ಪಾದರಕ್ಷೆ ಧರಿಸಿ ಮಹಾತ್ಮರ ಪೋಟೊಗೆ ಪುಷ್ಪ ನಮನ ಸಲ್ಲಿಸಿದ ವಿಚಾರ:  ವಿಷಾದ ವ್ಯಕ್ತಪಡಿಸಿದ ಬಿಡಿಎ ಆಯುಕ್ತ….

ಬೆಂಗಳೂರು,ಆ,18,2020(www.justkannada.in): ಸ್ವಾತಂತ್ರ ದಿನಾಚಾರಣೆ ವೇಳೆ ಶೂ ಧರಿಸಿ ಮಹಾತ್ಮರ ಫೋಟೊಗಳಿಗೆ ಪುಷ್ಪನಮನ ಸಲ್ಲಿಸಿ ವಿವಾದಕ್ಕೆ ಗುರಿಯಾಗಿದ್ದ ಬಿಡಿಎ ಆಯುಕ್ತ ಮಹದೇವ್ ಅವರು ಈ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.jk-logo-justkannada-logo

ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಬಿಡಿಎ ಆಯುಕ್ತ ಮಹದೇವ್, ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆವರಣದಲ್ಲಿ‌ ಈ ಬಾರಿ ಸ್ವಾತಂತ್ರ್ಯೋತ್ಸವ ಗೌರವ ಪೂರ್ವಕವಾಗಿ ಜರುಗಿತು. ಧ್ವಜಾರೋಹಣದ‌‌ ಪೂರ್ವದಲ್ಲಿ  ರಾಷ್ಟ್ರಪಿತ ಮಹಾತ್ಮಗಾಂಧಿ & ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರಿಗೂ ಪುಷ್ಪ ನಮನ  ಸಲ್ಲಿಸಲಾಯಿತು.

ಆದರೆ, ಮಹಾತ್ಮರಿಗೆ ಗೌರವ ಸಲ್ಲಿಸುವ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಪಾದರಕ್ಷೆ ಧರಿಸಿ ಗೌರವ ಸಲ್ಲಿಸಿಲ್ಲ‌. ಸ್ವತಂತ್ರ್ಯೋತ್ಸವ ಆಚರಣೆಯಲ್ಲಿ ಆಕಸ್ಮಿಕವಾಗಿ ಮರೆವಿನಿಂದ ನಡೆದ ಘಟನೆ. ಈ ಬಗ್ಗೆ ವಿಷಾದವಿದೆ. ನನಗೂ ಬೇಸರವಾಗಿದೆ ಎಂದು ಮಹದೇವ್ ತಿಳಿಸಿದ್ದಾರೆ.

ಗಾಂಧಿಜೀ ಅವರ ತತ್ವ ಆದರ್ಶಗಳು & ಅಂಬೇಡ್ಕರ್ ರಚಿತ ಸಂವಿಧಾನ ಬದ್ದವಾಗಿಯೇ ನಾನು ಕಾರ್ಯ ನಿರ್ವಹಿಸುತ್ತಿರುತ್ತೇನೆ. ಈ ಘಟನೆಯಿಂದ ಹಲವರಿಗೆ ನನ್ನಂತೆಯೇ ಬೇಸರವಾಗಿದೆ. ಇದರಿಂದ ನೋವಿಗೊಳಗಾಗಿರೋ ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳಲ್ಲಿ ತೀವ್ರ ವಿಷಾದ ವ್ಯಕ್ತಪಡಿಸುತ್ತೇನೆಂದು ಬಿಡಿಎ ಆಯುಕ್ತರು ಹೇಳಿದ್ದಾರೆ.mahatmagandhi-photo-wearing-shoe-bda-commissioner

74ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಮಹಾದೇವ್ ಅವರು ದ್ವಜಾರೋಹಣ ಮಾಡಿದ ಮೇಲೆ ಮಹಾತ್ಮಾಗಾಂಧಿ ಸೇರಿದಂತೆ ವಿವಿಧ ಗಣ್ಯರ ಫೋಟೋಗಳಿಗೆ ಪುಷ್ಪಗುಚ್ಛ ಸಮರ್ಪಿಸುವ ವೇಳೆ ಪಾದರಕ್ಷೆ ಧರಿಸಿ ಪುಷ್ಪನಮನ ಸಲ್ಲಿಸಿದ್ದರು.

Key words: Mahatmagandhi- photo- wearing –shoe-BDA- Commissioner