ಹಲವು ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ಮುಂದುವರಿಕೆ : ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

kannada t-shirts

ಮೈಸೂರು,ಏಪ್ರಿಲ್,07,2021(www.justkannada.in) : ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ  ವಿವಿಯ ಅಂತಿಮ ಕಾರ್ಯಸೂಚಿ ಶಿಕ್ಷಣ ಮಂಡಳಿಯ ಮೂರನೇ ಸಾಮಾನ್ಯ ಸಭೆ ಬುಧವಾರ ನಡೆಯಿತು.Illegally,Sand,carrying,Truck,Seized,arrest,driverಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ನಡೆದ ಸಭೆಯಲ್ಲಿ 2020-21ನೇ ಸಾಲಿನ ಪರಾಮರ್ಶನಾ ಸಮಿತಿಯು ಭೇಟಿ ನೀಡಿ ಪರಿಶೀಲನೆ ನಡೆಸಿ ನೀಡಿದ ವರದಿಯ ಆಧಾರದ ಮೇಲೆ ಹಾಸನದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು, ಎಸ್.ಬಿ.ಆರ್.ಮಹಾಜನ ಪ್ರಥಮ ದರ್ಜೆ ಸ್ವಾಯತ್ತತಾ ಕಾಲೇಜು, ಬಿ.ಎನ್.ರಸ್ತೆಯಲ್ಲಿರುವ ಜೆ.ಎಸ್.ಎಸ್.ಕಲಾ, ವಿಜ್ಞಾನ ಮತ್ತು ವಾಣಿಜ್ಯ ಸ್ವಯತ್ತತಾ ಕಾಲೇಜು, ಹಾಸನದ ಸರ್ಕಾರಿ ವಿಜ್ಞಾನ ಸ್ವಾಯತ್ತತಾ ಕಾಲೇಜು, ಸರಸ್ವತಿಪುರಂನಲ್ಲಿರುವ ಜೆ.ಎಸ್.ಎಸ್ ಮಹಿಳಾ ಸ್ವಾಯತ್ತತಾ ಕಾಲೇಜು, ಮಹಾರಾಣಿ ಮಹಿಳಾ ವಿಜ್ಞಾನ ಸ್ವಾಯತ್ತತಾ ಕಾಲೇಜು, ಮಂಡ್ಯದ ಮಹಿಳಾ ಸರ್ಕಾರಿ ಸ್ವಾಯತ್ತತಾ ಕಾಲೇಜು ಮತ್ತು ಸರ್ಕಾರಿ ಮಹಾವಿದ್ಯಾಲಯ ಸ್ವಾಯತ್ತತಾ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನವನ್ನು ಮುಂದುವರಿಸುವ ಶಿಫಾರಿಸ್ಸಿಗೆ ಒಪ್ಪಿಗೆ ನೀಡಲಾಯಿತು.

ಈ ಸಂದರ್ಭ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ, ಈ ಎಲ್ಲಾ ಕಾಲೇಜುಗಳಲ್ಲಿ ಖಾಯಂ ಪ್ರಾಚಾರ್ಯರು ಇರುವಂತೆ ನೋಡಿಕೊಳ್ಳುವುದು, ಕಡಿಮೆ ಫಲಿತಾಂಶ ಬಂದಿರುವ ತರಗತಿಗಳ ಫಲಿತಾಂಶ ಉತ್ತಮಪಡಿಸಲು ಕ್ರಮವಹಿಸುವುದು, ಗ್ರಂಥಾಲಯ ವ್ಯವಸ್ಥೆ ಮಾಡುವುದು ಸೇರಿದಂತೆ ಹಲವು ಸೂಚನೆಗಳನ್ನು ನೀಡಲಾಗಿದೆ ಎಂದರು.

2020-21ಶೈಕ್ಷಣಿಕ ಸಾಲಿನಿಂದ ಎಂ.ಫಿಲ್. ಕೋರ್ಸ್ ಸ್ಥಗಿತ

ಮೈಸೂರು ವಿವಿಯಲ್ಲಿ 2020-21ಶೈಕ್ಷಣಿಕ ಸಾಲಿನಿಂದ ಎಂ.ಫಿಲ್. ಕೋರ್ಸ್ ಸ್ಥಗಿತಗೊಳಿಸಲಾಗಿದೆ. ಈ ಕುರಿತು ಶಿಕ್ಷಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ. 2020-21ನೇ ಸಾಲಿನಲ್ಲಿ ಡಿ.ಲಿಟ್ ಪದವಿಯ ವಿನಿಮಯ ಮತ್ತು ಶುಲ್ಕವನ್ನು ಕೂಲಂಕಷವಾಗಿ ಪರಿಶೀಲಿಸಿ ಪ್ರಸ್ತುತ ಶಲ್ಕಕ್ಕಿಂತ ಶೆ.15ರಷ್ಟು ಹೆಚ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

Many-college-Autonomous-Status-Continuation-Mysore VV-Chancellor-Prof.G.Hemant Kumar

2008-2009ರಲ್ಲಿ ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜಿನ(ಸ್ವಾಯತ್ತ) ವಿದ್ಯಾರ್ಥಿನಿ ಕೆ.ಪಿ.ರಮ್ಯ ಕೊಟ್ಟಿಗೆಹಾರ್ ಅವರು ಬಿಸ್ಸಿ ಕೋರ್ಸಿನ(Non-CBCS) ಅಡಿಯಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷ ಪೂರೈಸಿದ್ದು, ಕೌಟುಂಬಿಕ ಸಮಸ್ಯೆಯಿಂದಾಗಿ ವಿದ್ಯಾಭ್ಯಾಸ ಸ್ಥಗಿತಗೊಳಿಸಿದ್ದರು. ಪದವಿ ಪೂರ್ಣಗೊಳಿಸಿಕೊಳ್ಳುವುದಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ 2020-21ನೇ ಸಾಲಿನಲ್ಲಿ ಪದವಿ ಪೂರ್ಣಗೊಳಿಸಲು ಅನುಮತಿ ನೀಡಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು.

ಹಣಕಾಸು ಸಮಿತಿಗೆ ಸದಸ್ಯರಾಗಿ ಪ್ರೊ.ಎಚ್.ರಾಜಶೇಖರ್ ನಾಮನಿದೇರ್ಶನ

ಹಣಕಾಸು ಸಮಿತಿಗೆ ಸದಸ್ಯರಾಗಿದ್ದ ಪ್ರೊ.ಡಿ.ಆನಂದ ಅವರ ಸದಸ್ಯತ್ವ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ನೂತನ ಸದಸ್ಯರಾಗಿ ವಾಣಿಜ್ಯ ನಿಕಾಯದ ಡೀನ್ ಪ್ರೊ.ಎಚ್.ರಾಜಶೇಖರ್ ಅವರನ್ನು ನಾಮನಿದೇರ್ಶನ ಮಾಡಲಾಗಿದೆ ಎಂದು ವಿವರಿಸಿದರು.

ಚಲನಚಿತ್ರ ಸಂಗೀತ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಹೆಸರಿನಲ್ಲಿ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಸಂಗೀತ ಅಧ್ಯಯನ ಪೀಠ ಸ್ಥಾಪನೆ ಸಂಬಂಧಿಸಿದಂತೆ ಸಿದ್ಧಪಡಿಸಿರುವ ಕರಡು ಅಧಿನಿಯಮವನ್ನು ರಾಜ್ಯ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳ ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಬೇಕಾಗಿದೆ ಎಂದು ತಿಳಿಸಿದರು.

ಹಲವು ಕಾಲೇಜುಗಳಿಗೆ ಸ್ವಾಯತ್ತ ಸ್ಥಾನಮಾನವನ್ನು ಮುಂದುವರಿಸುವ ಶಿಫಾರಸ್ಸಿಗೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಎಲ್ಲಾ ಕಾಲೇಜುಗಳು ಸಾಮಾಜಿಕ ನ್ಯಾಯದ ಅಡಿಯಲ್ಲಿ ಎಸ್ಸಿ,ಎಸ್ಟಿ ಅವರಿಗೆ ಬೋಧಕರಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಲಾಯಿತು.Many-college-Autonomous-Status-Continuation-Mysore VV-Chancellor-Prof.G.Hemant Kumar

ಸಭೆಯಲ್ಲಿ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ವಿಜ್ಞಾನ ನಿಕಾಯದ ಡೀನ್ ಪ್ರೊ.ಜಿ.ವೆಂಕಟೇಶ್ ಕುಮಾರ್,ಕಲಾ ನಿಕಾಯದ ಡೀನ್ ಪ್ರೊ.ಎಂ.ತಳವಾರ್,  ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ, ಪ್ರೊ.ಮುಜಾಫರ್ ಅಸ್ಸಾದಿ ಇತರರು ಉಪಸ್ಥಿತರಿದ್ದರು.

ENGLISH SUMMARY….

Autonomous status for a few colleges will be continued: UoM VC
Mysuru, Apr. 07, 2021 (www.justkannada.in): The 3rd Annual General Body meeting of the University of Mysore Education Board was held on Wednesday under the chairmanship of Prof. G. Hemanth Kumar, Vice-Chancellor, University of Mysore.
The meeting was held at the Vignana Bhavana, in Manasagangotri. In the meeting, approval was granted to continue the autonomous status given to the Government Arts, Commerce and PG College, Hassan, SBR Mahajana First Grade Autonomous College, JSS Arts, Science, and Commerce Autonomous College, B.N. Road, Mysuru, Government Science Autonomous College, Hassan, JSS Women’s Autonomous College, Saraswathipuram, Mysuru, Maharani Women’s Science Autonomous College, Government Autonomous College, Mandya, and Government University Autonomous College, based on the report submitted by the 2020-21 Review Committee.Many-college-Autonomous-Status-Continuation-Mysore VV-Chancellor-Prof.G.Hemant Kumar
Speaking on the occasion Prof. G. Hemanth Kumar, Vice-Chancellor, University of Mysore informed that instructions have been given to all the above-mentioned colleges to ensure the presence of permanent teachers, take measures to improve the results of all the courses that are getting fewer results, provide good library facilities, etc.
Prof. R. Shivappa, Registrar, University of Mysore, Prof. G. Venkatesh Kumar, Dean, Faculty of Science, Prof. D. Anand, Dean, Faculty of Commerce, Prof. M. Talawar, Dean, Faculty of Arts, R. Dharmasena, MLC, Prof. Muzafar Asaadi and others were present.
Keywords: 3rd Annual General Body meeting/ University of Mysore Education Board/ Autonomous status continued

key words : Many-college-Autonomous-Status-Continuation-Mysore VV-Chancellor-Prof.G.Hemant Kumar

website developers in mysore