ಮದುವೆಗೆ ಬರುವವರ ಮಾಹಿತಿ ನೀಡುವುದು ಕಡ್ಡಾಯ: ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

kannada t-shirts

ಬೆಂಗಳೂರು, ಮೇ 19, 2020 (www.justkannada.in): ವಿವಾಹ ಸಮಾರಂಭಗಳನ್ನು ನಡೆಸುವ ಕುರಿತು ಆರೋಗ್ಯ ಇಲಾಖೆ ಸಲಹೆ ಸೂಚನೆಗಳನ್ನು ನೀಡಿದೆ. ಈ ಸಂಬಂಧ ಕೆಳಗಿನ ಕೆಲ ಸೂಚನೆಗಳನ್ನು ನೀಡಿದೆ.

1) ಯಾವುದೇ ಸಮಾರಂಭಗಳನ್ನು ಆಯೋಜಿಸುವ ಮುನ್ನ ಹಾಗೂ ಸಂಚಾರಕ್ಕೆ ಸ್ಥಳೀಯ ಆಡಳಿತದಿಂದ ಅನುಮತಿ ಪಡೆಯತಕ್ಕದ್ದು.

2) ವಿವಾಹ ಸಮಾರಂಭದಲ್ಲಿ ಅತಿಥಿಗಳ ಸಂಖ್ಯೆ ಗರಿಷ್ಠ 50 ಸೀಮಿತವಾಗಿರುವಂತೆ ಆಯೋಜಿಸತಕ್ಕದ್ದು.

3) ಸೂಕ್ತವಾದ ಸಾರ್ವಜನಿಕ ಸ್ಥಳದಲ್ಲಿ ನೈಸರ್ಗಿಕ ಗಾಳಿ ಬೆಳಕು ಲಭ್ಯವಿರುವಲ್ಲಿ ಸಮಾರಂಭಗಳು ಹಮ್ಮಿಕೊಳ್ಳತಕ್ಕದ್ದು. (ಹವಾ ನಿಯಂತ್ರಣವನ್ನು ಬಳಸ ತಕ್ಕದ್ದಲ್ಲ )

4) ಕಂಟೈನ್ಮೆಂಟ್ ವಲಯದ ವ್ಯಕ್ತಿಗಳು ಇಂಥ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಅವಕಾಶವಿರುವುದಿಲ್ಲ.

5) 65 ವರ್ಷ ಮೇಲ್ಪಟ್ಟವರಿಗೆ, ಗರ್ಭಿಣಿಯರು ಹಾಗೂ 10 ವರ್ಷದೊಳಗಿನ ಮಕ್ಕಳು ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಅವಕಾಶವಿರುವುದಿಲ್ಲ.

6) ಸಮಾರಂಭದ ಪ್ರವೇಶ ದ್ವಾರದಲ್ಲಿ ಹಾಗೂ ಸೂಕ್ತ ಸ್ಥಳಗಳಲ್ಲಿ ಸ್ಯಾನಿಟೈಸರ್‌ಗಳ ವ್ಯವಸ್ಥೆ ಮಾಡತಕ್ಕದ್ದು.

7) ಸಮಾರಂಭಕ್ಕೆ ಆಗಮಿಸುವ ಪ್ರತಿಯೊಬ್ಬರನ್ನೂ ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್‌ ಮಾಡುವುದು ಕಡ್ಡಾಯವಾಗಿರುತ್ತದೆ. ವ್ಯಕ್ತಿಯ ಹಣೆಯಿಂದ 3-15 ಸೆಂಟಿಮೀಟರ್ ದೂರದಲ್ಲಿ ಈ ಸ್ಕ್ಯಾನರ್ ಅನ್ನು ಹಿಡಿದುಕೊಳ್ಳತಕ್ಕದ್ದು.

8) ಜ್ವರ ಶೀತ ಕೆಮ್ಮು ನೆಗಡಿ ಇತ್ಯಾದಿ‌ ಆರೋಗ್ಯ ಸಮಸ್ಯೆಯುಳ್ಳವರು ಸಮಾರಂಭದಲ್ಲಿ ಪಾಲ್ಗೊಳ್ಳುವಂತಿಲ್ಲ. ಮತ್ತು ಅಂತ ಲಕ್ಷಣಗಳಿರುವವರು ತಕ್ಷಣವೇ ವೈದ್ಯರ ಸಲಹೆ ಪಡೆದುಕೊಳ್ಳತಕ್ಕದ್ದು.

9) ಸಮಾರಂಭದಲ್ಲಿ ಭಾಗವಹಿಸುವವರೆಲ್ಲರೂ ಮುಖಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ.

10) ಸಮಾರಂಭದಲ್ಲಿ ಭಾಗವಹಿಸಿದ ಎಲ್ಲಾ ವ್ಯಕ್ತಿಗಳು 1 ಮೀಟರ್ ಗಿಂತ ಹೆಚ್ಚು ದೈಹಿಕ ಅಂತರ ಕಾಯ್ದುಕೊಳ್ಳಬೇಕು

11) ಕೈಗಳನ್ನು ಸ್ವಚ್ಚಗೊಳಿಸಿಕೊಳ್ಳಲು ಅನುಕೂಲವಾಗುವಂತೆ ಹ್ಯಾಂಡ್ ವಾಶ್ ಟಿಶ್ಯು ಪೇಪರ್ ಮತ್ತು ನೀರನ್ನು ತೊಳೆಯುವ ಸ್ಥಳಗಳಲ್ಲಿ / ಶೌಚಾಲಯಗಳಲ್ಲಿ ಪೂರೈಸುವುದು ಕಡ್ಡಾಯ.

12) ಮದ್ಯಪಾನ, ಪಾನ್, ಗುಟಕಾ, ತಂಬಾಕು ಸೇವನೆಯನ್ನು ಸಮಾರಂಭದಲ್ಲಿ ನಿಷೇಧಿಸಲಾಗಿದೆ.

13) ಸಮಾರಂಭ ಸ್ಥಳ ಸ್ವಚ್ಛವಾಗಿರಬೇಕು ಮತ್ತು ಆರೋಗ್ಯಕರ ಪರಿಸರ ಇರತಕ್ಕದ್ದು,

14) ಸಮಾರಂಭದ ಸ್ಥಳಗಳಲ್ಲಿ ಉಗುಳುವುದನ್ನು ನಿಷೇಧಿಸಲಾಗಿದೆ.

15) ಸಮಾರಂಭ ಸ್ಥಳದಲ್ಲಿ ಕೈಗೊಂಡಿರುವ ವ್ಯವಸ್ಥೆಗಳ ಬಗ್ಗೆ ಮತ್ತು ಸಹಕರಿಸಿದ ಬಗ್ಗೆ ಗುರುತಿಸಲ್ಪಟ್ಟ ನೂಡಲ್ ಅಧಿಕಾರಿಗೆ ಮಾಹಿತಿ ನೀಡಬೇಕು.

16) ವಿವಾಹ ಸಮಾರಂಭದಲ್ಲಿ ಪಾಲ್ಗೊಂಡವರ ಹೆಸರುಗಳು, ಅವರ ಸಂಪರ್ಕ ಸಂಖ್ಯೆಯನ್ನು ಕಡ್ಡಾಯವಾಗಿ ದಾಖಲಾತಿ ಮಾಡತಕ್ಕದ್ದು

17) ಸಮಾರಂಭದಲ್ಲಿ ಭಾಗವಹಿಸಲು ಎಲ್ಲ ಅತಿಥಿಗಳು ಗೂಗಲ್ ಪ್ಲೇ ಸ್ಟೋರ್ ನಿಂದ ಆರೋಗ್ಯ ಸೇತು” ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳ ತಕ್ಕದ್ದು

website developers in mysore