ಲವ್ ಮಾಕ್ಟೇಲ್ 2 ರಿಲೀಸ್: ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ

ಬೆಂಗಳೂರು, ಫೆಬ್ರವರಿ 11, 2022 (www.justkannada.in): ಸಾಕಷ್ಟು ಕುತೂಹಲ ಮೂಡಿಸಿದ್ದ ಲವ್ ಮಾಕ್ಟೇಲ್ 2 ರಿಲೀ‍ಸ್ ಆಗಿದೆ.

ಲವ್ ಮಾಕ್ಟೇಲ್ ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರ ಲವ್ ಮಾಕ್ಟೇಲ್ ನೋಡಿ ಸಿನಿ ಪ್ರಿಯರು ಮೆಚ್ಚಿಕೊಂಡಿದ್ದರು.

ಹೀಗಾಗಿ ಲವ್ ಮಾಕ್ಟೇಲ್ 2 ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಟೀಸರ್ ಹಾಗೂ ಹಾಡುಗಳು ಕೂಡ ಸಿನಿ ಪ್ರಿಯರ ಮೆಚ್ಚುಗೆ ಗಳಿಸಿದ್ದವು.

ವಿಶೇಷ ಎಂದರೆ ಒಂದೆಡೆ ಲವ್ ಮಾಕ್ಟೇಲ್ 2 ರಿಲೀ‍ಸ್ ಆಗಿ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವ ಖುಷಿಯಾದರೆ ಇತ್ತ, ಅದೇ ಸಿನಿಮಾದಲ್ಲಿ ನಟಿಸಿದ್ದ ನಟಿ ಸುಷ್ಮಿತಾ ಗೌಡ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.