ಜೂನ್ 25ರಂದು ಮೈಸೂರಲ್ಲಿ ಮೆಗಾ ಲೋಕ ಅದಾಲತ್

ಮೈಸೂರು, ಮೇ 27, 2022 (www.justkannada.in):  ನಗರದಲ್ಲಿ ಜೂನ್ 25 ರಂದು ಮೆಗಾ ಲೋಕ್ ಅದಾಲತ್ ಆಯೋಜಿಸಲಾಗಿದೆ.

ಜಿಲ್ಲಾ‌ ಕಾನೂನು ಸೇವಗಳ ಪ್ರಾಧಿಕಾರದಿಂದದ ಲೋಕ್ ಅದಾಲತ್ ಆಯೋಜನೆ ಮಾಡಲಾಗಿದೆ. ರಾಜಿ ಸಂಧಾನದ ಮೂಲಕ ನ್ಯಾಯಲಯದಲ್ಲಿ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳಕು ಅವಕಾಶ ಕಲ್ಪಿಸಲಾಗಿದೆ.

ರಾಜ್ಯದಲ್ಲಿ ಲೋಕ ಅದಾಲತ್ ಮೂಲಕ ಅತಿ ಹೆಚ್ವಿನ ಪ್ರಕರಣಗಳು ಇತ್ಯರ್ಥ ಮಾಡಲಾಗುತ್ತಿತ್ತು.ಈ ಹಿಂದೆ ಎರಡು ಲೋಕ್ ಅದಾಲತ್ ನಲ್ಲಿ ಮೈಸೂರು ನ್ಯಾಯಾಲಯ ಮೊದಲ ಸ್ಥಾನ ಪಡೆದುಕೊಂಡಿತ್ತು. ಈ ಬಾರಿಯೂ ಹೆಚ್ಚಿನ ಪ್ರಕರಣ ರಾಜೀ ಸಂಧಾನ ಮೂಲಕ ಇತ್ಯರ್ಥ ಮಾಡಲು ಪ್ರಯತ್ನಿಸಲಾಗುವುದು‌. ಒಟ್ಟು 109665 ಇತ್ಯರ್ಥವಾಗದ ಪ್ರಕರಣ ಇವೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಂ.ಎಲ್ ರಘುನಾಥ್ ಮಾಹಿತಿ ಮಾಹಿತಿ‌ ನೀಡಿದರು.

ಲೋಕ್ ಅದಾಲತ್ ಗೆವಕೀಲ ಸಂಘದಿಂದಲೂ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ರಾಜಿಯಾಗಬಲ್ಲ ಅಪಾರಾದ ಪ್ರಕರಣಗಳು. ಬ್ಯಾಂಕ್ ವಸೂಲಾತಿ, ಮೋಟಾರು ವಾಹನ ಅಪಘಾತ ಪ್ರಕರಣಗಳು ಕೌಟುಂಬಿಕ ಪ್ರಕರಣಗಳು ಸೇರಿದ ಹಲವು ಪ್ರಕರಣಗಳ ಇತ್ಯರ್ಥ ಮಾಡಲಾಗುವುದು.
ಕಕ್ಷೀದಾರರು ಲೋಕ್ ಅದಾಲತ್ ಮೂಲಕ ರಾಜೀಸಂದಾನ ಮಾಡಿಕೊಂಡು ಇತ್ಯರ್ಥ ಮಾಡಿಕೊಳ್ಳಬಹುದು ಎಂದು ಸುದ್ದಿಗೋಷ್ಠಿಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಂ.ಎಲ್ ರಘುನಾಥ್ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯದೀಶ ದೇವರಾಜ್ ಭೂತೆ, ವಕೀಲರ ಸಂಘದ ಅಧ್ಯಕ್ಷ ಮಹದೇವ ಸ್ವಾಮಿ, ಕಾರ್ಯದರ್ಶಿ ಉಮೇಶ್ ಇದ್ದರು.