ಇಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ: ನೀರು ಬಿಡುವಂತೆ ಸೂಚಿಸುವ ಸಾಧ್ಯತೆ…

ನವದೆಹಲಿ,ಆ,8,2019(www.justkannada.in): ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಇಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಲಿದ್ದು ತಮಿಳುನಾಡು ನೀರು ಬಿಡುವಮಥೆ ಬೇಡಿಕೆ ಇಡಲಿದೆ.

ದೆಹಲಿಯ ಜಲ ಆಯೋಗದ ಕಚೇರಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆನಡೆಯಲಿದ್ದು, ಸಭೆಯಲ್ಲಿ 40.43 ಟಿಎಂಸಿ ನೀರು ಬಿಡುವಂತೆ ತಮಿಳುನಾಡು ಬೇಡಿಕೆ ಇಡಲಿದೆ. ಜೂನ್ ತಿಂಗಳ 9.19 ಟಿಎಂಸಿ ಮತ್ತು  ಜುಲೈ ತಿಂಗಳ 31.24 ಟಿಎಂಸಿ ನೀರಿಗೆ ಬೇಡಿಕೆ ಇಡಲಿದೆ ಎನ್ನಲಾಗುತ್ತಿದೆ.  ಜೊತೆಗೆ ಆಗಸ್ಟ್ ತಿಂಗಳಲ್ಲಿ ಬಿಡಬೇಕಾದ ನೀರನ್ನೂ ಸಹ ತಮಿಳುನಾಡು ಕೇಳುವ ಸಾಧ್ಯತೆ ಇದೆ.

ಕಳೆದ ಬಾರಿ ನಡೆದ ಸಭೆಯಲ್ಲಿ ನೀರಿಗಾಗಿ ತಮಿಳುನಾಡು ಸರ್ಕಾರ ಆಗ್ರಹಿಸಿತ್ತು. ಆದರೆ ರಾಜ್ಯದಲ್ಲಿ ಉತ್ತಮ ಮಳೆಯಾಗಿಲ್ಲ ರಾಜ್ಯದಲ್ಲೇ ನೀರಿಲ್ಲ ಎಂದು ಕರ್ನಾಟಕ ಸಭೆಯಲ್ಲಿ ಮನವರಿಕೆ ಮಾಡಿತ್ತು. ಹೀಗಾಗಿ ಪ್ರಾಧಿಕಾರ ಮಳೆಯಾದರೆ ಮಾತ್ರ ನೀರು ಬಿಡಿ ಎಂದು  ಕರ್ನಾಟಕಕ್ಕೆ ಸೂಚಿಸಿತ್ತು.

ಇದೀಗ ರಾಜ್ಯದಲ್ಲಿ ಉತ್ತಮಮಳೆಯಾಗುತ್ತಿದ್ದು  ಈ ಹಿನ್ನೆಲೆ ತಮಿಳುನಾಡಿಗೆ ನೀರು ಬಿಡುವಂತೆ  ಸಭೆಯಲ್ಲಿ ಪ್ರಾಧಿಕಾರ ಸೂಚಿಸುವ ಸಾಧ್ಯತೆ ಇದೆ.

Key words: Meeting -caveri -Water Management -Authority –today- Possibility –Release -water