ಪೌರಕಾರ್ಮಿಕರಿಗೆ ಮಾಸಿಕ 2 ಸಾವಿರ ರೂ. ಸಂಕಷ್ಟ ಭತ್ಯೆ: ಸಂಫುಟ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನ.

ಬೆಂಗಳೂರು,ಜುಲೈ,1,2022(www.justkannada.in): ಪೌರಕಾರ್ಮಿಕರಿಗೆ ಮಾಸಿಕ  2 ಸಾವಿರ ರೂ. ಸಂಕಷ್ಟ ಪರಿಹಾರ ಭತ್ಯೆ ನೀಡಲು ತೀರ್ಮಾನಿಸಲಾಗಿದೆ. ಎಲ್ಲಾ ಪೌರಕಾರ್ಮಿಕರಿಗೂ ಇದು ಸಿಗಲಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು.

ಇಂದು ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನ ಕೈಗೊಳ್ಳಲಾಯಿತು.

ಸಭೆ ಬಳಿಕ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಮಾಧುಸ್ವಾಮಿ, ಮುರುಘಾಮಠದಲ್ಲಿ ಬಸವೇಶ್ವರ ಪ್ರತಿಮೆ ನಿರ್ಮಾಣ, ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಅನುಮತಿ ನೀಡಿದ್ದೆವು. 20 ಕೋಟಿ ರೂ ಅನುದಾನವನ್ನ ನೀಡಲಾಗಿತ್ತು. ಉಳಿದ ೧೦ ಕೋಟಿ ಬಿಡುಗಡೆಗೆ ಅನುಮತಿ ನೀಡಲಾಗಿದೆ. ಹಟ್ಟಿಗೋಲ್ಡ್ ಮೈನ್ಸ್ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, ಮತ್ತೊಂದು ಕಡೆ ಡಿಗ್ಗಿಂಗ್ ಮಾಡಲು ಅನುಮತಿ, ಇದಕ್ಕೆ 307 ಕೋಟಿ ಹಣವನ್ನ ನೀಡಲಾಗಿದೆ ಎಂದರು.

438 ನಮ್ಮ‌ ಕ್ಲಿನಿಕ್ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. 438  ವೈದ್ಯಾಧಿಕಾರಿ,438  ನರ್ಸ್ ಹುದ್ದೆ ೪೩೮ ದ್ವಿತೀಯ ದರ್ಜೆ ಸಹಾಯಕರ ನೇಮಕಕ್ಕೆ ಒಪ್ಪಿಗೆ ನೀಡಲಾಗಿದೆ. ಗುತ್ತಿಗೆ ಆಧಾರದ ಮೇಲೆ ನೇಮಕಕ್ಕೆ ಅನುಮತಿ ನೀಡಲಾಗಿದೆ. ಬೆಂಗಳೂರಿನ ಎಲ್ಲಾ ವಾರ್ಡ್ ಗಳಲ್ಲಿ ‌ಕ್ಲಿನಿಕ್ ಆರಂಭವಾಗಲಿದೆ. ಇದಕ್ಕೆ 102 ಕೋಟಿ ಹಣ ನೀಡಲಾಗ್ತಿದೆ ಎಂದು ಮಾಹಿತಿ ನೀಡಿದರು.

ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನ ನಿರಾಣಿ ಶುಗರ್ಸ್ ಗೆ ಲೀಸ್ ನೀಡಲಾಗಿತ್ತು. ೨೪ ಕೋಟಿ ಸ್ಟಾಂಪ್ ಡ್ಯೂಟಿಗೆ ನೀಡಲು ಒಪ್ಪಿಗೆ ನೀಡಲಾಗಿದೆ.  ಕಾರ್ಖಾನೆ ನಡೆಸಲು ಆಗಲ್ಲವೆಂದಿದ್ದರು. ಹೀಗಾಗಿ ಬಡ್ಡಿ ರಹಿತ ಸಾಲ ನೀಡಲು ತೀರ್ಮಾನಿಸಲಾಗಿದೆ. ಜಾವಗಲ್ ರಸ್ತೆ ನಿರ್ಮಾಣಕ್ಕೆ ೨೨.೨೦ ಕೋಟಿ, ಸಿರ್ಸಿ ಬ್ಲಾಕ್ ಸ್ಪಾಟ್ ನಿರ್ಮಾಣಕ್ಕೆ ಅನುಮತಿ, ಬೆಳಗಾವಿಯಲ್ಲಿ ಅಂಗಡಿ ಮಳಿಗೆ ನಿರ್ಮಾಣ, ಬಾಡಿಗೆ ಆಧಾರದಲ್ಲಿ ಮಳಿಗೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.Decision - Cabinet meeting - one –open university-minister- Madhuswamy

ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಚಿಕ್ಕೋಡಿಯಲ್ಲಿ ಕೋರ್ಟ್ ಗೆ ೩೨ ಕೋಟಿ ಅನುದಾನ, ಮೂಡಿಗೆರೆ ಕೋರ್ಟ್ ನಿರ್ಮಾಣಕ್ಕೆ ೧೨ ಕೋಟಿ, ಕೋಲಾರ ಜಿಲ್ಲಾ ಕೋರ್ಟ್ ಸಂಕೀರ್ಣಕ್ಕೆ ೨೨ ಕೋಟಿ, ಶ್ರೀನಿವಾಸಪುರದಲ್ಲಿ ಕೋರ್ಟ್ ಸಂಕಿರ್ಣಕ್ಕೆ ೧೨ ಕೋಟಿ, ಬಳ್ಳಾರಿ ನ್ಯಾಯಾಲಯ ‌ಸಂಕೀರ್ಣ ನಿರ್ಮಾಣಕ್ಕೆ ೧೨೧ ಕೋಟಿ, ಕುಂದಗೋಳದಲ್ಲಿ ಕೋರ್ಟ್ ಕಟ್ಟಡಕ್ಕೆ ೩೨ ಕೋಟಿ. ಹೊಸ ಕೋರ್ಟ್ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಅಮೃತ್ ನಗರೋತ್ಥಾನ ಕಂಡೀಷನ್ ಗಳಲ್ಲಿ ರಿಯಾಯಿತಿ. ಫಂಡ್ಸ್ ಗಳನ್ನ ಸಚಿವರ ವ್ಯಾಪ್ತಿಗೆ ಬಿಡಲು ತೀರ್ಮಾನಿಸಲಾಗಿದ್ದು, ಫಂಡ್ಸ್ ಅನ್ನ ಸಚಿವರೇ ವರ್ಗಾಯಿಸಲು ಅವಕಾಶ ಇರಲಿದೆ ಎಂದರು.

ರಾಷ್ಟ್ರೋತ್ಥಾನ ಸಂಸ್ಥೆಗೆ ಭೂಮಿ ಮಂಜೂರು, ರಿಯಾಯ್ತಿ ದರದಲ್ಲಿ ಭೂಮಿ ನೀಡಲು ನಿರ್ಧಾರ ಮಾಡಲಾಗಿದೆ. ಕೋಟಿಕಾರ್ ಪ.ಪಂ ೨೪ ಕುಡಿಯುವ ನೀರು ಸರಬರಾಜು, ೨೨೪ ಕೋಟಿ ಹಣ ನೀಡಲು ಒಪ್ಪಿಗೆ, 3 ಗುಂಟೆ ಜಮೀನನ್ನ ಕನ್ನಡ ಸಾಹಿತ್ಯ ಪರಿಷತ್ ಗೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಜೆಎಸ್ ಎಸ್ ಸಂಸ್ಥೆಗೆ ೯ ಎಕರೆ ಜಮೀನು ಮಂಜೂರು ದಾವಣಗೆರೆಯ ದೊಡ್ಡಬಾತಿಯಲ್ಲಿ ನೀಡಲು ಸಮ್ಮತಿ ಸೂಚಿಸಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಸವಣೂರು,ಶಿಗ್ಗಾಂವಿ ಗ್ರಾಮಗಳಿಗೆ ನೀರು, ೮೩೦ ಕೋಟಿ ಅನುದಾನ ನೀಡಲು ಅನುಮತಿ, ಹಾನಗಲ್ ತಾಲೂಕಿನ ಗ್ರಾಮಗಳಿಗೆ ನೀರು ಪೂರೈಕೆ, ೩೩೫ ಕೋಟಿ ಅನುದಾನ ನೀಡಲು ಸಮ್ಮತಿ, ಹಾವೇರಿ ೫೧ ಗ್ರಾಮಗಳಿಗೆ ಕುಡಿಯುವ ನೀರು, ೧೫೦ ಕೋಟಿ ಅನುದಾನ ನೀಡಲು ಒಪ್ಪಿಗೆ ಸೂಚಿಸಲಾಗಿದೆ.

ಯಾದಗಿರಿ ಜಿಲ್ಲೆ ಕುಡಿಯುವ ನೀರು ಯೋಜನೆಗೆ ಒಪ್ಪಿಗೆ, ೨೦೫೪ ಕೋಟಿ‌ ಹಣ ಮಂಜೂರು. ಚಿಕ್ಕನಾಯಕನಹಳ್ಳಿ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವುದು ಬೋರನಕಣಿವೆಯಿಂದ ನೀರು ಪೂರೈಕೆ ಮಾಡುವುದು. ಇದಕ್ಕೆ ೪೩೫ ಕೋಟಿ ಅನುದಾನ ಮಂಜೂರು ಮಾಡಲಾಗುತ್ತದೆ. ಮುದ್ದೆಬಿಹಾಳ,ಸಿಂದಗಿ ಕುಡಿಯುವ ನೀರು ಪೂರೈಕೆಗೆ ಅನುಮತಿ ನೀಡಲಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ೧೩೮೫ ಕೋಟಿ ಅನುದಾನ ನೀಡಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ನೀರು ಸರಬರಾಜಿಗೆ ಅನುದಾನ, ೩೩ ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಬಸವಕಲ್ಯಾಣ ಗ್ರಾಮಗಳಿಗೆ ಕುಡಿಯುವ ನೀರು ಯೋಜನೆ ೯೯.೬೪ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದು ಮಾಧುಸ್ವಾಮಿ ಮಾಹಿತಿ ನೀಡಿದರು.

ಪಂಚಮಸಾಲಿ,ವಾಲ್ಮೀಕಿ‌ ಮೀಸಲಾತಿ ಹೋರಾಟ ವಿಚಾರ ಭಕ್ತವತ್ಸಲ ಅವರ ಕಮಿಟಿ ವರದಿ ನೀಡಬೇಕು. ವರದಿ ಬಂದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ತೇವೆ ಎಂದು ಮಾಧುಸ್ವಾಮಿ ತಿಳಿಸಿದರು.

ಅಧಿವೇಶನ ಮುಂದಿನ ತಿಂಗಳು ನಡೆಯಲಿದೆ. ಇವತ್ತು ಚರ್ಚೆಗೆ ಬಂದಿತ್ತು. ಆದರೆ ಮುಂದಿನ ತಿಂಗಳಿಗೆ ಹಾಕಿದ್ದೇವೆದಿನಾಂಕ ನಿಗದಿಯಾಗಿಲ್ಲ ಎಂದು ಮಾಧುಸ್ವಾಮಿ ಹೇಳಿದರು.

Key words: Many -decisions –cabinet- meeting-minister-Maduswamy