ಕೇರಳದ ಪಾಲಕ್ಕಾಡ್’ನಲ್ಲಿ ‘ಮೆಟ್ರೋ ಮ್ಯಾನ್’ ಶ್ರೀಧರನ್’ಗೆ ಮುನ್ನಡೆ

ಕೊಚ್ಚಿ, ಮೇ 02, 2021 (www.justkannada.in): ಕೇರಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದೆ.

ಕೇರಳ ವಿಧಾನಸಭಾ ಚುನಾವಣೆಮತ ಎಣಿಕೆಯಲ್ಲಿ ಸದ್ಯದ ಮಾಹಿತಿ ಪ್ರಕಾರ ಎಲ್ ಡಿಎಫ್ 89 ಸ್ಥಾನಗಳಲ್ಲಿ , ಯುಡಿಎಫ್ 49 ರಲ್ಲಿ ಮತ್ತು ಎನ್ ಡಿಎ 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ವಿಶೇಷ ಎಂದರೆ ಮೆಟ್ರೋ ಮ್ಯಾನ್ ಶ್ರೀಧರನ್ ಪಾಲಕ್ಕಾಡ್ ನಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಅಸ್ಸಾಂ: ವಿಧಾನಸಭೆ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ 71 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ , ಯುಪಿಎ ಮೈತ್ರಿಕೂಟ 33 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.