ಮೈಸೂರಿನಲ್ಲಿ ವಿರೋಧದ ನಡುವೆಯೂ ವಿವಿಧ ಪ್ರಗತಿಪರ ಚಿಂತಕರಿಂದ ಮಹಿಷಾ ದಸರಾ ಆಚರಣೆ…

ಮೈಸೂರು,ಸೆ,27,2019(www.justkannada.in): ಮೈಸೂರಿನಲ್ಲಿ ವಿರೋಧದ ನಡುವೆಯೂ ವಿವಿಧ ಪ್ರಗತಿಪರ ಚಿಂತಕರು ಮಹಿಷಾಸುರ ದಸರಾ ಆಚರಣೆ ಮಾಡಿದರು.

ಮೈಸೂರಿನ ಅಶೋಕ ಪುರಂನ ಅಂಬೇಡ್ಕರ್ ಪಾರ್ಕ್ ನಲ್ಲಿ ಅಂಬೇಡ್ಕರ್ ಪ್ರತಿಮೆಗೆ ಹಾಗೂ ಮಹಿಷಾಸುರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಹಿಷನ ಪರ ವಿವಿಧ ಘೋಷಣೆ ಕೂಗುವ ಮೂಲಕ  ಪ್ರಗತಿಪರ ಚಿಂತಕರು ಮಹಿಷಾ ದಸರಾ ಆಚರಣೆ ಮಾಡಿದರು. ಉರಿಲಿಂಗಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಪ್ರೊ.ಮಹೇಶ್ ಚಂದ್ರ ಗುರು, ಪಾಲಿಕೆ ಸದಸ್ಯ ಪುರುಷೋತ್ತಮ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮೈಸೂರಿನ ಜ್ಞಾನಪ್ರಕಾಶ ಸ್ವಾಮೀಜಿ, ಮಹಿಷ ದಸರಾವನ್ನು ಹಲವು ವರ್ಷಗಳಿಂದ ಆಚರಣೆ ಮಾಡಲಾಗುತ್ತಿದೆ. ಮೈಸೂರಿಗೆ ಮಹಿಷನಿಂದ ಮಹಿಷಪುರ, ಮಹಿಷ ಮಂಡಲ ಅಂತ ಹೆಸರು ಬಂದಿದೆ. ಮೈಸೂರು ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಸಂಸದ ಪ್ರತಾಪ್ ಸಿಂಹ ದಬ್ಬಾಳಿಕೆ ನಡೆಸಿದ್ದಾರೆ. ಪ್ರತಿ ವರ್ಷ ಮೈಸೂರು ದಸರಾ ಆಚರಣೆಗೆ ಮೊದಲೇ ಮಹಿಷ ದಸರಾ ಆಚರಣೆ ಮಾಡ್ತಿದ್ವಿ. ಜಿಲ್ಲಾಡಳಿತ ನಮಗೆ ಅನಮತಿ ಕೊಟ್ಟಿದ್ರು ಬಳಿಕ 144 ಸೆಕ್ಷನ್ ಜಾರಿ ಮಾಡಿದ್ದಾರೆ. ನೆನ್ನೆಯಷ್ಟೇ ಚಾಮುಂಡೇಶ್ವರಿ ಬೆಟ್ಟದಲ್ಲಿ ಹಾಕಿದ್ದ ವೇದಿಕೆ ತೆರುವುಗೊಳಿಸಿ ದಬ್ಬಾಳಿಕೆ ನಡೆಸಿದ್ದಾರೆ ಎಂದು ಪ್ರತಾಪ್ ಸಿಂಹ ವಿರುದ್ದ ಕಿಡಿಕಾರಿದರು.

ಸಂಸದ ಪ್ರತಾಪ್ ಸಿಂಹ ಹನುಮಂತನಿಗೆ ಹುಟ್ಟಿದವರಾ ಅಂತ ಕೇಳಬೇಕಾಗುತ್ತದೆ….

ಸಂವಿಧಾನದಲ್ಲಿ ಎಲ್ಲರಿಗೂ ಅವರದ್ದೇ ಆದ ಆಚರಣೆಗೆ ಅವಕಾಶ ಇದೆ.ಸಂಸದರಾಗಿ ನಮ್ಮ ಹಕ್ಕುಗಳಿಗೆ ಧಕ್ಕೆ ತರೋದು ಸರಿಯಲ್ಲ. ನಮ್ಮನ್ನು ಮಹುಷಾಸುರನಿಗೆ ಹುಟ್ಟಿದವರು ಅಂತ ಕರೆದಿದ್ದಾರೆ. ನಮಗೆ ಸಂತೋಷ ಇತಿಹಾಸ ಪ್ರಸಿದ್ಧ ಮಹಿಷನಿಗೆ ಹುಟ್ಟಿದವರು ಅನ್ನಿಸಿಕೊಳ್ಳೋಕೆ. ನಾವು ಒಂದು ಮಾತು ಕೇಳ ಬೇಕಾಗುತ್ತದೆ. ಸಂಸದ ಪ್ರತಾಪ್ ಸಿಂಹ ಹನುಮಂತನಿಗೆ ಹುಟ್ಟಿದವರಾ ಅಂತ ಕೇಳಬೇಕಾಗುತ್ತದೆ. ನಾವು ಇಂತಹ ಸನ್ನಿವೇಶದಲ್ಲಿ ಮೈಸೂರಿನ ಅಂಬೇಡ್ಕರ್ ಉದ್ಯನವನದಲ್ಲಿ ಮಹಿಷ ದಸರಾ ಆಚರಣೆ ಮಾಡ್ತಿದ್ದೇವೆ. ಕಳೆದ ಏಳು ವರ್ಷಗಳಿಂದ ಆಚರಣೆ ಮಾಡ್ತಿದ್ವಿ. ಆದ್ರೆ ಆವಾಗ ಒಂದು ಸಂವಿಧಾನ ಇತ್ತಾ ಈಗ ಒಂದು ಸಂವಿಧಾನ ಇದೆಯಾ.? ಎಂದು ಪ್ರಶ್ನಿಸಿದರು.

ನಮಗೆ ರಾತ್ರಿ ಒಂಬತ್ತು ಗಂಟೆಗೆ ಅವಕಾಶ ಕೊಡ್ತಿವಿ ಅಂತ ಹೇಳಿ ಬಳಿಕ 144 ಸೆಕ್ಷನ್ ಜಾರಿ ಮಾಡಿದ್ದಾರೆ ಅಂತ ಹೇಳ್ತಾರೆ. ನೀವು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ರನ್ನ ಮಹಿಷ ದಸರಾಗೆ ಕರೆತರಲು ಆಗಿಲ್ಲ. ನಿಮ್ಮ ಜಿಲ್ಲಾಡಳಿತ ಮಾಡ್ತಿರೋದು ಕುಣಿದು ಕುಪ್ಪಳಿಸುವ ದಸರಾ. ನೆರೆಗಳಲ್ಲಿ ಬರ ಬಂದು ಜನ ನರಳಾಡುತಿದ್ದಾರೆ. ನೀವು ಕೊಟ್ಟಿರುವ ಹತ್ತು ಸಾವಿರ ಚೆಕ್ ಗಳು ವಾಪಾಸ್ ಬಂದಿವೆ. ನಿಮ್ಮ ಜಿಲ್ಲಾಡಳಿತ, ಸರ್ಕಾರಗಳಿಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದರು.

144 ಸೆಕ್ಷನ್ ಜಾರಿಯಿದ್ದಾಗ ನೀವು ಹನುಮಂತನ ಉತ್ಸವ ಮಾಡ್ತಿರಿ. ನೀವು ಯಾವ ಸಂವಿಧಾನದ ಅಡಯಲ್ಲಿದ್ದಿರಿ. ನಾವು ಮುಂದಿನ ಹೋರಾಟದ ಬಗ್ಗೆ ಚರ್ಚೆ ಮಾಡಿ ತೀರ್ಮಾನಕ್ಕೆ ಬರ್ತಿವಿ ಎಂದು  ಜ್ಞಾನಪ್ರಕಾಶ್ ಸ್ವಾಮೀಜಿ ಹೇಳಿದರು.

Key words: Mahisha dasara-celebration, progressive thinkers –  Mysore