ಲೂಸಿಯಾ ಪವರ್ ಜತೆ ಅಮಲಾ ಪೌಲ್ ‘ವೆಬ್ ಸಿರೀಸ್’

ಬೆಂಗಳೂರು, ಜನವರಿ 27, 2021 (www.justkannada.in): ಲೂಸಿಯಾ, ಯು ಟರ್ನ್ ಖ್ಯಾತಿಯ ಪವನ್ ಕುಮಾರ್ ಅವರು ನಟಿ ಅಮಲಾ ಪೌಲ್ ಅವರ ಜೊತೆ ವೆಬ್ ಸರಣಿ ಮಾಡಲು ಹೊರಟಿದ್ದಾರೆ.

ಹೌದು. ಕಾಜಲ್ ಅಗರ್ವಾಲ್, ಸಮಂತಾ ಅಕ್ಕಿನೇನಿ , ತಮನ್ನಾ, ನಂತರ ಅಮಲಾ ಪೌಲ್  ಕೂಡ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ವಿಶೇಷ ಎಂದರೆ ಇದರ ನೇತೃತ್ವ ಕನ್ನಡ ನಟ, ನಿರ್ದೇಶಕ ಪವನ್ ಕುಮಾರ್ ವಹಿಸಿಕೊಳ್ಳುತ್ತಿದ್ದಾರೆ.

ಈ ವೆಬ್ ಸರಣಿಯು ಒಟ್ಟು 8 ಸಂಚಿಕೆಗಳನ್ನು ಹೊಂದಿದೆ. ದೊಡ್ಡ ಬಜೆಟ್ ನಲ್ಲಿ ಈ ವೆಬ್ ಸೀರಿಸ್ ಅನ್ನು ನಿರ್ಮಿಸಲಾಗುತ್ತಿದೆ.