ಒತ್ತಡದ ನಡುವೆಯು ಪಕ್ಷಿಗಳ ಮೇಲಿನ ಪ್ರೀತಿ: ‘ಬರ್ಡ್ ವಾಚಿಂಗ್’ ಇವರ ಫ್ಯಾಶನ್: ಪರಿಸರ ಪ್ರೇಮಿಗಳ ಮನಗೆದ್ದ ಮೈಸೂರು ಜಿಲ್ಲಾಧಿಕಾರಿ….

ಮೈಸೂರು,ಡಿ,30,2019(www.justkannada.in): ಸದಾ ಜೀವನ ಜಂಜಾಟದ ನಡುವೆ ಸಾಮಾನ್ಯ ಜನರೆ ತಮ್ಮ ಒಳ್ಳೆಯ ಹವ್ಯಾಸಗಳನ್ನು ಮರೆತುಬಿಟ್ಟುರುತ್ತಾರೆ. ಇನ್ನು ಇಡೀ ಜಿಲ್ಲೆಯ ಜವಾಬ್ದಾರಿ ಹೊತ್ತವರ ಪಾಡೇನು. ? ಸದಾ ಸಭೆ, ಅಭಿವೃದ್ಧಿ ಆಡಳಿತದ ಜೊತೆಗೆ ಇಡೀ ಜಿಲ್ಲೆಯ ಹೊಣೆ ಹೊತ್ತು, ಒತ್ತಡದ ಕೆಲಸದ ನಡುವೆಯೂ ಕೂಡ ಇಲ್ಲೊಬ್ಬ ಆಧಿಕಾರಿ ತಮ್ಮ ಹವ್ಯಾಸದೊಂದಿಗೆ ಪರಿಸರ ಪ್ರೇಮಿಗಳ ಗಮನ ಸೆಳಿದಿದ್ದಾರೆ.

ಇವರ ಪಕ್ಷಿಗಳ ಮೇಲಿನ ಪ್ರೇಮ ಎಲ್ಲರನ್ನ ನಿಬ್ಬೆರಗಾಗಿಸುತ್ತೆ.  ವಿವಿಧ ಬಗೆಯ ಪಕ್ಷಿ ಪ್ರಭೇಧಗಳ ಬಗ್ಗೆ ಅಪಾರ ಜ್ಞಾನ ಹೊಂದಿರುವ ಇವರು ಪಕ್ಕಾ ಪಕ್ಷಿ ಪ್ರೇಮಿ, ಪಕ್ಷಿ ಕಂಡಾಕ್ಷಣ ಕೂತೂಹಲದ ಕಣ್ಣು ಅದರತ್ತ ನಾಟುತ್ತದೆ. ಒತ್ತಡದ ನಡುವೆಯು  ಪಕ್ಷಿಗಳ ಮೇಲಿನ ಪ್ರೇಮದಿಂದ ಸಿಕ್ಕ ಅಲ್ಪ ಸಮಯವನ್ನು ಪಕ್ಷಿ ವೀಕ್ಷಣೆಗೆ ಮೀಸಲಿಟ್ಟು ಸಾವುರಾರು ಪಕ್ಷಿಗಳ ಪೋಟೊಗಳನ್ನು ತಮ್ಮ ಕ್ಯಾಮರದಲ್ಲಿ ಸೆರೆ ಹಿಡಿದ್ದಾರೆ. ಅವರಾರು ಅಂತೀರಾ..? ಅವರೆ ನಮ್ಮ ಹೆಮ್ಮೆಯ ಮೈಸೂರಿನ ಜಿಲ್ಲಾಧಿಕಾರಿ ಅಭಿರಾಮ ಜಿ ಶಂಕರ್.

ಹೌದು ಮೈಸೂರು ಜಿಲ್ಲಾಧಿಕಾರಿಗಳಾಗಿ ಸದಾ ಮೀಟಿಂಗ್ ,ಜಿಲ್ಲೆಯ ಆಡಳಿತಾತ್ಮಕ ಕೆಲಸಗಳನ್ನು ಜವಾಬ್ದಾರಿಯಿಂದ ನಿಭಾಯಿಸುವ ಇವರು  ಪಕ್ಷಿ ವೀಕ್ಷಣೆಯಲ್ಲು ಎತ್ತಿದ ಕೈ. ಬರ್ಡ್ ವಾಚಿಂಗ್ ಇವರ ಫ್ಯಾಶನ್,  ತಮ್ಮ ವಿಶೇಷ ಹವ್ಯಾಸದೊಂದಿಗೆ ಇತರರಿಗೂ ಇವರು ಮಾದರಿಯಾಗಿದ್ದಾರೆ. ಪಕ್ಷಿ ವೀಕ್ಷಣೆ ಎಂದರೆ ಕೇವಲ ಬಣ್ಣಬಣ್ಣ ಪಕ್ಷಿಗಳನ್ನ ನೋಡಿ ಕಣ್ತುಂಬಿಕೊಳ್ಳುವು ಅಷ್ಟೇ ಅಲ್ಲ ಯಾವುದೇ ಹಕ್ಕಿಗಳನ್ನು ಇಂತದ್ದೆ ಎಂದು ಸುಲಭವಾಗಿ ಗುರುತಿಸುವ ಜ್ಞಾನ ಹೊಂದಿದ್ದಾರೆ. ಹಕ್ಕಿಗಳನ್ನು ಕೇವಲ ನೋಡುವುದಷ್ಟೆ ಅಲ್ಲ ಇವರೊಬ್ಬ ಅದ್ಭುತ ಬರ್ಡ್ ಪೋಟೋಗ್ರಾಪರ್ ಕೂಡ ಹೌದು.

ವಿವಿಧ ಬಗೆ ಪಕ್ಷಿ ಪ್ರಭೇದಗಳ ಬಗ್ಗೆ ವಿವರವಾಗಿ ತಿಳಿದುಕೊಂಡಿರುವ  ಅಭಿರಾಮ್ ಜೀ ಶಂಕರ್, ಅಪ್ಪಟ ಪಕ್ಷಿ ಪ್ರೇಮಿ. ವಲಸೆ ಹಕ್ಕಿಗಳ ಹಲವಾರು  ಗಣತಿಯಲ್ಲೂ ಭಾಗವಹಿಸಿದ್ದಾರೆ. ಕಾಲೇಜು ದಿನಗಳಲ್ಲೇ ಪಕ್ಷಿ ವೀಕ್ಷಣೆ ಹವ್ಯಸ ಬೆಳೆಸಿಕೊಂಡಿದ್ದ ಇವರು. ನಂತರ ಖ್ಯಾತ ಪಕ್ಷಿ ಪರಿಣತರ ಜೊತೆ ಪಕ್ಷಿ ವೀಕ್ಷಣೆಯಲ್ಲಿ ಭಾಗಿಯಾಗಿ ಹಲವಾರು ಅಪರೂಪದ ಪಕ್ಷಿಗಳ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.

ಮೈಸೂರಿನ ತಮ್ಮ ನಿವಾಸದ ಸುತ್ತಮುತ್ತ ಸಾಕಷ್ಟು   ವಿಶೇಷ ಪ್ರಭೇದ ಹಕ್ಕಿಗಳನ್ನು ಕಂಡಿದ್ದಾರೆ. ಪಕ್ಷಿ ವೀಕ್ಷಣೆ ಕೆಲಸದ ಒತ್ತಡವನ್ನೂ ಕಡಿಮೆ ಮಾಡುತ್ತದೆ. ಮೈಸೂರಿನಲ್ಲಿ ಪಕ್ಷಿಗಳ ಇರುವಿಕೆಗೆ ವಿಶೇಷವಾದ ಪರಿಸರ ಇದೆ. ಅದನ್ನ ಉಳಿಸಿಕೊಂಡು ಪಕ್ಷಿಗಳಿಗೆ ಪೂರಕವಾದ ಮತ್ತಷ್ಟು ವಾತವರಣ ಕಲ್ಪಿಸಿಕೊಳ್ಳಬೇಕು ಎನ್ನುವುದು ಇವರ ಅಭಿಪ್ರಾಯ.

ತಾವು ಕಂಡ ವಲಸೆ ಹಕ್ಕಿಗಳ ಚಿತ್ರಗಳನ್ನು ಹಕ್ಕಿಗಳ ಹೆಸರು, ಸ್ಥಳ, ದಿನಾಂಕ ಮತ್ತು ಸಮಯದ ಸಮೇತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಇವರ ಕಾರ್ಯ ವೈಖರಿಗೆ ಸಾಕಷ್ಟು ಪಕ್ಷಿ ಪ್ರೇಮಿಗಳು ಫಿದಾ ಆಗಿದ್ದಾರೆ. ಇದು ಅವರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ.

ಇಬರ್ಡ್ ಇಂಡಿಯಾ ಎಂಬ ವೆಬ್‌ಸೈಟ್ ಪಕ್ಷಿಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ.  ಈ ವೆಬ್ ಸೈಟ್ ನಲ್ಲೂ ಕೂಡ ತಾವು ಕಂಡ ಪಕ್ಷಿಗಳ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.

ಇಷ್ಟೆ ಅಲ್ಲ ಮೈಸೂರಿನಲ್ಲಿ ಪ್ರತಿ ವರ್ಷದ ಮಾಗಿ ಉತ್ಸವದಲ್ಲಿ ಬರ್ಡ್ ಫೆಸ್ಟ್ ಎಂಬ ವಿನೂತ ಕಾರ್ಯಕ್ರಮ ಆಯೋಜನೆ ಮಾಡಿ ಹಲವಾರು ತಜ್ಞರು ಹಾಗೂ ಪಕ್ಷಿ ವೀಕ್ಷಕರೊಂದಿಗೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಭಾಗವಹಿಸಿ ಇತರಿಗೆ ಸ್ಪೂರ್ತಿಯಾಗಿದ್ದಾರೆ.

ಇಂತಹ ಹವ್ಯಾಸಗಳು ಸರ್ಕಾರಿ ನೌಕರಲ್ಲಿ ಇರುವುದ ಬಹಳ ವಿರಳ ಅದರಲ್ಲೂ ಜಿಲ್ಲಾಧಿಕಾರಿಯಂತಹ ದೊಡ್ಡ ಹುದ್ದೆಯಲ್ಲಿ ಇರುವವರಿಗೆ ಇಂತಹ ಹವ್ಯಾಸಗಳು ಬಹಳ ಅಪರೂಪವೆ ಸರಿ. ಒತ್ತಡದ ಕೆಲಸ ಕಾರ್ಯದ ನಡುವೆ ಯುವ ಉತ್ಸಾಹಿ ಯುವ ಪಕ್ಷಿ ವೀಕ್ಷಕರಿಗೆ ಪ್ರೇರಣೆಯಾಗಿದ್ದರೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್.

Key words: Love –birds- stress-  Mysore –DC- abhiram ji shanker