ಮಾಸ್ಕ್ ಡೇ ಕಾರ್ಯಕ್ರಮ: ಪಾದಯಾತ್ರೆಯಲ್ಲಿ ಸಿಎಂ ಬಿಎಸ್ ವೈ, ನಟ ಪುನೀತ್ ರಾಜ್ ಕುಮಾರ್ ಸೇರಿ ಹಲವು ಗಣ್ಯರು ಭಾಗಿ….

kannada t-shirts

ಬೆಂಗಳೂರು, ಜೂ,18,2020(www.justkannada.in):  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಬಿ.ಬಿ.ಎಂ.ಪಿ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಲಾದ  ಮಾಸ್ಕ್ ದಿನದ ಪ್ರಯುಕ್ತ  ಹಮ್ಮಿಕೊಂಡಿದ್ದ  ಪಾದಯಾತ್ರೆಗೆ ಚಾಲನೆ  ನೀಡಿದರು.

ಮಾಸ್ಕ್ ಡೇ ಪ್ರಯುಕ್ತ ವಿಧಾನಸೌಧದಿಂದ ಕಬ್ಬನ್ ಪಾರ್ಕ್ ವರೆಗೆ ಪಾದಯಾತ್ರೆ ನಡೆಯಿತು. ಪಾದಯಾತ್ರೆಯಲ್ಲಿ  ಡಿಸಿಎಂ ಗೋವಿಂದ ಕಾರಜೋಳ ಹಾಗೂ ಅಶ್ವತ್ಥ್ ನಾರಾಯಣ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್,  ಕಂದಾಯ ಸಚಿವ ಆರ್.ಅಶೋಕ್, ಸಂಸದ ಪಿ.ಸಿ.ಮೋಹನ್ ಹಾಗೂ ತೇಜಸ್ವಿ ಸೂರ್ಯ, ಖ್ಯಾತ ಕ್ರಿಕೆಟ್ ಪಟು ಅನಿಲ್ ಕುಂಬ್ಳೆ, ಚಿತ್ರನಟ ಪುನೀತ್ ರಾಜ್ ಕುಮಾರ್,  ನಟಿ ರಾಗಿಣಿ ದ್ವಿವೇದಿ ಮೊದಲಾದವರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ  ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ,  ಮಾಸ್ಕ್ ಡೇ ಉದ್ದೇಶ ಜಾಗೃತಿ ಮೂಡಿಸುವುದಾಗಿದೆ. ರಾಜ್ಯಾದ್ಯಂತ ಇವತ್ತು ಮಾಸ್ಕ್ ಡೇ ಆಚರಿಸಲಾಯ್ತು. ಸಚಿವರು, ಕ್ರೀಡೆ, ಸಿನಿಮಾ ಗಣ್ಯರು ಭಾಗವಹಿಸಿದ್ರು. ಮಾಸ್ಕ್ ಡೇ ಮುಂದೆ ಯಾವಾಗ ಆಚರಿಸಬೇಕೆಂದು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಸಧ್ಯಕ್ಕೆ ಇವತ್ತು ಮಾಸ್ಕ್ ಡೇ ಮಾಡಿದೀವಿ. ಮುಂದೆ ಯಾವಾಗ ಅಂತ ನೋಡ್ತೇವೆ ಎಂದು ಸಿಎಂ ಬಿಎಸ್ ವೈ ತಿಳಿಸಿದರು.mask-day-bangalore-cm-bs-yeddyurappa-actor-punith-raj-kumar-ragini

ಇದೇ ವೇಳೆ ಸಿನಿಮಾ ಶೂಟಿಂಗ್ ಗೆ ಅನುಮತಿ ವಿಚಾರ ಕುರಿತು ಪ್ರತಿಕ್ರಿಯಿಸಿದ ನಟ ಪುನೀತ್ ರಾಜ್ ಕುಮಾರ್, ಸರ್ಕಾರದಿಂದ ಸೀರಿಯಲ್ಸ್ ಮತ್ತು ಸಿನಿಮಾ ಶೂಟಿಂಗ್ ಗೆ ಅನುಮತಿ ಸಿಕ್ಕಿದೆ. ಆದಷ್ಟು ಬೇಗ ಶೂಟಿಂಗ್ ಗಳು ಶುರುವಾಗುತ್ತವೆ. ಆದರೆ ಸಿನಿಮಾ ಥಿಯೇಟರ್ ಗಳಿಗೂ ಆದಷ್ಟು ಬೇಗ ಅನುಮತಿ ಕೊಡಲಿ ಎಂದು ಮನವಿ ಮಾಡಿದರು.

ಮಾಸ್ಕ್ ಬದುಕಿನ ಭಾಗವಾಗಬೇಕು- ನಟಿ ರಾಗಿಣಿ..

ಇದೇ ವೇಳೆ ಮಾತನಾಡಿದ ನಟಿ ರಾಗಿಣಿ, ಜನ ಮಾಸ್ಕ್, ಸಾಮಾಜಿಕ ಅಂತರ ಪಾಲನೆ ಕಮ್ಮಿ ಮಾಡಿದ್ದಾರೆ. ಎಲ್ಲರೂ ಸೀರಿಯಸ್ಸಾಗಿ ಮಾಸ್ಕ್ ಹಾಕಿಕೊಳ್ಳಬೇಕು, ಸಾಮಾಜಿಕ ಅಂತರ ಪಾಲಿಸಬೇಕು. ಹೋಮ್ ಮೇಡ್ ಮಾಸ್ಕ್ ಉತ್ತಮ. ಮಾಸ್ಕ್ ಬದುಕಿನ ಭಾಗವಾಗಬೇಕು. ಮಾಸ್ಕ್ ಹಾಕೋದ್ರಿಂದ ನಮಗೂ ಒಳ್ಳೇದು ಬೇರೆಯವರಿಗೂ ಒಳ್ಳೇದು ಎಂದು ನುಡಿದರು.

Key words: Mask Day –bangalore-CM BS Yeddyurappa- actor- Punith Raj Kumar -Ragini

website developers in mysore