ಮಲ್ಲುಪುರ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಯಶಸ್ವಿ.

kannada t-shirts

ಮೈಸೂರು,ಅಕ್ಟೋಬರ್,18,2022(www.justkannada.in): ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಮಲ್ಲುಪುರ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಯಶಸ್ವಿಯಾಗಿದೆ.

ಒಟ್ಟು 24 ಸದಸ್ಯರನ್ನು ಹೊಂದಿರುವ  ಮಲ್ಲುಪುರ ಗ್ರಾಮಪಂಚಾಯತಿ ಅಧ್ಯಕ್ಷರಾಗಿದ್ದ ರೋಹಿಣಿ,  ಉಪಾಧ್ಯಕ್ಷರಾಗಿದ್ದ ಗುರು ಮಲ್ಲಮ್ಮ ಅವರ ವಿರುದ್ಧ 17 ಮಂದಿ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿ ಯಶಸ್ವಿಯಾದರು.

ಇಂದು ಗ್ರಾಮ ಪಂಚಾಯತಿಯ ಕಚೇರಿಯಲ್ಲಿ ಮೈಸೂರು ಜಿಲ್ಲಾ ಉಪವಿಭಾಗಧಿಕಾರಿ ಕಮಲಬಾಯಿ ಅವರ ನೇತೃತ್ವದಲ್ಲಿ ನಡೆದ ಅವಿಶ್ವಾಸ ಗೊತ್ತುವಳಿ ಮಂಡಳಿ ಸಭೆಯಲ್ಲಿ  17 ಮಂದಿ ಸದಸ್ಯರು ತಮ್ಮ ಕೈ ಮೇಲೆತ್ತುವ ಮೂಲಕ ಅಧ್ಯಕ್ಷರು ಉಪಾಧ್ಯಕ್ಷರನ್ನು ಪದಚ್ಯುತಗೊಳಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗಮಣಿ, ಪ್ರಕಾಶ್, ಕೋಮಲ, ರಮೇಶ, ಆನಂದ ಸಚಿನ್, ಸಿದ್ದರಾಜು, ರತ್ನಮ್ಮ, ಸುಶೀಲಮ್ಮ, ಮಲ್ಲೇಶ, ಗುರು ಪ್ರಸಾದ್, ಶಶಿ ,ಪವಿತ್ರ ,ಸುನಿತಾ, ರೂಪ ಮದೇವಮ್ಮ, ಮಂಜು, ಪ್ರೇಮ ಹಾಗೂ ಮುಖಂಡರಾದ ಕಿರುಗುಂದ ಶಿವನಾಗ ಕಾಂಗ್ರೆಸ್ ಯುವ ಮುಖಂಡ ಬಿ.ಆರ್ ರಾಕೇಶ್, ಬಿಎಂ ನಾಗರಾಜು ಎಬ್ಯಾ ರಾಜು, ಪ್ರಭುಸ್ವಾಮಿ ಶ್ರೀಕಂಠಸ್ವಾಮಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಇದೇ ವೇಳೆ ಗ್ರಾಮ ಪಂಚಾಯಿತಿ ಪಿಡಿಓ ಗೀತಾ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಬಿಳಿಗೆರೆ ಠಾಣೆಯ ಪೊಲೀಸರಿಂದ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.

Key words: Mallupura-grama panchayath-  president- vice-president – successful.

website developers in mysore