ನಿಲ್ಲದ ಕೆಜಿಎಫ್ ಚಾಪ್ಟರ್-2 ದಾಖಲೆಗಳ ಹವಾ !

kannada t-shirts

ಬೆಂಗಳೂರು. ಮೇ 10, 2022 (www.justkannada.in): ಕೆಜಿಎಫ್ ಚಾಪ್ಟರ್-2 1150 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಗಳಿಕೆ ಮಾಡಿದ್ದು, ಈಗ 1200 ಕೋಟಿ ರೂ ಗಡಿ ತಲುಪುತ್ತಿದೆ.

ಈಗಾಗಲೇ ನಾಲ್ಕು ಭಾಷೆಗಳಲ್ಲಿ 100 ಕೋಟಿ ಗಳಿಸಿದ ಮೊದಲ ಭಾರತೀಯ ಚಿತ್ರ ಎನ್ನುವ ಹೆಗ್ಗಳಿಕೆಗೂ ಕೂಡ ಪಾತ್ರವಾಗಿದೆ.

ಚಿತ್ರ ದಕ್ಷಿಣ ಕೊರಿಯಾದಲ್ಲಿಯೂ ಕೂಡ ಬಿಡುಗಡೆಯಾಗಿದೆ. ಆ ಮೂಲಕ ಈ ಸಾಧನೆ ಮಾಡಿದ ಮೊದಲ ಕನ್ನಡದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕೊರೋನಾ ಸಾಂಕ್ರಾಮಿಕ ಕಾಲಾವಧಿ ನಂತರ ಅಲ್ಲಿ ಪ್ರದರ್ಶನವಾಗುತ್ತಿರುವ ಮೊದಲ ಭಾರತೀಯ ಸಿನಿಮಾ ಎನ್ನುವ ಹೆಗ್ಗಳಿಕೆಯೂ ಕೂಡ ಈ ಚಿತ್ರದ್ದಾಗಿದೆ.

ಸಿಯೋಲ್‌ನಲ್ಲಿ ಕೆಜಿಎಫ್ 2 ಸ್ಕ್ರೀನಿಂಗ್ ಅನ್ನು ಅಭಿಮಾನಿಗಳು ಆಚರಿಸುತ್ತಿರುವ ಚಿತ್ರಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

website developers in mysore