ಪತ್ರಕರ್ತರ ರಕ್ಷಣೆಗೆ ಕಾನೂನು ರೂಪಿಸಿ: ಸಿಎಂಗೆ ಎಂ.ಲಕ್ಷಣ್ ಪತ್ರ

ಮೈಸೂರು, ಏಪ್ರಿಲ್ 21, 2020 (www.justkannada.in): ಕೊರೊನಾ ಸಂಕಷ್ಟ ಸಮಯದಲ್ಲೂ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರ ರಕ್ಷಣೆಗೆ ಕಾನೂನು ರೂಪಿಸುವಂತೆ ಎಂ.ಲಕ್ಷ್ಮಣ್ ಸಿಎಂಗೆ ಪತ್ರ ಬರೆದಿದ್ದಾರೆ.

ಲಾಕ್ ಡೌನ್ ಸಂಕಷ್ಟ ಹಾಗೂ ಕೊರೊನಾ ಸೋಂಕಿನ ಆತಂಕದ ನಡುವೆಯೂ ಪತ್ರಕರ್ತರು ಸೇವೆ ಸಲ್ಲಿಸುತ್ತಿದ್ದಾರೆ. ಪತ್ರಕೋದ್ಯಮವನ್ನು essential service ಎಂದು ಘೋಷಿಸಿರುವುದರಿಂದ ಅವರ ನೆರವಿಗೆ ಸರಕಾರ ಧಾವಿಸಬೇಕು. ಎಲ್ಲ ಪತ್ರಕರ್ತರಿಗೆ ಕೂಡಲೇ ಪಿಪಿಇ, rapid ಕಿಟ್, ಸ್ಯಾನಿಟೈಸರ್ ಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಸರಕಾರದಿಂದ ಎಲ್ಲ ಪತ್ರಕರ್ತರಿಗೆ 50 ಲಕ್ಷ ರೂ. ವಿಮೆ ಮಾಡಿಸಿಕೊಡಬೇಕು. ಯಾವುದೇ ಪತ್ರಕರ್ತ ಲಾಕ್ ಡೌನ್ ಸಂದರ್ಭದಲ್ಲಿ ಮೃತಪಟ್ಟರೆ ಸರಕಾರದಿಂದ ಪರಿಹಾರ ಹಾಗೂ ಅವರ ಕುಟುಂಬದ ನೆರವಿಗೆ ಧಾವಿಸಬೇಕೆಂದು ಆಗ್ರಹಿಸಿದ್ದಾರೆ.