ಮಂಡ್ಯ ಜಿಲ್ಲೆಗೆ ಹೊರಗಿನಿಂದ ಬಂದವರನ್ನು ಗುರುತಿಸುವ ಜವಾಬ್ದಾರಿಯನ್ನು ಶಿಕ್ಷಕರಿಗೆ ವಹಿಸಿದ ಸಚಿವ ಡಾ. ನಾರಾಯಣಗೌಡ

 

ಬೆಂಗಳೂರು -02, 2020 : ( www.justkannada.in news ) ಮಂಡ್ಯ ಜಿಲ್ಲೆಗೆ ಹೊರಗಿನಿಂದ ಬಂದವರನ್ನು ಗುರುತಿಸಿ, ಜಿಲ್ಲಾಧಿಕಾರಿಗೆ ವರದಿ ಒಪ್ಪಿಸುವ ಜವಾಬ್ದಾರಿಯನ್ನು ಶಿಕ್ಷಕರಿಗೆ ನೀಡುವಂತೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣ ಗೌಡ ಸೂಚಿಸಿದ್ದಾರೆ.

ಜಿಲ್ಲೆಯ ಅಧಿಕಾರಿಗಳ ಜೊತೆ ಇಂದು ವಿಡಿಯೊ ಕಾನ್ಫರೆನ್ಸ್ ನಡೆಸಿದ ಅವರು, ಜಿಲ್ಲಾಧಿಕಾರಿಗೆ ಈ ಸೂಚನೆ ನೀಡಿದ್ದಾರೆ.
ಗ್ರಾಮಗಳಲ್ಲಿ ಶಿಕ್ಷಕರಿಗೆ ಬಹುತೇಕ ಎಲ್ಲರ ಪರಿಚಯ ಇರತ್ತೆ. ಹೀಗಾಗಿ ಹೊರ ಜಿಲ್ಲೆ, ರಾಜ್ಯಗಳಿಂದ ಬಂದಿರುವವರು ಮತ್ತು ಬರುವವರನ್ನ ಶಿಕ್ಷಕರು ಗುರುತಿಸಿ ಬಿಇಓಗೆ ವರದಿ ನೀಡಬೇಕು. ಬಿಇಓ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

mandya-teacher-responsibility-marayanagowda-minister-karnataka-covid.19

ವಿಕಾಸ ಸೌಧದಿಂದ ವಿಡಿಯೊ ಕಾನ್ಫರೆನ್ಸ್ ನಡೆಸಿದ ಸಚಿವರು, ಜಿಲ್ಲೆಗೆ ಸಾವಿರಾರು ಜನ ಬಂದಿರುವ ಬಗ್ಗೆ ಆರೋಪ ಇದೆ. ಈ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡುವಂತೆಯೂ ಸೂಚಿಸಿದ್ದಾರೆ. ಅಲ್ಲದೆ ರೈತರಿಗೆ ಕೃಷಿ ಕಾರ್ಯಕ್ಕೆ ತೊಡಕಾಗದಂತೆ ನೋಡಿಕೊಳ್ಳಬೇಕು. ವಿದ್ಯುತ್ ಕಡಿತ ಆಗಬಾರದು, ಗೊಬ್ಬರ, ಬೀಜ, ಕೃಷಿ ಉಪಕರ ಖರೀದಿಗೆ ರೈತರಿಗೆ ವ್ಯವಸ್ಥೆ ಮಾಡಬೇಬೇಕು ಎಂದು ತಿಳಿಸಿದರು.

ಜಿಲ್ಲೆಗೆ ಬರುವ ಯಾವುದೇ ವ್ಯಕ್ತಿ ಕಡ್ಡಾಯವಾಗಿ ಕೋವಿಡ್ 19 ಟೆಸ್ಟ್ ಮಾಡಿಸಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಲ್ಯಾಬ್ ಅವಶ್ಯಕತೆ ಇದೆ ಹೀಗಾಗಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊವಿಡ್ ಟೆಸ್ಟಿಂಗ್ ಲ್ಯಾಬ್ ಹಾಗೂ ಮೊಬೈಲ್ ಸ್ವ್ಯಾಬ್ ಕಲೆಕ್ಷನ್ ಲ್ಯಾಬ್ ಹೆಚ್ಚಿನ ಪ್ರಮಾಣದಲ್ಲಿ ಆರಂಭಿಸುವ ಬಗ್ಗೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು.

key words : mandya-teacher-responsibility-marayanagowda-minister-karnataka-covid.19