ಇನ್ಮುಂದೆ ಮದುವೆಗೆ ಎಂಟ್ರಿಯಾಗ್ತಾರೆ ಮಾರ್ಷಲ್ಸ್: ಮಾಸ್ಕ್ ಹಾಕಿಲ್ಲವೆಂದ್ರೆ ಸ್ಥಳದಲ್ಲೇ ದಂಡ ಫಿಕ್ಸ್- ಸಚಿವ ಸುಧಾಕರ್ ಎಚ್ಚರಿಕೆ…

ಬೆಂಗಳೂರು,ಫೆಬ್ರವರಿ,22,2021(www.justkannada.in): ರಾಜ್ಯದಲ್ಲಿ ಸಭೆ, ಸಮಾರಂಭ, ಸಮಾವೇಶಗಳಲ್ಲಿ ಹೆಚ್ಚಿನ ಜನರು ಸೇರುತ್ತಾ ಇದ್ದಾರೆ. ಮಾಸ್ಕ್ ಹಾಕುವುದನ್ನೇ ಬಿಟ್ಟಿದ್ದಾರೆ.  ಜನ, ವಿಐಪಿ, ವಿವಿಐಪಿಗಳು ಮಾಸ್ಕ್ ಹಾಕ್ತಿಲ್ಲ. ಇದು ನಿಜಕ್ಕೂ ಅಪಾಯಕಾರಿ. ಹೀಗಾಗಿ ಮದುವೆ ಸಮಾರಂಭಕ್ಕೆ ಮಾರ್ಷಲ್ ಹಾಕ್ತೇವೆ ಎಂದು ಆರೋಗ್ಯ  ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್,  ಡಿಸಿ, ಎಸ್ಪಿ, ಸಿಇಒ ,ಆರೋಗ್ಯಾಧಿಕಾರಿಗಳ ಜೊತೆ ಸಭೆ ನಡೆಲಾಗಿದೆ. ಇವರ ಜೊತೆ ವಿಡಿಯೋ ಸಂವಾದವನ್ನ ಮಾಡಿದ್ದೇವೆ. ಕೇರಳ, ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚಾಗ್ತಿದೆ. ಹೀಗಾಗಿ ಗಡಿಯಲ್ಲಿ ಮತ್ತಷ್ಟು ನಿಗಾ ವಹಿಸಿದ್ದೇವೆ. ಆರ್ ಟಿಪಿಸಿಆರ್ ಟೆಸ್ಟ್ ಮಾಡಲಾಗುತ್ತಿದೆಯೇ. ಯಾವ ರೀತಿ ಟೆಸ್ಟ್ ನಡೆದಿದೆ, ಪ್ರಮಾಣ ಇದರ ಬಗ್ಗೆ ಚರ್ಚೆಯಾಗಿದೆ ಎಂದರು.

2 ಲಕ್ಷ 90 ಸಾವಿರ ಸಿಬ್ಬಂದಿಗಳಿಗೆ ಲಸಿಕೆ ನೀಡಲಾಗಿದೆ. ಕಂದಾಯ, ಗ್ರಾಮೀಣಾಭಿವೃದ್ಧಿ, ಗೃಹ, ನಗರಾಭಿವೃದ್ಧಿ ಇಲಾಖೆ ಸಿಬ್ಬಂದಿಗೆ ಆರೋಗ್ಯ ಇಲಾಖೆಯಲ್ಲಿ 4 ಲಕ್ಷದ 23 ಸಾವಿರ ಜನರಿಗೆ ಮೊದಲ ಹಂತದ ಡೋಸ್ ಕೊಟ್ಟಿದ್ದೇವೆ. ನಾವು 8 ಲಕ್ಷ ಗುರಿಯನ್ನ ಇಟ್ಟುಕೊಂಡಿದ್ದೆವು. ಲಸಿಕೆಯನ್ನ ಕೊಡುವ ಗುರಿ ಮುಟ್ಟುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇವೆ. ನಾಳೆ, ನಾಡಿದ್ದು ಫ್ರಂಟ್ ಲೈನ್ ವರ್ಕರ್ಸ್ ಲಸಿಕೆ ಪಡೆದುಕೊಳ್ಳಬೇಕು ಎಂದರು.

ಪ್ರತಿ ವಿವಾಹ ಕಾರ್ಯಕ್ರಮಕ್ಕೂ ಓರ್ವ ಮಾರ್ಷಲ್ ನೇಮಕ…

ಈಗಾಗಲೇ ಸಮಾವೇಶ, ಜಾತ್ರೆಗಳು ಹೆಚ್ಚಾಗ್ತಿವೆ. ನಮ್ಮ ತಾಂತ್ರಿಕ ಸಮಿತಿ ಸಲಹೆಗೆ ವಿರುದ್ಧವಾಗಿ ನಡೆದಿದೆ. ಹೆಚ್ಚಿನ ಜನರು ಸೇರ್ತಿದ್ದಾರೆ. ಹೀಗಾಗಿ ನಾವು ಕಠಿಣ ಕ್ರಮಕ್ಕೆ ನಿರ್ಧರಿಸಿದ್ದೇವೆ. ಪ್ರತಿ ವಿವಾಹ ಕಾರ್ಯಕ್ರಮಕ್ಕೂ ಓರ್ವ ಮಾರ್ಷಲ್ ನೇಮಕ ಮಾಡಲಾಗುತ್ತದೆ. ಮಾಸ್ಕಾ ಹಾಕಿದ್ದಾರಾ ಇಲ್ವಾ ಅನ್ನೋದನ್ನ ಪತ್ತೆ ಹಂಚಿ ದಂಡ ವಿಧಿಸಲಿದ್ದಾರೆ. ಸ್ಥಳದಲ್ಲೇ ಮಾಸ್ಕ್ ಗೆ ದಂಡ ವಸೂಲಿ ಮಾಡಲಾಗುತ್ತೆ. ಮದುವೆ ಆಯೋಜಕರ ಮೇಲೂ ಫೈನ್ ಬೀಳುತ್ತೆ. ಇಂದು ಆರೋಗ್ಯ ಇಲಾಖೆಯಿಂದ ಈ ಬಗ್ಗೆ ಸುತ್ತೋಲೆ ಪ್ರಕಟ ಮಾಡಲಾಗುತ್ತದೆ ಎಂದು ಸಚಿವ ಸುಧಾಕರ್ ತಿಳಿಸಿದರು.Marshals –Marriage-mask -fine -fix -Minister -Sudhakar

ಸಭೆ,ಸಮಾರಂಭ,ಸಮಾವೇಶದಲ್ಲಿ ಹೆಚ್ಚಿನ ಜನ ಸೇರದಂತೆ ಮುಂಜಾಗ್ರತೆ ತೆಗೆದುಕೊಳ್ಳಲೇಬೇಕು. ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ಮಾಡಿದ್ದಾರೆ. ಎಂಟು ದಿನಗಳ ಕಾಲ ಲಾಕ್ ಡೌನ್ ಘೋಷಿಸಿದ್ದಾರೆ. ಸಿಎಂ ಕೂಡ ಸೋಂಕಿನ ನಿಯಂತ್ರಣಕ್ಕೆ ಒತ್ತು ಕೊಟ್ಟಿದ್ದಾರೆ. ಸಿಎಂ ಕೂಡ ವಿಡಿಯೊ ಕಾನ್ಫರೆನ್ಸ್ ಮಾಡಲಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಲಸಿಕೆ ಕೊಡುವುದರಲ್ಲಿ ಹಿಂದಿದ್ದೇವೆ. ಆಯುಕ್ತರಿಗೆ ಈ ಬಗ್ಗೆ ಸೂಚನೆ ಕೊಟ್ಟಿದ್ದೇವೆ ಎಂದು ಸಚಿವ ಸುಧಾಕರ್ ತಿಳಿಸಿದರು.

ಕಲಬುರಗಿ ಶೇ.1.37%  ಪಾಸಿಟೀವ್, ಬೆಂಗಳೂರು ನಗರ 1.2 % ಪಾಸಿಟೀವ್ ಪ್ರಮಾಣವಿದೆ. ಹೀಗಾಗಿ ಟೆಸ್ಟ್ ಪ್ರಮಾಣ ಹೆಚ್ಚಳ ಮಾಡ್ತೇವೆ. ಸೋಂಕಿತರನ್ನ ಪತ್ತೆ ಮಾಡಿ ಚಿಕಿತ್ಸೆ ನೀಡಬೇಕಿದೆ ಎಂದರು.

Key words: Marshals –Marriage-mask -fine -fix -Minister -Sudhakar