ಕೃಷ್ಣಮೂರ್ತಿಪುರಂ ರಾಮಮಂದಿರದಲ್ಲಿ ಸಾಮೂಹಿಕವಾಗಿ ಗಾಯತ್ರಿ ಜಪ, ಸಂಧ್ಯಾವಂದನೆ

ಬೆಂಗಳೂರು, ಆಗಸ್ಟ್ 22, 2021 (www.justkannada.in): ಹೆಬ್ಬಾರ್ ಶ್ರೀ ವೈಷ್ಣವಸಭಾ ವತಿಯಿಂದ ಕೃಷ್ಣಮೂರ್ತಿಪುರಂ ಶ್ರೀ ರಾಮಮಂದಿರದಲ್ಲಿ ಯಜುರ್ವೇದದ ಯಜುರ್ ಉಪಾಕರ್ಮವನ್ನು ಸಾಮೂಹಿಕವಾಗಿ ಬ್ರಾಹ್ಮಣರು ಯಜ್ಞೋಪವೀತಂ ಜನಿವಾರ ಬದಲಾಯಿಸಿಕೊಂಡು ಸಂಧ್ಯಾವಂದನೆ, ಗಾಯತ್ರಿ ಜಪ, ಹೋಮ ನೆರವೇರಿಸಿ ಆಚರಿಸಿದರು.

ಉಪಾಕರ್ಮದ ಅಂಗವಾಗಿ ಜನಿವಾರ ಧಾರಣೆ ಮಾಡಿದ  ಸಮಾಜದ ಬ್ರಾಹ್ಮಣರಿಗೆ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಸಂಧ್ಯಾವಂದನೆ ಪುಸ್ತಕ ಹಾಗೂ ಭಗವದ್ಗೀತೆ ಪುಸ್ತಕ ನೀಡಿ ಯಜುರ್ ಉಪಾಕರ್ಮ ಶುಭಾಶಯ ಕೋರಲಾಯಿತು.

ಈ ವೇಳೆ ಮಾತನಾಡಿದ ಹೆಬ್ಬಾರ್ ಶ್ರೀ ವೈಷ್ಣವ ಸಭಾದ ತಿರುಮಲಾಚಾರ್,  ಮಾನವ ಜನ್ಮ ದೊಡ್ಡದು, ಅದು ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ಎಂಬ ದಾಸರ ವಾಣಿಯಂತೆ ಜೀವನ ಅಂತ್ಯದವರೆಗೂ ನಾವೆಲ್ಲ ಸತ್ಕರ್ಮಗಳಲ್ಲಿ ತೊಡಗಿಸಿಕೊಳ್ಳಬೇಕು. ಮತ್ತೊಬ್ಬರಿಗೆ ಕೇಡನ್ನು ಬಯಸದೆ ಉತ್ತಮ ವ್ಯಕ್ತಿಯಾಗಬೇಕು ಎಂದು ಹೇಳಿದರು.

ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ,ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಕಡಕೊಳ ಜಗದೀಶ್ , ಪ್ರಶಾಂತ್  ಭರದ್ವಾಜ್ , ಹೆಬ್ಬಾರ್ ಶ್ರೀ ವೈಷ್ಣವ ಸಭಾದ ತಿರುಮಲಾಚಾರ್,ರಂಗನ್ ಕೆ ಅಯ್ಯಂಗಾರ್ ,ವೆಂಕಟೇಶ್, ಡಾ. ಕಮಲಾ ರಾಮನ್, ನಿರ್ಮಲ, ಮಾಧುರಾವ್, ವೆಂಕಟೇಶ್, ರಂಗನಾಥ್ ಕೇಶವ ಪ್ರಸಾದ್, ರಾಮಶೇಷನ್ ,ಎಂ ಆರ್ ವೆಂಕಟೇಶ್  ಹಾಜರಿದ್ದರು.