ಇಂದಿನಿಂದ ಮೈಸೂರಿನ ಕುಪ್ಪಣ್ಣ ಪಾರ್ಕ್’ನಲ್ಲಿ ಮಾವು ಮೇಳ

ಮೈಸೂರು, ಮೇ 27, 2022 (www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದಿನಿಂದ ಮಾವುಮೇಳ ಆರಂಭವಾಗಿದೆ.

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ನಿಗಮ ಹಾಗೂ ತೋಟಗಾರಿಕೆ ಇಲಾಖೆಯಿಂದ ಆಯೋಜನೆ ಮಾಡಲಾಗಿದ್ದು,
ಮಾವು ಪ್ರದರ್ಶನ ಮತ್ತು ಮಾರಾಟ ಮೇಳ-2022ಕ್ಕೆ
ಜಿಲ್ಲಾಧಿಕಾರಿ ಬಗಾದಿ ಗೌತಮ್ ಚಾಲನೆ ನೀಡಿದ್ದಾರೆ.

16ವಿವಿಧ ತಳಿಯ ಮಾವುಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. 26 ಮಳಿಗೆಗಳಲ್ಲಿ ಮಾವು ಮಾರಾಟ ಮತ್ತು ಪ್ರದರ್ಶನ ಆರಂಭವಾಗಿದೆ.

ಬಾದಾಮಿ, ರಸಪುರಿ, ಮಲ್ಲಿಕಾ, ಆಮ್ರಪಾಲಿ, ಹಿಮಾಮ್ ಪಸಂದ್, ಸೇಂದುರ, ದಶೇರಿ, ಮಲಗೋವಾ, ತೋತಾಪುರಿ ಸೇರಿ ಹಲವು ತಳಿಗಳ ಪ್ರದರ್ಶನವಿದೆ. ರೈತರಿಂದ ನೇರವಾಗಿ ಮಾರಾಟ ಮಾಡಲಾಗುತ್ತಿದೆ. ಮಾವು ಬೆಳೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಮೈಸೂರಿನ ಕುಪ್ಪಣ್ಣ ಪಾರ್ಕ್ ನಲ್ಲಿ ನಡೆಯುತ್ತಿರುವ ಮೇಳದಲ್ಲಿ ಪಾಲ್ಗೊಂಡು‌ ಮಾವಿನ ಸವಿ ಸವಿಯಬಹುದು.