ಮೃತಪಟ್ಟ ಇಬ್ಬರೂ ಅಮಾಯಕರು: ಹಿಂಸಾಚಾರಕ್ಕೆ ಕೇಂದ್ರಸರ್ಕಾರವೇ  ಹೊಣೆ- ದಿನೇಶ್ ಗುಂಡೂರಾವ್ ಕಿಡಿ…

ಮಂಗಳೂರು,ಡಿ,24,2019(www.justkannada.in): ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರವೇ ಹೊಣೆ. ಪ್ರತಿಭಟನೆಯಲ್ಲಿ ಪೊಲೀಸರ ಗುಂಡೇಟಿಗೆ ಮೃತಪಟ್ಟವರು ಅಮಾಯಕರು ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಹರಿಹಾಯ್ದರು.

ಮಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಿನೇಶ್ ಗುಂಡೂರಾವ್,  ಪ್ರತಿಭಟನೆ ವೇಳೇ 250 ಮಂದಿ ಸೇರಿದ್ದರು ಅಷ್ಟೆ.  ಇಷ್ಟು ತುರ್ತಾಗಿ ಪೊಲೀಸರು ಫೈರಿಂಗ್ ಮಾಡಿದ್ದು ಇದೇ. ಮೊದಲು. ಕರ್ನಾಟಕದ ಇತಿಹಾಸದಲ್ಲಿ ಈ ರೀತಿ ಆಗಿರಲಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ವಿ.  ಆದರೆ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರವೇ ಹೊಣೆ. 144 ಸೆಕ್ಷೆನ್ ಜಾರಿ ಮಾಡಿದ್ದು ಇದಕ್ಕೆ ಕಾರಣ. 144 ಸೆಕ್ಷೆನ್ ಜಾರಿ ಮಾಡುವ ಅಗತ್ಯತೆ ಏನಿತ್ತು ಎಂದು ವಾಗ್ದಾಳಿ ನಡೆಸಿದರು.

ಹಾಗೆಯೇ ಘಟನೆಯಲ್ಲಿ ಮೃತಪಟ್ಟ ಇಬ್ಬರು ಅಮಾಯಕರು. ಘಟನೆ ನಡೆದ ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿಲಿಲ್ಲ. ಅವರಿಗೆ ಮನುಷ್ಯತ್ವ ಇಲ್ವಾ..? ಎಂದು ಕಿಡಿಕಾರಿದ ದಿನೇಶ್ ಗುಂಡೂರಾವ್, ಈ ಘಟನೆಗೆ ಮೋದಿ, ಅಮಿತ್ ಶಾ ಕಾರಣ ಎಂದು ದೂರಿದರು.

Key words: mangalore-two-dead –innocent-  Central government – responsible –violence- Dinesh Gundurao