddyurappa- tomorrow