“ನನಗೆ ನೀಡಿರುವ ಖಾತೆಗಳನ್ನು ನಿಭಾಯಿಸಲು ತೃಪ್ತಿ ಇದೆ” : ಸಚಿವ ಯೋಗೇಶ್ವರ್

ಕೋಲಾರ,ಜನವರಿ,26,2021(www.justkannada.in) : ಮುಖ್ಯಮಂತ್ರಿಗಳು ನನಗೆ ಪ್ರವಾಸೋದ್ಯಮ ಪರಿಸರ ಹಾಗೂ ಜೀವಿಶಾಸ್ತ್ರ ಖಾತೆಯನ್ನು ಕೊಟ್ಟಿದ್ದಾರೆ ನನಗೆ ನೀಡಿರುವ ಖಾತೆಗಳನ್ನು ನಿಭಾಯಿಸಲು ತೃಪ್ತಿ ಇದೆ ಎಂದು ಸಚಿವ ಯೋಗೇಶ್ವರ್ ಹೇಳಿದರು.jkಕೋಲಾರದಲ್ಲಿ ಧ್ವಜಾರೋಹಣ ನಡೆಸಿ ಸುದ್ದಿಗೋಷ್ಡಿಯಲ್ಲಿ ಮಾತನಾಡಿದ ಅವರು, ನಿನ್ನೆ ಸಂಜೆ ಮುಖ್ಯಮಂತ್ರಿಗಳು ತಮ್ಮ ಅಧಿಕೃತ ನಿವಾಸ ಕಾವೇರಿಗೆ ನನ್ನನ್ನ ಕರೆಸಿದ್ದರು. ಈ ಸಂದರ್ಭದಲ್ಲಿ ತಮ್ಮ ಖಾತೆ ಬದಲಾವಣೆ ಮಾಡಿ ಬೇರೆ ಖಾತೆಗಳನ್ನು ನೀಡುವುದಾಗಿ ಹೇಳಿದರು. ತಮ್ಮ ನಿರ್ಧಾರಕ್ಕೆ ತಾವು ಬದ್ದರಾಗಿರುವುದಾಗಿ ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾಗಿ ಹೇಳಿದರು.

ಸಚಿವರಿಗೆ ಖಾತೆಗಳನ್ನು ಹಂಚುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು, ಸಂಪುಟವನ್ನು ಸರಿದೂಗಿಸಬೇಕಾದರೆ ಹಲವಾರು ಒತ್ತಡಗಳು ಇರುತ್ತವೆ. ಹೀಗಾಗಿ, ಮುಖ್ಯಮಂತ್ರಿಗಳು ಆಡಳಿತಾತ್ಮಕ ದೃಷ್ಟಿಯಿಂದ ಖಾತೆಗಳನ್ನು ಹಂಚಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ತೆಗೆದುಕೊಳ್ಳಲು ರಾಮನಗರ ಜಿಲ್ಲೆಯಾದರೇನು?, ಕೋಲಾರ ಜಿಲ್ಲೆಯಾದರೇನು?, ಎಲ್ಲಾ ರಾಜ್ಯದ ಜಿಲ್ಲೆಗಳುತ್ತಾನೆ. ಮುಖ್ಯಮಂತ್ರಿಗಳು ನೀಡಿದ ಜಿಲ್ಲೆಯನ್ನು ತೆಗೆದುಕೊಂಡಿದ್ದೇನೆ. ಇನ್ನು ಅಧಿಕೃತವಾಗಿ ಉಸ್ತುವಾರಿ ಜಿಲ್ಲೆಯನ್ನು ನೀಡಿಲ್ಲ. ಒಂದು ವೇಳೆ ಕೋಲಾರ ಜಿಲ್ಲಾ ಉಸ್ತುವಾರಿ ನೀಡಿದರೆ ಈ ಸರ್ಕಾರದ ಅವಧಿ ಮುಗಿಯುವವರೆಗೂ ನಾನೇ ಮುಂದುವರೆಯುತ್ತೇನೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಟ್ರ್ಯಾಕ್ಟರ್ ಗಳ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ. ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆಯಾಗುವ ಕಡೆ ಮಾತ್ರ ಟ್ರ್ಯಾಕ್ಟರ್ ಗಳನ್ನು ತಡೆದಿರಬಹುದು. ಪ್ರಜಾಪ್ರಭುತ್ವದಲ್ಲಿ  ಪ್ರತಿಭಟನೆಗಳನ್ನು ನಡೆಸಲು ಎಲ್ಲರಿಗೂ ಅವಕಾಶವಿದೆ. ಅದೇ ರೀತಿ ರೈತರಿಗೂ ಸಹ ಪ್ರತಿಭಟನೆ ನಡೆಸುವ ಅವಕಾಶವಿದೆ ಎಂದು ಉತ್ತರಿಸಿದರು.

ಕೋಲಾರ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಹಾಗೂ ಇತರ ಕ್ಷೇತ್ರಗಳ ತಜ್ಞರ ಅಭಿಪ್ರಾಯ ಪಡೆದು ಜಿಲ್ಲೆಯನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿ ಮಾಡಲಾಗುವುದು. ಜನಸಾಮಾನ್ಯರು ಇದೀಗ ರಜಾದಿನಗಳಲ್ಲಿ ಮೈಸೂರು ಕಡೆ ಹೆಚ್ಚು ಪ್ರವಾಸ ಮಾಡುತ್ತಾರೆ. ಹೀಗಾಗಿ, ಕೋಲಾರ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಿದರೆ ಜನರು ಬರುತ್ತಾರೆ. ನೀರಾವರಿ ಕ್ಷೇತ್ರಕ್ಕೆ ನನ್ನ ಪ್ರಥಮ ಆದ್ಯತೆ ಮುಂದಿನ ದಿನಗಳಲ್ಲಿ ಎತ್ತಿನಹೊಳೆ ಯೋಜನೆಯ ಕಾಮಗಾರಿಯನ್ನು ಚುರುಕುಗೊಳಿಸಿ ಕೋಲಾರ ಜಿಲ್ಲೆಯ ಕೆರೆಗಳಿಗೆ ನೀರು ಒದಗಿಸುವುದಾಗಿ ತಿಳಿಸಿದರು.me,Given,Accounts,cope,satisfied,Minister,Yogeshwarಕಳೆದವಾರ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಜೊತೆ ಸಕಲೇಶಪುರಕ್ಕೆ ತೆರಳಿ ಎತ್ತಿನಹೊಳೆ ಯೋಜನೆ  ವೀಕ್ಷಿಸಿ ಬಂದಿರುವುದಾಗಿ. ಕೋಲಾರದಲ್ಲಿ ಬಾವಲಿಗಳ ಸಂತತಿ ವಿನಾಶದಲ್ಲಿ ಇದ್ದು ಅವುಗಳ ಸಂತತಿ ಮುಂದುವರೆಯಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

key words : me-Given-Accounts-cope-satisfied-Minister- Yogeshwar