ಮಹಿಷ ದಸರಾ ಸಮಿತಿಯಿಂದ ಪಂಜಿನ ಮೆರವಣಿಗೆ: ಸಂಸದ ಪ್ರತಾಪ್ ಸಿಂಹ ಭಾವಚಿತ್ರ ಸುಟ್ಟು, ಧಿಕ್ಕಾರ ಕೂಗಿ ಆಕ್ರೋಶ…

ಮೈಸೂರು,ಅ,1,2019(www.justkannada.in):  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ಸಿಕ್ಕಿ ಎರಡು ದಿನ ಕಳೆದಿದ್ದು ಈ ನಡುವೆ ಮಹಿಷ ದಸರಾ ಆಚರಣೆಗೆ ಅವಕಾಶ ನೀಡಲಿಲ್ಲ ಎಂದು  ಮಹಿಷ ದಸರಾ ಸಮಿತಿ ನಿನ್ನೆ ತಡ ರಾತ್ರಿ ಪಂಜಿನ ಮೆರವಣಿಗೆ ನಡೆಸಿ ಸಂಸದ ಪ್ರತಾಪ್ ಸಿಂಹ ವಿರುದ್ದ ಆಕ್ರೋಶ ವ್ಯಕ್ತಪಡಿಸಿತು.

ಮಹಿಷ ದಸರಾ ಸಮಿತಿ  ಸದಸ್ಯರು ಅಶೋಕಪುರಂನ ಅಂಬೇಡ್ಕರ್ ಪಾರ್ಕ್ ನಿಂದ ರಾಮಸ್ವಾಮಿ ವೃತ್ತದವೆರೆಗೆ ಪಂಜಿನ‌ ಮೆರವಣಿಗೆ ನಡೆಸಿ ಸಂಸದ ಪ್ರತಾಪ್ ಸಿಂಹ ಭಾವಚಿತ್ರ ಸುಟ್ಟು, ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಹಿಷ ದಸರಾ ಆಚರಣೆಗೆ ಅವಕಾಶ ಕೊಟ್ಟಿಲ್ಲ. ಬಹುಜನರ ಹಕ್ಕುಗಳಿಗೆ ಸಂಸದ ಪ್ರತಾಪ್ ಸಿಂಹ ಧಕ್ಕೆ ತಂದಿದ್ದಾರೆಂದು  ಪ್ರತಿಭಟನಾಕಾರರು ಕಿಡಿಕಾರಿ ಆಕ್ರೋಶ ಹೊರ ಹಾಕಿದರು.

ಮೈಸೂರಿನ ಚಾಮುಂಡಿ ಬೆಟ್ಟದ ಮಹಿಷಾಸುರ ಪ್ರತಿಮೆ ಬಳಿ ಮಹಿಷದಸರಾ ಆಚರಣೆಗೆ ಪ್ರಗತಿಪರ ಚಿಂತಕರು ಮುಂದಾಗಿದ್ದರು. ಆದರೆ ಸಂಸದ ಪ್ರತಾಪ್ ಸಿಂಹ ಇದಕ್ಕೆ ವಿರೋಧ ವ್ಯಕ್ತಪಡಿಸಿ ಮಹಿಷಾ ದಸರಾಗೆ ಹಾಕಲಾಗಿದ್ದ ಶಾಮಿಯಾನವನ್ನು ತೆರವುಗೊಳಿಸಿದ್ದರು.

Key words: Mahisha Dasara Committee- protest-against-MP-prathap simha-mysore