ಬಿಲಿಯನೇರ್ ಬಿಲ್ ಗೇಟ್ಸ್ ಭೇಟಿ ಮಾಡಿದ ಮಲ್ಲಿಕಾ ಶೆರಾವತ್

ಬೆಂಗಳೂರು, ಫೆಬ್ರವರಿ 01, 2019 (www.justkannada.in): ಮಲ್ಲಿಕಾ ಶೆರಾವತ್ ವಿಶ್ವದ ಅತಿ ಹೆಚ್ಚು ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿರುವ ಬಿಲಿಯನೇರ್ ಬಿಲ್ ಗೇಟ್ಸ್ ರನ್ನ ಭೇಟಿ ಮಾಡಿದ್ದಾರೆ.

ಇತ್ತೀಚೆಗೆಷ್ಟೇ ವಾಷಿಂಗ್ಟನ್ ಡಿ.ಸಿಯಲ್ಲಿ ಅಮೇಜಾನ್ ಸಿ.ಇ.ಓ ಮತ್ತು ಸಂಸ್ಥಾಪಕ ಜೆಫ್ ಬೆಝೋಸ್ ಒಂದು ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ನ ಮಲ್ಲಿಕಾ ಶೆರಾವತ್ ಮೀಟ್ ಮಾಡಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದ್ದಾರೆ.

ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಮಲ್ಲಿಕಾ ಶೆರಾವತ್, ”ಮಹಿಳಾ ಸಬಲೀಕರಣದ ಬಗ್ಗೆ ಬಿಲ್ ಗೇಟ್ಸ್ ಜೊತೆಗೆ ಚರ್ಚೆ ಮಾಡಿದ್ದು ಖುಷಿ ಕೊಟ್ಟಿದೆ” ಎಂದು ಮಲ್ಲಿಕಾ ಶೆರಾವತ್ ಬರೆದುಕೊಂಡಿದ್ದಾರೆ.