ಮಂಗಳೂರು ಹಿಂಸಾಚಾರ ವಿಡಿಯೋ ಬಿಡುಗಡೆ ವಿಚಾರ: ಮಾಜಿ ಸಿಎಂ ಹೆಚ್.ಡಿಕೆಗೆ ಟಾಂಗ್ ಡಿಸಿಎಂ ಲಕ್ಷ್ಮಣ್ ಸವದಿ….

Promotion

ಬೆಂಗಳೂರು,ಡಿ,10,2020(www.justkannada.in): ಮಂಗಳೂರು ಗೋಲಿಬಾರ್ ಗೆ ಸಂಬಂಧಿಸಿದಂತೆ 35 ವಿಡಿಯೋಗಳನ್ನ ಬಿಡುಗಡೆ ಮಾಡಿ ಪೊಲೀಸರಿಂದಲೇ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಡಿಸಿಎಂ ಲಕ್ಷ್ಮಣ್ ಸವದಿ ಟಾಂಗ್ ನೀಡಿದ್ದಾರೆ.

ಬೈ ಎಲೆಕ್ಷನ್ ಬಳಿಕ  ಹೆಚ್.ಡಿ ಕುಮಾರಸ್ವಾಮಿ ಸ್ಥಿಮಿತ ಕಳೆದುಕೊಂಡಿದ್ದಾರೆ. ಪಕ್ಷ ಮುಂದೇನಾಗುತ್ತೊ ಎನ್ನುವ ಆತಂಕದಲ್ಲಿದ್ದಾರೆ. ಹೆಚ್.ಡಿ ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದವರು. ತಿಳಿದು ಮಾತನಾಡಲಿ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಕಿಡಿಕಾರಿದ್ದಾರೆ.

ಈ ಬಗ್ಗೆ ಇಂದು ಮಾಧ್ಯಮಗಳಿಗೆ ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ,  ವಿಡಿಯೋ ಬಿಡುಗಡೆ ಮೂಲಕ ಅನವಶ್ಯಕವಾಗಿ ಪೊಲೀಸರ ಮೇಲೆ ಗೂಬೆ ಕೂರಿಸಬಾರದು. ತಮ್ಮ ಸರ್ಕಾರವಿದ್ದಾಗ ಪೊಲೀಸರು ಒಳ್ಳೆಯವರು. ಬೇರೆ ಸರ್ಕಾರವಿದ್ದಾಗ ಕೆಟ್ಟವರು ಎಂಬ ಮಾತು ಹೆಚ್ ಡಿಕೆಯದ್ದು.  ಹೆಚ್.ಡಿಕೆ ಆರೋಪ ಮಾಡಿದ್ದು ಚರ್ಚೆಯಾಗಲಿ. ಅಧಿಕಾರಿಗಳೇ ಉತ್ತರ ಕೊಡ್ತಾರೆ. ಎಂದು ಹೇಳಿದರು.

ಈ ಬಗ್ಗೆ ಮಾತನಾಡಿರುವ ಸಚಿವ ಜಗದೀಶ್ ಶೆಟ್ಟರ್, ಪೊಲೀಸರ ಮೇಲೆ ಆಪಾದನೆ ಸರಿಯಲ್ಲ.  ಹೀಗೆ ರಾಜಕೀಯ ಮಾಡೋದು ಸರಿಯಲ್ಲ  ಈ ಘಟನೆ ಬಗ್ಗೆ ಪೊಲೀಸರು ಕಾನೂನು ಕ್ರಮ ಜರಗಿಸ್ತಾರೆ ಎಂದಿದ್ದಾರೆ.

Key words: Mangalore –golibarcase- video release -DCM- Laxman Sawadi –tong- hd kumaraswamy