ಹಿಜಾಬ್ ವಿವಾದವನ್ನ ಜಾಸ್ತಿ ಕೆದಕಬೇಡಿ: ಅದರಿಂದ ವೋಟ್ ಬರಲ್ಲ-  ಎಂಎಲ್ ಸಿ ಸಿಎಂ ಇಬ್ರಾಹಿಂ

ಮಂಡ್ಯ,ಫೆಬ್ರವರಿ,11,2022(www.justkannada.in): ಸಿಎಂ ಬಸವರಾಜ ಬೊಮ್ಮಾಯಿ ಅವರೇ, ಸಚಿವ ಕೆ.ಎಸ್ ಈಶ್ವರಪ್ಪ ಅವರೇ ಕೇಳೋದು ಒಂದೇ.  ಹಿಜಾಬ್ ವಿವಾದನ್ನ ಜಾಸ್ತಿ ಕೆದಕಬೇಡಿ  ವಿವಾದ ಮಾಡುವುದರಿಂದ ವೋಟ್ ಬರಲ್ಲ ಎಂದು ಎಂಎಲ್ ಸಿ ಸಿಎಂ ಇಬ್ರಾಹಿಂ ಹೇಳಿದರು.

ಮಂಡ್ಯದಲ್ಲಿನ ವಿದ್ಯಾರ್ಥಿನಿ ಮುಸ್ಕಾನ್ ಮನೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಇಬ್ರಾಹಿಂ, ಸೆರಗು ಹಾಕುವುದು ನಮ್ಮ ಸಂಸ್ಕೃತಿ. ಹೆಣ್ಣಿನ ಮೈ ಮುಚ್ಚುವುದೇ ನಮ್ಮ ಸಂಸ್ಕೃತಿ .  ಇದು ಅವಳ ಸೌಂದರ್ಯ ಎಂದರು.

JDS- join- issue-CM Ibrahim- clarified.
ಕೃಪೆ-internet

ಹಾಗೆಯೇ ಬಿಜೆಪಿ ವಿರುದ್ಧ ಕಿಡಿಕಾರಿದ ಸಿಎಂ ಇಬ್ರಾಹಿಂ, ದೇಶ ಒಡೆಯುವಾಗಲೇ ಇವರಿಗೆ ನೋವಾಗಲಿಲ್ಲ ಇನ್ನು ಮಕ್ಕಳ ಮನಸ್ಸು ಒಡೆಯುವಾಗ ನೋವಾಗುತ್ತಾ ಎಲ್ಲ ಮಕ್ಕಳನ್ನು ಒಂದೇ ತಾಯಿ ಮಕ್ಕಳಂತೆ ನೊಡಿ ಎಂದು ಸಲಹೆ ನೀಡಿದರು.

ಇನ್ನು ಮುಸ್ಕಾನ್ ಗೆ ಬಹಳ ಧೈರ್ಯ ಇದೆ. ಮಂಡ್ಯ ಕಾಲೇಜಿನಲ್ಲಿ ಆದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡೆ.   ನನ್ನ ಬಳಿ ಕೆಲವರು ದಾಳಿ ಮಾಡೋಕೆ ಬಂದಂತೆ ಬಂದ್ರು. ಈ ವೇಳೆ ಆನೇಕ ಹಿಂದೂಗಳು ಸಹಾಯ ಮಾಡಿದ್ದಾರೆ. ಎಂದು ವಿವರಿಸಿದ್ದಾಳೆ.  ಆಕೆ ನಾಡಿನ ಸಂಸ್ಕೃತಿ ಎತ್ತಿ ತೋರಿಸಿದ್ದಾಳೆ. ಗಿಫ್ಟ್ ಬಂದಿರುವ ವಿಚಾರ ನನ್ನ ಜೊತೆ ಓದುವ  ಬಡವರ ಫೀಸ್ ಕಟ್ಟುತ್ತೇನೆ  ಅಂದಳು. ಆಕೆಯ ದಾನ ಧರ್ಮದ ಮಾತು ಮೆಚ್ಚುವಂತಹದು ಎಂದು ಸಿಎಂ ಇಬ್ರಾಹಿಂ ತಿಳಿಸಿದರು.

Key words: mandya-student-MLC-CM Ibrahim