ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ: ಕೇರಳಾ ವಿವಿಯಿಂದ ದೇಶದಲ್ಲೇ ಪ್ರಥಮ ಮಹತ್ವದ ನಿರ್ಧಾರ

Promotion

ಬೆಂಗಳೂರು, ಜನವರಿ 15, 2023 (www.justkannada.in): ಹೆಣ್ಣು ಮಕ್ಕಳಿಗೆ ಮುಟ್ಟಿನ ರಜೆ ನೀಡುವ ಸಂಬಂಧ ಮಹತ್ವದ ನಿಲುವೊಂದನ್ನು ಕೇರಳದ ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯವು ತೆಗೆದುಕೊಂಡಿದೆ.

ಹೆಣ್ಣು ಮಕ್ಕಳು ಮುಟ್ಟಿನ ಸಮಯದಲ್ಲಿ ಅನುಭವಿಸುವ ನೋವು ಹೇಳತೀರದು. ಈ ಹಿನ್ನೆಲೆಯಲ್ಲಿ ಮಹತ್ವದ ನಿಲುವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ತೆಗೆದುಕೊಂಡಿದೆ.

ಪ್ರತಿ ಸೆಮಿಸ್ಟರ್ ನಲ್ಲಿ ಹಾಜರಾತಿ ಕೊರತೆಯಿರುವ ವಿದ್ಯಾರ್ಥಿನಿಯರು 2%ರಷ್ಟು ಹೆಚ್ಚುವರಿ ಹಾಜರಾತಿಯನ್ನು ಮುಟ್ಟಿನ ಪ್ರಯೋಜನಗಳು ಅಡಿಯಲ್ಲಿ ಪಡೆಯಬಹುದು.

ವಿಶ್ವವಿದ್ಯಾನಿಲಯದಲ್ಲಿ ಪಿಹೆಚ್‌ಡಿ ವ್ಯಾಸಂಗ ಮಾಡುತ್ತಿರುವವರು ಸೇರಿದಂತೆ ಎಲ್ಲಾ
ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆಯಬಹುದಾಗಿದೆ.