ಕುಡಿದ ಮತ್ತಿನಲ್ಲಿ ಮಹಡಿಯಿಂದ ಬಿದ್ದು ವ್ಯಕ್ತಿ ಸಾವು….

ಮೈಸೂರು,ಮಾರ್ಚ್,24,2021(www.justkannada.in): ಕುಡಿದ ಮತ್ತಿನಲ್ಲಿ ಮೂರನೇ ಮಹಡಿಯಿಂದ ಕೆಳಕ್ಕೆ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.jk

ಮೈಸೂರಿನ ಅರವಿಂದನಗರದಲ್ಲಿ ಈ ಘಟನೆ ನಡೆದಿದೆ. ರಾಜೇಶ್(32) ಮೃತಪಟ್ಟ ವ್ಯಕ್ತಿ. ರಾಜೇಶ್  ವೃತ್ತಿಯಲ್ಲಿ ಖಾಸಗಿ ಕಾರ್ ಡ್ರೈವರ್ ಆಗಿದ್ದು, ನಿನ್ನೆ ರಾತ್ರಿ ಪಾನಮತ್ತನಾಗಿದ್ದನು. ಈ ನಡುವೆ ಸ್ಮೋಕ್ ಮಾಡಲು ಮೂರನೇ ಮಹಡಿಗೆ ತೆರಳಿದ್ದ ರಾಜೇಶ್ ಈ ವೇಳೆ ಆಯತಪ್ಪಿ ಕೆಳಬಿದ್ದು ಸಾವನ್ನಪ್ಪಿದ್ದಾನೆ.Man -dies - falling -floor – drunken-mysore

ರಾಜೇಶ್  ಕುಡಿತದ ಚಟಕ್ಕೆ ಬೇಸತ್ತು  ಪತ್ನಿ ತವರು ಮನೆ ಸೇರಿದ್ದಾರೆ. ಈ ಕುರಿತು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Man -dies – falling -floor – drunken-mysore