ಮೈಸೂರಿನಲ್ಲಿ ಆ.29 ರಂದು “Meet the Champion” ವಿಶೇಷ ಕಾರ್ಯಕ್ರಮ: ಮುಖ್ಯ ಅತಿಥಿಯಾಗಿ ನಿರಂಜನ್ ಮುಕುಂದನ್.

kannada t-shirts

ಮೈಸೂರು,ಆಗಸ್ಟ್,26,2022(www.justkannada.in): ಮೇಜರ್ ಧ್ಯಾನ್ ಚಂದ್ ಸ್ಮರಣಾರ್ಥವಾಗಿ ಕೇಂದ್ರ ಸರ್ಕಾರದ ಕ್ರೀಡಾ ಮತ್ತು ಯುವಜನ ವ್ಯವಹಾರ ವಿಭಾಗವು ದಿನಾಂಕ 29ನೇ ಆಗಸ್ಟ್ 2022ರಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಹಮ್ಮಿಕೊಂಡು ಆಚರಿಸುತ್ತಿದೆ.

ಇದರ ಅಂಗವಾಗಿ “Meet the Champion” ಎಂಬ ವಿಶೇಷ ಕಾರ್ಯಕ್ರಮವನ್ನು ಭಾರತೀಯ ಕ್ರೀಡಾ ಪ್ರಾಧಿಕಾರವು ಆಯೋಜಿಸಿದೆ. ಕಾರ್ಯಕ್ರಮವು ಭಾರತದಾದ್ಯಂತ 25 ಸ್ಥಳಗಳಲ್ಲಿ ಒಂದೇ ದಿನ ಏಕ ಕಾಲದಲ್ಲಿ ಈ ಕಾರ್ಯಕ್ರಮವು ಬೆಳಿಗ್ಗೆ 10.00 ಘಂಟೆಯಿಂದ 11.30 ಘಂಟೆಯವರೆಗೆ ನಡೆಯಲಿದೆ. ಕ್ರೀಡಾ ಸಂಸ್ಕೃತಿಯನ್ನು ಯುವಜನತೆಯಲ್ಲಿ ಪ್ರೋತ್ಸಾಹಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ವ್ಯಾಪಕವಾಗಿ ಆಚರಿಸಲಾಗುತ್ತಿದೆ.

ಕರ್ನಾಟಕದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲು ಒಂದೇ ಒಂದು ಸ್ಥಳವನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಅದು ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆ, ಯಾದವಗಿರಿ. ಚ್ಯಾಂಪಿಯನ್ ಕ್ರೀಡಾ ಪಟು ಮತ್ತು ಅಂತರ ರಾಷ್ಟ್ರೀಯ ಪ್ಯಾರಾ ಈಜುಗಾರರಾದ ನಿರಂಜನ್ ಮುಕುಂದನ್ ಅವರು 29  ಆಗಸ್ಟ್ 2022 (ಸೋಮವಾರ) ನಡೆಯಲಿರುವ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ.

ಚಾಂಪಿಯನ್ ಪ್ಯಾರಾ ಈಜುಗಾರರಾದ ನಿರಂಜನ್ ಮುಕುಂದನ್ ಅವರನ್ನು ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ವಿದ್ಯಾರ್ಥಿಗಳು ಗೌರವಪೂರ್ವಕವಾಗಿ ಸ್ವಾಗತಿಸುವರು ಮತ್ತು ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ಈಜುಕೊಳದ ಬಳಿ ಈ ಕಾರ್ಯಕ್ರಮವು ನಡೆಯಲಿದ್ದು, ವಿದ್ಯಾಥಿಗಳು ಹಲವು ಈಜು ಕೌಶಲ್ಯಗಳ ಪ್ರದರ್ಶನ ನೀಡಲಿದ್ದಾರೆ. ಇದಾದ ನಂತರ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ವಿದ್ಯಾರ್ಥಿಗಳನ್ನು ಕುರಿತು ಭಾಷಣ ಮಾಡಿ, ಸಂವಾದ ನಡೆಸಲಿದ್ದಾರೆ.

ಈ ಕಾರ್ಯಕ್ರಮದ ಅಂಗವಾಗಿ ಒಂದು ಕ್ರೀಡಾ ರಸ ಪ್ರಶ್ನಾವಳಿ (Sports quiz) ಅನ್ನು ಆಯೋಜಿಸಲಾಗಿದೆ. ಒಟ್ಟು ಐದು ವಿಜೇತ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳ ಹಸ್ತಾಕ್ಷರವನ್ನು ಹೊಂದಿರುವ ಒಂದು ಒಲಂಪಿಕ್‌ ಜರ್ಸಿಯನ್ನು ಬಹುಮಾನವಾಗಿ ನೀಡಲಾಗುತ್ತಿದೆ.

Key words: “Meet the Champion- special program – Mysore- Niranjan Mukundan

website developers in mysore