ಮೈಸೂರು ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಗೆ ಚಾಲನೆ ನೀಡಿದ ಮೈಸೂರು ವಿವಿ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್.

kannada t-shirts

ಮೈಸೂರು,ನವೆಂಬರ್,17,2021(www.justkannada.in):  ಯಾವುದೇ ಸಾಧನೆಯನ್ನು ಮಾಡಬೇಕಾದರೂ ಮನಸ್ಸಿನ ದೃಢತೆ ಮುಖ್ಯವಾಗಿರುತ್ತದೆ. ಗುರಿ ಯಾವುದೆ೦ಬುದರ ನಿಖರತೆಯನ್ನು ಹೊ೦ದಿದ್ದರೆ ಜೀವನದಲ್ಲಿ ಎಂದಿಗೂ ಸೋಲು ಅನುಭವಿಸುವ ಅಗತ್ಯವಿರುವುದಿಲ್ಲ. ಯಶಸ್ಸಿನ ಹಾದಿ ನಿಮ್ಮದಾಗಿರುತ್ತದೆ ಎಂದು ಮೈಸೂರು ವಿಶ್ವ ವಿದ್ಯಾನಿಲಯ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ನುಡಿದರು.

ಮೈಸೂರು ವಿಶ್ವ ವಿದ್ಯಾನಿಲಯ, ದೈಹಿಕ ಶಿಕ್ಷಣ ವಿಭಾಗ  ಮತ್ತು ಮೈಸೂರು ಜಿಲ್ಲಾ ಕಿಕ್ ಬಾಕ್ಸಿಂಗ್ ಅಸೋಸಿಯೇಷನ್ ಇವರ ಸಂಯುಕ್ತಾಶ್ರಯದಲ್ಲಿ ನಗರದ ಸ್ಪೋರ್ಟ್ಸ್ ಪೆವಿಲಿಯನ್ ನ ಯೋಗ ಮಂದಿರದಲ್ಲಿ ಅಂತರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಲ್ಲಿ ಪದಕ ಗಳಿಸಿದ ವಿಜೇತರಿಗೆ ಇಂದು ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ವೇಳೆ ಮೈಸೂರು ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್-2021  ಕಾರ್ಯಕ್ರಮಕ್ಕೆ ಮೈಸೂರು ವಿವಿ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಶಿಕ್ಷಣದಲ್ಲಿ ಯಶಸ್ವಿಯಾಗಿ ಉತ್ತಮ ಅಂಕಗಳನ್ನು ಪಡೆಯುವುದು, ಪ್ರತಿಯೊಬ್ಬ ವಿದ್ಯಾರ್ಥಿಯ ಕನಸಾಗಿದೆ. ತಮ್ಮ ಗುರಿಗಳನ್ನು ಸಾಧಿಸಲು ಮತ್ತು ಜೀವನದಲ್ಲಿ ಯಶಸ್ವಿಯಾಗಲು ಅವರು ಅದನ್ನು ಮಾಡಬೇಕಾಗಿದೆ.

ಯಶಸ್ಸಿನ ಹಾದಿ ಸುಲಭವಲ್ಲ ಮತ್ತು ಸುಲಭವಾಗಿದ್ದರೆ ಎಲ್ಲರೂ ಯಶಸ್ವಿಯಾಗುತ್ತಿದ್ದರು. ಯಶಸ್ಸನ್ನು ಸಾಧಿಸಲು ಒಂದು ದಿನದಲ್ಲಿ ಆಗಲ್ಲ. ಇದು ಕಠಿಣ ಪರಿಶ್ರಮ, ಬದ್ಧತೆ ಮತ್ತು ತ್ಯಾಗದ ಅಗತ್ಯವಿರುವ ದೀರ್ಘ ಸ್ಥಿರ ಪ್ರಕ್ರಿಯೆಯಾಗಿದೆ. ಒಬ್ಬ ವ್ಯಕ್ತಿಯು, ಸಾಧಿಸುವ ಯಶಸ್ಸಿನ ಪ್ರಮಾಣವು ವ್ಯಕ್ತಿಯ ಜೀವನದಲ್ಲಿ ತ್ಯಾಗ ವಿಷಯಗಳ ಸಂಖ್ಯೆಗೆ ನೇರವಾಗಿ ಸಂಬಂಧಿಸಿದೆ. ಈ ತ್ಯಾಗದ ಪರಿಕಲ್ಪನೆಯನ್ನು ನೀವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಎಂದು ಪ್ರೊ. ಜಿ.ಹೇಮಂತ್ ಕುಮಾರ್ ತಿಳಿಸಿದರು.

ಕೆಲವೊಂದು ಗುರಿಗಳನ್ನ ಸಾಧಿಸಬೇಕಾದರೆ ಒಂದು ದೃಢವಾದ ಸಂಕಲ್ಪ ಮಾಡಿಕೊಳ್ಳಬೇಕಾಗುತ್ತದೆ. ಆಗ ಮಾತ್ರ ಯಶಸ್ಸಿನ ಮೆಟ್ಟಿಲನ್ನು  ಏರಲು ಸಾಧ್ಯವಾಗುತ್ತದೆ. ಕಳೆದುಹೋದ  ಸಮಯವನ್ನ ಮರಳಿ ಪಡೆಯಲು ಎಂದಿಗೂ ಸಾಧ್ಯವಿಲ್ಲ. ಸಮಯವು ಪ್ರತಿಯೊಬ್ಬರ ಜೀವನದ ಅತ್ಯಮೂಲ್ಯ ಆಸ್ತಿಯಾಗಿದೆ. ಸಮಯವನ್ನು ಹೇಗೆ  ಸದುಪಯೋಗಪಡಿಸಿಕೊಳ್ಳಬೇಕು ಎಂಬ ಲೆಕ್ಕಾಚಾರ ಮಾಡುವುದು ಬಹಳ ಮುಖ್ಯ ಎಂದು ವಿದ್ಯಾರ್ಥಿಗಳಿಗೆ ಹೇಮಂತ್ ಕುಮಾರ್ ಕಿವಿಮಾತು ಹೇಳಿದರು.

Key words: Mindfulness – key – achievement-Goal – success – Mysore university-VC- Prof. G. Hemanth Kumar.

ENGLISH SUMMARY…

UoM VC inaugurates Mysuru Kick Boxing Championship
Mysuru, November 17, 2021 (www.justkannada.in): “You require to be strong by the mind to achieve in any field. If you are specific about your aim, you won’t experience failure. The path of success will be yours,” opined Prof. G. Hemanth Kumar, Vice-Chancellor, University of Mysore.
The Physical Education Department of the University of Mysore, in association with the Mysuru Kick Boxing Association, had jointly organized a program at the Yoga Mandira in the Sports Pavilion to distribute prizes to the winners of the International Kickboxing championship and felicitation.
Inaugurating the program, Prof. G. Hemanth Kumar observed that it is the dream of every student to score good marks, and excel in exams. “It is essential to reach their aim and find success in their lives. However, the path to success is not easy. If it were so, everyone would have been successful. You cannot get success within one day. The path of success is a process of constant hard work, perseverance, commitment, and sacrifice. The intensity of success of a person is directly related to all these aspects of his life. You should understand this concept of sacrifice,” he said.
Keywords: University of Mysore/ Prof. G. Hemanth Kumar/ Mysuru Kick boxing championship/ prize distribution ceremony

website developers in mysore