ಶಿವಾಜಿ ಪ್ರತಿಮೆ ಧ್ವಂಸ: ಕರ್ನಾಟಕ ಸರಕಾರದ ವಿರುದ್ಧ ಮಹಾರಾಷ್ಟ್ರ ಸಿಎಂ ಆಕ್ರೋಶ

Promotion

ಬೆಂಗಳೂರು, ಡಿಸೆಂಬರ್ 19, 2021 (www.justkannada.in): ಛತ್ರಪತಿ ಶಿವಾಜಿ ಮಹಾರಾಜ್‌ ಪ್ರತಿಮೆಯನ್ನು ಧ್ವಂಸಗೊಳಿಸಿದ ಘಟನೆ ಸಂಬಂಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಧ್ಯೆ ಪ್ರವೇಶಕ್ಕೆ ಸಿಎಂ ಉದ್ಧವ್‌ ಠಾಕರೆ ಆಗ್ರಹಿಸಿದ್ದಾರೆ.

ಶಿವಾಜಿ ತಮಗೆ ಮಾತ್ರ ‘ದೈವಸ್ವರೂಪಿ’ ಅಲ್ಲ, ಬದಲಾಗಿ ಇಡೀ ದೇಶಕ್ಕೇ ಆಗಿದ್ದಾರೆ, ಅವರಿಗೆ ಅವಮಾನವಾದರೆ ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ನಮ್ಮ ಪ್ರೀತಿಯ ದೈವಮಾನವನಿಗೆ ಅವಮಾನ ಮಾಡುವ ಘಟನೆ ನಡೆದಿದ್ದು, ಕರ್ನಾಟಕ ಸರ್ಕಾರ ಇದಕ್ಕೆ ಜಾಣಗುರುಡುತನ ಪ್ರದರ್ಶಿಸಿದೆ, ಎಂದು ಉದ್ಧವ್‌ ಠಾಕ್ರೆ ಹೇಳಿದ್ದಾರೆ.

ಮಹಾರಾಜರ ಹೆಸರನ್ನು ಬರೀ ರಾಜಕೀಯವಾಗಿ ಮಾತ್ರ ಬಳಸಲಾಗುತ್ತಿದ್ದು, ನಮ್ಮ ದೇವರಿಗೆ ಅವಮಾನವಾದಾಗ ಅವರು ಕ್ರಮ ಜರುಗಿಸುತ್ತಿಲ್ಲ,” ಎಂದು ದೂರಿದ್ದಾರೆ.