ವಿಶ್ವಾಸ ಮತ ಗೆದ್ದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ: ನೂತನ ಸರ್ಕಾರದಿಂದ ಬಹುಮತ ಸಾಬೀತು….

ಮುಂಬೈ,ನ,30,2019(www.justkannada.in):  ಎನ್‌ಸಿಪಿ-ಕಾಂಗ್ರೆಸ್ – ಶಿವಸೇನೆ ಮೈತ್ರಿಕೂಟದಲ್ಲಿ ಮಹಾರಾಷ್ಟ್ರ ಸಿಎಂ ಆಗಿ ಅಧಿಕಾರದ ಗದ್ದುಗೆಗೇರಿರುವ ಉದ್ಧವ್ ಠಾಕ್ರೆ ತಮ್ಮ ಸರ್ಕಾರದ ಬಹುಮತವನ್ನು ಸಾಬೀತುಪಡಿಸಿದ್ದಾರೆ.

ಇಂದು ನಡೆದ ಎನ್‌ಸಿಪಿ-ಕಾಂಗ್ರೆಸ್ – ಶಿವಸೇನೆ ನೂತನ ಸರ್ಕಾರದ ವಿಶ್ವಾಸ ಮತಯಾಚನೆಯಲ್ಲಿಮಹಾ ವಿಕಾಸ ಅಘಾಡಿ ಪರವಾಗಿ 169 ಮತ ಚಲಾವಣೆಯಾಗಿದೆ.  169 ಶಾಸಕರು ನೂತನ ಸರ್ಕಾರದ ಪರ ಬೆಂಬಲಿಸಿ ಮತ ಚಲಾಯಿಸಿದರು. ಇನ್ನು ವಿಶ್ವಾಸಮತಯಾಚನೆ ವೇಳೆ 105 ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿ ಹೊರನಡೆದರು. ನಾಲ್ವರು ಶಾಸಕರು ಸದನದಲ್ಲಿ ಹಾಜರಿದ್ದರೂ ಮತ ಚಲಾಯಿಸಲಿಲ್ಲ.

ಮಹಾರಾಷ್ಟ್ರ ವಿಧಾನಸಭೆಯ ಹಂಗಾಮಿ ಸ್ಪೀಕರ್, ಕಾಳಿದಾಸ್ ಕೊಲಂಬಕರ್ ಅವರ ಸ್ಥಾನಕ್ಕೆ ಎನ್‌ಸಿಪಿಯ ದಿಲೀಪ್ ವಲ್ಸೆ ಪಾಟೀಲ್ ಅವರನ್ನು ನೇಮಿಸಲಾಗಿತ್ತು. . ಪಾಟೀಲ್ ಅವರ ಮೇಲ್ವಿಚಾರಣೆಯಲ್ಲಿ ಹೊಸ ಸರ್ಕಾರ ತನ್ನ ಬಹುಮತವನ್ನು ಸಾಬೀತು ಪಡಿಸಿದೆ. ಈ ಮೂಲಕ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಸರ್ಕಾರ ಸೇಫ್ ಆಗಿದೆ.

Key words: Maharashtra CM- Uddhav Thackeray -won – confidence vote-Prove -majority – new government.