ಮ್ಯಾಚ್ ಫಿಕ್ಸಿಂಗ್: ಬಾಂಗ್ಲಾ ಕ್ರಿಕೆಟಿಗ ಶಕೀಬ್ ಅಲ್ ಹಸನ್‍ಗೆ 2 ವರ್ಷ ನಿಷೇಧ

ಬೆಂಗಳೂರು, ಅಕ್ಟೋಬರ್ 30, 2019 (www.justkannada.in): ಮ್ಯಾಚ್ ಫಿಕ್ಸಿಂಗ್ ಕಳಂಕ ಹೊತ್ತ ಬಾಂಗ್ಲಾದೇಶ ಸ್ಟಾರ್ ಕ್ರಿಕೆಟಿಗ ಶಕೀಬ್ ಅಲ್ ಹಸನ್‍ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ 2 ವರ್ಷಗಳ ನಿಷೇಧ ಹೇರಿದೆ.

ಬುಕಿಗಳು ಶಕೀಬ್ ಜತೆ ಹಲವು ಬಾರಿ ವ್ಯಾಟ್ಸಪ್ ಸಂದೇಶ ವಿನಿಮಯ ಮಾಡಿಕೊಂಡಿದ್ದರು ಎಂಬುದು ಬಹಿರಂಗವಾದ ಹಿನ್ನಲೆಯಲ್ಲಿ ಐಸಿಸಿ ಈ ಕ್ರಮ ಕೈಗೊಂಡಿದೆ.

ಭಾರತ ಪ್ರವಾಸಕ್ಕೆ ಮೊದಲು ಇದು ಬಾಂಗ್ಲಾದೇಶ ಕ್ರಿಕೆಟ್‍ಗೆ ದೊಡ್ಡ ಹೊಡೆತವಾಗಲಿದೆ. ಅದಕ್ಕಿಂತಲೂ ಹೆಚ್ಚಾಗಿ ಶಕೀಬ್ ಬಾಂಗ್ಲಾದ ಪ್ರಮುಖ ಆಟಗಾರರಾಗಿದ್ದಾರೆ.