ಮೀ ಟೂ ಆರೋಪ ಪ್ರಕರಣ: ನಾನಾ ಪಾಟೇಕರ್ ಗೆ ಕ್ಲೀನ್ ಚಿಟ್ ನೀಡಿದ ನ್ಯಾಯಾಲಯ

ಮುಂಬೈ:ಜೂ-13:(www.justkannada.in) ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ವಿರುದ್ಧದ ಮೀ ಟೂ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ಲೀನ್ ಚಿಟ್ ನೀಡಿದ್ದಾರೆ.

ಬಾಲಿವುಡ್ ನಟಿ ತನುಶ್ರೀ ದತ್ತಾ, ಮೀಟೂ ಅಭಿಯಾನದ ಭಾಗವಾಗಿ ನಾನಾ ಪಾಟೇಕರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಸೂಕ್ತ ಸಾಕ್ಷಾಧಾರಗಳ ಕೊರತೆ ಹಿನ್ನಲೆಯಲ್ಲಿ ನ್ಯಾಯಾಲಯ ಪಾಟೇಕರ್ ಗೆ ಕ್ಲೀನ್ ಚಿಟ್ ನೀಡಿದ್ದು, ಪ್ರಕರಣವನ್ನು ಪೊಲೀಸರು ಕೈಬಿಟ್ಟಿದ್ದಾರೆ.

‘ಹಾರ್ನ್ ಓಕೆ ಪ್ಲೀಸ್’ ಚಿತ್ರೀಕರಣದ ಸೆಟ್‌ನಲ್ಲಿ ನಾನಾ ಪಾಟೇಕರ್ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ನಟಿ ತನುಶ್ರೀ ದತ್ತಾ ವರ್ಷದ ಹಿಂದೆ ಆರೋಪಿಸಿದ್ದರು. ಪಾಟೇಕರ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆದರೆ ಈ ಪ್ರಕರಣದ ವಿಚಾರಣೆ ಭಾಗವಾಗಿ ಮೇಲ್ನೋಟಕ್ಕೆ ಪಾಟೇಕರ್ ತಪ್ಪು ಮಾಡಿದ್ದಾರೆ ಎನ್ನಲು ತಮ್ಮಲ್ಲಿ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಪಾಟೇಕರ್‌ಗೆ ನ್ಯಾಯಾಲಯ ಕ್ಲೀನ್ ಚಿಟ್ ನೀಡಿದೆ.

ಈ ಬಗ್ಗೆ ತನುಶ್ರೀ ಪರ ವಕೀಲರಾದ ಸುಜಯ್ ಮಾಧ್ಯಮಗಳ ಜತೆಗೆ ಮಾತನಾಡುತ್ತಾ, “ಈ ಪ್ರಕರಣದ ವಿಚಾರಣೆಯನ್ನು ಪೊಲೀಸರು ನಡೆಸಿದರು. ಆದರೆ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದು ಪ್ರಕರಣನ್ನು ಮುಚ್ಚಿಹಾಕಿದ್ದಾರೆ. ಆದಕಾರಣ ತನುಶ್ರೀ ಪ್ರೊಟೆಸ್ಟ್ ರಿಪೋರ್ಟನ್ನು ಸಲ್ಲಿಸಬಹುದು. ಈ ಮೂಲಕ ಮೇಲ್ಮನವಿ ಸಲ್ಲಿಸಿ ಇನ್ನಷ್ಟು ಸ್ಪಷ್ಟ ವಿವಾರಣೆ ನಡೆಸುವಂತೆ ನ್ಯಾಯಾಲಯವನ್ನು ವಿನಂತಿಸಿಕೊಳ್ಳುವ ಸಾಧ್ಯತೆಗಳಿವೆ” ಎಂದಿದ್ದಾರೆ.

ಮೀ ಟೂ ಆರೋಪ ಪ್ರಕರಣ: ನಾನಾ ಪಾಟೇಕರ್ ಗೆ ಕ್ಲೀನ್ ಚಿಟ್ ನೀಡಿದ ನ್ಯಾಯಾಲಯ
#MeToo movement: Police closes Nana Patekar’s sexual harassment case filed by Tanushree Dutta