ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಆರಂಭ: ಮಂಡ್ಯ ಜಿಲ್ಲೆ ಜನ ಭಯಪಡಬೇಕಿಲ್ಲ ಅಂದ್ರು ಸಚಿವ ನಾರಾಯಣಗೌಡ…..

kannada t-shirts

ಮಂಡ್ಯ,3,2020(www.justkannada.in):  ಜಿಲ್ಲೆಗೆ ತೀರಾ ಅಗತ್ಯವಿದ್ದ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಆರಂಭವಾಗಿದೆ. ಕೇವಲ 15 ದಿನಗಳಲ್ಲಿ ಲ್ಯಾಬ್ ಆರಂಭಿಸಲು ಶ್ರೀಗಳೇ ಕಾರಣ. ಇನ್ನು ಮುಂದೆ ಜಿಲ್ಲೆಯ ಜನ ಭಯಪಡಬೇಕಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ| ನಾರಾಯಣಗೌಡ ಹೇಳಿದ್ದಾರೆ.

ಶ್ರೀಗಳ ಸಾನ್ನಿಧ್ಯದಲ್ಲಿ ಕೋವಿಡ್ 19 ಟೆಸ್ಟಿಂಗ್ ಲ್ಯಾಬ್ ಉದ್ಘಾಟಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ  ಸಚಿವ ನಾರಾಯಣಗೌಡ, ಆದಿಚುಂಚನಗಿರಿ ಶ್ರೀಗಳನ್ನ ಅಭಿನಂದಿಸಿದರು. ತೀರಾ ಅಗತ್ಯವಿರುವ ಕೋವಿಡ್ -19 ಟೆಸ್ಟಿಂಗ್ ಲ್ಯಾಬ್ ಅನ್ನು ಕೆಲವೇ ದಿನಗಳಲ್ಲಿ ನಿರ್ಮಿಸಿದ್ದಾರೆ. ಇಷ್ಟುದಿನ ಟೆಸ್ಟಿಂಗ್ ರಿಪೋರ್ಟ್ ಗಾಗಿ ಒಂದೆರಡು ದಿನ ಕಾಯಬೇಕಾಗುತ್ತಿತ್ತು. ಈಗ 24 ಗಂಟೆಯಲ್ಲಿ ವರದಿ ಸಿಗಲಿದೆ. ಟೆಸ್ಟಿಂಗ್ ಗೆ ಬೇಕಾದ ಅಗತ್ಯ ಹಣವನ್ನು ಸರ್ಕಾರ ಭರಿಸಲು ಸಿದ್ದವಿದೆ ಎಂದು ಸಚಿವ ನಾರಾಯಣಗೌಡ ತಿಳಿಸಿದ್ದಾರೆ.mandya- Covid-19 -Testing Lab-start-minister- Narayana Gowda-Adichunchanagiri -Medical College

ಇದೇ ವೇಳೆ ಸಾರ್ವಜನಿಕರು ಯಾರೂ ಕೂಡ ಮಧ್ಯ ಹಾಗೂ ಧೂಮಪಾನ ಮಾಡಬೇಡಿ ಎಂದು ಸಚಿವ ನಾರಾಯಣಗೌಡ ಮನವಿ ಮಾಡಿದ್ದಾರೆ. ಇದರಿಂದ ಇಮ್ಯುನಿಟಿ ಪವರ್ ಕಡಿಮೆ ಆಗತ್ತೆ. ಆರೋಗ್ಯಯುತ ಜೀವನಕ್ಕೂ ಇದು ಮಾರಕ. ಹೀಗಾಗಿ ಇಂತ ದುಶ್ಚಟಗಳಿಂದೂರವಿರಿ ಎಂದು  ನಾರಾಯಣಗೌಡ ಮನವಿ ಮಾಡಿದ್ದಾರೆ.

ಅಲ್ಲದೆ ಮೈಶುಗರ್ ಸಕ್ಕರೆ ಕಾರ್ಖಾನೆ ಸಂಬಂಧ ಸಿಎಂ ಜೊತೆ ಮಾತನಾಡಲಾಗಿದೆ. ಖಾಸಗಿಯವರಿಗೆ ಕೊಡುವುದು ಬೇಡ ಎಂದು ಸಿಎಂ ಬಳಿ ಮನವಿ ಮಾಡಿದ್ದೆ, ಅಂತೆಯೆ ಖಾಸಗಿಗೆ ಕೊಡುವ  ನಿರ್ಧಾರ ಕೈ ಬಿಡಲಾಗಿದೆ. ಸರ್ಕಾರವೇ ನಡೆಸಬೇಕಾ ಅಥವಾ O and M ಗೆ ಕೊಡಬೇಕಾ ಅನ್ನೋದನ್ನ ಸಿಎಂ ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಧರಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಸಚಿವ ನಾರಾಯಣಗೌಡ ವಿಶ್ವ ಪರಿಸರ ದಿನದ ಅಂಗವಾಗಿ ಮಠದ ಆವರಣದಲ್ಲಿ ಗಿಡ ನೆಟ್ಟರು. ಶಾಸಕರ ಸುರೇಶ್ ಗೌಡ, ಪರಿಷತ್ ಸದಸ್ಯ ಅಪ್ಪಾಜಿ ಗೌಡ, ಜಿಲ್ಲೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Key words: mandya- Covid-19 -Testing Lab-start-minister- Narayana Gowda-Adichunchanagiri -Medical College

website developers in mysore