ಗಲಭೆ ಪ್ರಕರಣ: ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಯಾವೊಬ್ಬ ಕಾಂಗ್ರೆಸ್ ನಾಯಕರೂ ಹೇಳಿಲ್ಲ- ಸಚಿವ ಬಿ.ಸಿ.ಪಾಟೀಲ್ ಕಿಡಿ

ಧಾರವಾಡ, ಆಗಸ್ಟ್, 18, 2020(www.justkannada.in): ಬೆಂಗಳೂರಿನಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಶಿಕ್ಷೆ ಆಗಲೇಬೇಕು ಎಂದು ಇದುವರೆಗೂ ಯಾವೊಬ್ಬ ಕಾಂಗ್ರೆಸ್ ನಾಯಕರೂ ಹೇಳಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕಿಡಿ ಕಾರಿದರು. jk-logo-justkannada-logo

ದಾವಣಗೆರೆಯ ಕತ್ತಲಗೆರೆಯಲ್ಲಿ  ಇಂದು  ಮಾಧ್ಯಮಗಳ ಜತೆ ಮಾತನಾಡಿದ ಅವರು, ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ ಹಳ್ಳಿ ಗಲಭೆ ಪ್ರಕರಣದ ಹಿಂದೆ ಬಹುದೊಡ್ಡ ರಾಜಕೀಯ ಪಿತೂರಿ ಇದೆ. ಸ್ವ-ಪಕ್ಷದ ದಲಿತ ಶಾಸಕನ ರಕ್ಷಣೆಗೆ ಕಾಂಗ್ರೆಸ್ ನಾಯಕರು ನಿಲ್ಲುತ್ತಿಲ್ಲ. ಕಾಂಗ್ರೆಸ್ ನಾಯಕರಿಗೆ ತಮ್ಮ ಶಾಸಕರನ್ನು ಕಾಪಾಡಿಕೊಳ್ಳಲು ಆಗಿಲ್ಲ. ಆರೋಪಿಗಳನ್ನು ಆಮಾಯಕರು ಎಂಬ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.minister-bc-patil-bangalore-roit-case-congress-leader

ಗಲಭೆಯು ರಾಜಕೀಯ ಪ್ರೇರಿತ : ಠಾಣೆಗೆ, ಶಾಸಕರ ಮನೆಗೆ ಬೆಂಕಿಬಿಟ್ಟವರು ಅಮಾಯಕರಾ? ಅಖಂಡ ಶ್ರೀನಿವಾಸರ ಮನೆ ಮೇಲೆ ನಡೆದ ದಾಳಿಪೂರ್ವ ನಿಯೋಜಿತ ಸಂಚು. ಇದು ರಾಜಕೀಯ ಪ್ರೇರಿತ ದಾಳಿಯಾಗಿದೆ. ಈ ಗಲಭೆ ಹಿಂದಿರುವ ಸಂಘಟನೆಗಳನ್ನು ಸರಕಾರ ನಿಷೇಧ ಮಾಡಬೇಕು. ಸಂಘಟನೆಗಳ ನಿಷೇಧದ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಳ್ಳುತ್ತಾರೆ. ಸರ್ಕಾರ ಸುಭದ್ರವಾಗಿದೆ. ದುಷ್ಟಶಕ್ತಿಗಳನ್ನು ಸರ್ಕಾರ ಹೆಡೆಮುರಿ ಕಟ್ಟುತ್ತದೆ ಎಂದು ತಿಳಿಸಿದರು.

Key words: minister- BC Patil-bangalore- roit-case- congress- leader