ಮೆಟ್ರೋ ವೇಳಾಪಟ್ಟಿ ಪರಿಷ್ಕರಣೆ: ಪ್ರಯಾಣಿಕರಿಗೆ ಪ್ರಯಾಸ ಆರೋಪ

kannada t-shirts

ಬೆಂಗಳೂರು, ಸೆಪ್ಟೆಂಬರ್ 04, 2022 (www.justkannada.in): ನಮ್ಮ ಮೆಟ್ರೋ ವೇಳಾಪಟ್ಟಿ ಪರಿಷ್ಕರಣೆ ಮಾಡಲಾಗಿದೆ. ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಮುಂಜಾನೆ ಮತ್ತು ತಡರಾತ್ರಿ ರೈಲು ಸಂಚಾರದ ಅವಧಿಯನ್ನು ಕಡಿಮೆ ಮಾಡಿದೆ.

ಆಗಸ್ಟ್ 8ರಿಂದಲೇ ಜಾರಿಗೆ ಬರುವಂತೆ ಬೆಳಗ್ಗೆ 5 ರಿಂದ 6 ಮತ್ತು ರಾತ್ರಿ 10 ರಿಂದ 11 ಗಂಟೆ ನಡುವಿನ ಅವಧಿಯಲ್ಲಿ ಪ್ರತಿ ರೈಲು ಸಂಚಾರದ ನಡುವೆ ಇದ್ದ 20 ನಿಮಿಷದ ಅಂತರವನ್ನು 15 ನಿಮಿಷಕ್ಕೆ ಬಿಎಂಆರ್‌ಸಿಎಲ್ ಇಳಿಕೆ ಮಾಡಿದೆ.

ಬೈಯಪ್ಪನಹಳ್ಳಿಯಿಂದ ಪ್ರಯಾಣ ಮಾಡಿ, ನಾಗಸಂದ್ರದ ಕಡೆಗೆ ಹೋಗುವ ಮೆಟ್ರೋ ಪ್ರಯಾಣಿಕರಿಗೆ ಹೊಸ ವೇಳಾಪಟ್ಟಿಯ ಕಾರಣ ತೊಂದರೆಯಾಗಿದೆ. ಅವರ ಕಾಯುವ ಅವಧಿ ಜಾಸ್ತಿಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಜತೆಗೆ ಜತೆಗೆ ಇತರೆ ಮಾರ್ಗಗಳಲ್ಲಿಯೂ ಪ್ರಯಾಣಿಕರಿಗೆ ಕಾಯುವ ಕೆಲಸ ಹೆಚ್ಚಾಗಲಿದೆ.

ಪ್ರತಿದಿನ ನಮ್ಮೆ ಮಟ್ರೋದಲ್ಲಿ ಸಂಚಾರ ನಡೆಸುವ ಪ್ರಯಾಣಿಕರ ಸಂಖ್ಯೆ 2.50 ರಿಂದ 3 ಲಕ್ಷ ಆಗಿದೆ. ಕೋವಿಡ್ ಪರಿಸ್ಥಿತಿ ಬಳಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಬಿಎಂಆರ್‌ಸಿಎಲ್‌ಗೆ ಆದಾಯ ಸಹ ಹೆಚ್ಚಾಗುತ್ತಿದೆ.

website developers in mysore