ಅವರು ಸಹ ನಮ್ಮ ಕನ್ನಡಿಗರೇ : ಸಮುದಾಯದ ಬೇಡಿಕೆಯಂತೆ ನಿಗಮ ರಚನೆ- ಸಚಿವ ಎಸ್.ಟಿ ಸೋಮಶೇಖರ್…

ಹೊಸಪೇಟೆ,ನವೆಂಬರ್,19,2020(www.justkannada.in):  ಮರಾಠಿ ಗಡಿ-ಭಾಷೆ ವಿಷಯ ಬೇರೆ, ಕರ್ನಾಟಕದಲ್ಲಿ ಅನೇಕ ಜನ ಮರಾಠಿಗರು ವಾಸವಾಗಿದ್ದಾರೆ. ಇಲ್ಲಿಯೇ ಹುಟ್ಟಿ, ಬೆಳದವರಿದ್ದಾರೆ. ಅವರೂ ಸಹ ನಮ್ಮ ಕನ್ನಡಿಗರೇ ಆಗಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳು ಮರಾಠಾ ಸಮುದಾಯ ನಿಗಮಕ್ಕೆ ಆದೇಶ ಹೊರಡಿಸಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.kannada-journalist-media-fourth-estate-under-loss

ಇಂದು ಬಳ್ಳಾರಿಯ ಹೊಸಪೇಟೆಯಲ್ಲಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಇದನ್ನು ಮಹಾರಾಷ್ಟ್ರದವರಿಗಾಗಿ ಮಾಡುತ್ತಿರುವುದಲ್ಲ. ಅವರೆಲ್ಲರೂ ನಮ್ಮೊಂದಿಗೆ ಇರುವ ಮರಾಠಿಗರು. ಹೀಗಾಗಿ ಅವರ ಅನೇಕ ವರ್ಷಗಳ ಬೇಡಿಕೆಯನ್ನು ಈಗ ಮುಖ್ಯಮಂತ್ರಿಗಳು ಈಡೇರಿಸಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಸಚಿವ ಎಸ್.ಟಿ ಸೊಮಶೇಖರ್ ತಿಳಿಸಿದರು.

ಜಾತಿಗೊಂದು ನಿಗಮ ಮಂಡಳಿಯಂತ ನಮ್ಮ ಸರ್ಕಾರ ಮಾಡುತ್ತಿಲ್ಲ. ಇದು ಎಲ್ಲ ಸರ್ಕಾರವಿದ್ದಾಗಲೂ ರಚನೆಯಾಗುವ ಸಾಮಾನ್ಯ ಪ್ರಕ್ರಿಯೆ. ಸವಿತಾ ಸಮಾಜ, ಬ್ರಾಹ್ಮಣ ಸಮಾಜ ಸೇರಿದಂತೆ ಎಲ್ಲ ಸಮಾಜದವರೂ ಸಹ ನಿಗಮ ಮಂಡಳಿ ಕೇಳುತ್ತಲೇ ಬಂದಿದ್ದಾರೆ. ಎಲ್ಲ ಜಾತಿಯವರು ಅವರ ಸಮಾಜದ ಏಳ್ಗೆಗೆ ಕೇಳುತ್ತಾ ಇರುತ್ತಾರೆ. ಈಗ ಮುಖ್ಯಮಂತ್ರಿಗಳ ಬಳಿ ಹೋಗಿ ಮನವಿ ಸಲ್ಲಿಸಿದ್ದಾರೆ. ಅವರ ಕಾರಣಗಳು ಸರಿ ಎಂದು ಮುಖ್ಯಮಂತ್ರಿಗಳಿಗೆ ಅನ್ನಿಸಿದರೆ ಅವರು ಅನುಮತಿಯನ್ನು ಕೊಡುತ್ತಾರೆ. ಇದು ಎಲ್ಲ ಮುಖ್ಯಮಂತ್ರಿಗಳು ಇರಬೇಕಾದರೂ ಆಗುತ್ತಿದ್ದಂತಹ ಕೆಲಸವಾಗಿದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ಸೋಮಶೇಖರ ರೆಡ್ಡಿ ಅವರ ಜೊತೆ ಮಾತನಾಡುತ್ತೇವೆ

ವಿಜಯನಗರವನ್ನು ಹೊಸ ಜಿಲ್ಲೆಯಾಗಿ ಮಾಡುವ ಬಗ್ಗೆ ಪರ-ವಿರೋಧ ಇರುವುದು ಸಹಜ. ಈಗಾಗಲೇ ಸಮಾಜ ಕಲ್ಯಾಣ ಸಚಿವರಾದ ಶ್ರೀರಾಮುಲು ಅವರು ಹಾಗೂ ಈ ಭಾಗದ ಅನೇಕ ಶಾಸಕರು ನೂತನ ಜಿಲ್ಲೆಯ ನಿರ್ಧಾರವನ್ನು ಸ್ವಾಗತ ಮಾಡಿದ್ದಾರೆ. ಈಗ ತಾನೆ ಸಂಪುಟದಲ್ಲಿ ಪ್ರಾಥಮಿಕವಾಗಿ ಒಪ್ಪಿಗೆ ಸಿಕ್ಕಿದೆ. ಇದಕ್ಕಾಗಿ ಸಚಿವರಾದ ಆನಂದ್ ಸಿಂಗ್ ಅವರು ಬಹಳ ಮೊದಲಿನಿಂದಲೇ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಅವರ ಜೊತೆ ಅನೇಕ ಶಾಸಕರು ಹಾಗೂ ಸಂಘ-ಸಂಸ್ಥೆಗಳ ಬೆಂಬಲವಿತ್ತು. ಈಗ ಅದು ಕಾರ್ಯರೂಪಕ್ಕೆ ಬಂದಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

ಶಾಸಕರಾದ ಸೋಮಶೇಖರ್ ರೆಡ್ಡಿ ಅವರು ನೂತನ ಜಿಲ್ಲೆಗೆ ವಿರೋಧ ವ್ಯಕ್ತಪಡಿಸಿದ್ದರ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಎಸ್.ಟಿ ಸೋಮಶೇಖರ್, ಸೋಮಶೇಖರ ರೆಡ್ಡಿ ಅವರ ಜೊತೆ ನಾವೆಲ್ಲರೂ ಮಾತನಾಡುತ್ತೇವೆ. ಅವರೂ ಸಹ ನಮ್ಮ ಪಕ್ಷದವರೇ ಆಗಿರುವುದರಿಂದ ಖಂಡಿತವಾಗಿ ಮನವೊಲಿಸುತ್ತೇವೆ. ಮುಖ್ಯಮಂತ್ರಿಗಳು ಏನು ನಿರ್ಧಾರವನ್ನು ತೆಗೆದುಕೊಳ್ಳುತ್ತಾರೋ ಅದನ್ನು ಪಾಲನೆ ಮಾಡುವುದು ನಮ್ಮ ಕರ್ತವ್ಯ. ಶಾಸಕರಾದ ಸೋಮಶೇಖರ ರೆಡ್ಡಿಯವರು ಒಪ್ಪುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದರು.Marata-corporation -structure - community –demands-Minister- ST Somashekhar

ಸಂಪುಟಕ್ಕೆ ಸೇರ್ಪಡೆ ಮುಖ್ಯಮಂತ್ರಿಗಳ ಪರಮಾಧಿಕಾರ

ಸಂಪುಟದಲ್ಲಿ ಯಾರನ್ನು ಸೇರಿಸಿಕೊಳ್ಳಬೇಕು ಎಂಬುದು ಮುಖ್ಯಮಂತ್ರಿಗಳ ಪರಮಾಧಿಕಾರ. ಈ ಸಂಬಂಧ ಚರ್ಚಿಸಲು ಅವರು ದೆಹಲಿ ಹೋಗಿಬಂದಿದ್ದಾರೆ ಎಂಬ ಮಾಹಿತಿ ಇದೆ. ನಮ್ಮ ಪಕ್ಷದಲ್ಲಿ ಇಂಥ ನಿರ್ಧಾರಗಳಿಗೆಲ್ಲ ಹೈಕಮಾಂಡ್ ಅನುಮತಿ ಕೊಡುವ ಪದ್ಧತಿ ಇದೆ. ಹೀಗಾಗಿ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳ ನಿರ್ಧಾರವೇ ಅಂತಿಮ, ಅವರಿಗೇ ಎಲ್ಲ ಅಧಿಕಾರ ಇದೆ ಎಂದು ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

Key words: Marata-corporation -structure – community –demands-Minister- ST Somashekhar