ಸರಳ ದಸರಾ ಹೆಸರಿನಲ್ಲಿ ಲೂಟಿ : ರಾಜವಂಶಸ್ಥರಿಗೆ 40 ಲಕ್ಷ ರಾಜಧನ ಕೊಡುವ ಅಗತ್ಯ ಏನಿತ್ತು-ಪ್ರೊ.ನಂಜರಾಜೇ ಅರಸ್ ಆಕ್ಷೇಪ..

kannada t-shirts

ಮೈಸೂರು,ನವೆಂಬರ್,2,2020(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆಗೆ ಆದ ಖರ್ಚು ವೆಚ್ಚದ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಲೆಕ್ಕ ನೀಡಿದ ಬೆನ್ನಲ್ಲೆ ಇದೀಗ ದಸರಾ ಆಚರಣೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್  ಆರೋಪ ಮಾಡಿದ್ದಾರೆ.jk-logo-justkannada-logo

ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿರುವ ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್,   ಸರಳ ದಸರಾ ಹೆಸರಿನಲ್ಲಿ ಲೂಟಿ ಮಾಡಿದ್ದಾರೆ. ಸರಳ ಆಚರಣೆಯಲ್ಲೇ ಇಷ್ಟೋಂದು ಲೂಟಿಯಾದ್ರೆ, ಇನ್ನೇನಾದ್ರೂ ಅದ್ದೂರಿ ದಸರಾ ಆಗಿದ್ರೆ ಇನ್ನೇಷ್ಟು ಲೂಟಿ ಮಾಡಿರೋರು. ಸರ್ಕಾರಿ ಸ್ವಾಮ್ಯದಲ್ಲಿರುವ ಅರಮನೆ ಒಳಗೆ ನಡೆದ ದಸರಾಗೆ ಇಷ್ಟೊಂದು ಖರ್ಚು ಮಾಡಬೇಕಿತ್ತಾ  ಎಂದು ಪ್ರಶ್ನಿಸಿದ್ಧಾರೆ.

ಇನ್ನು ರಾಜವಂಶಸ್ಥರಿಗೆ ರಾಜಧನ ನೀಡುರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ನಂಜರಾಜೇ ಅರಸ್, ರಾಜ ವಂಶಸ್ಥರಿಗೆ 40 ಲಕ್ಷ ರಾಜಧನ ಕೊಡುವ ಅಗತ್ಯ ಏನಿತ್ತು.  ಆಶಾ ಕಾರ್ಯಕರ್ತೆಯರಿಗೆ 200 ರೂ ಹೆಚ್ಚು ಮಾಡಿ ಅಂದ್ರೆ ಮಾಡಲಿಲ್ಲ. ಐದು ಆನೆಗಳ ನಿರ್ವಹಣೆಗೆ 35 ಲಕ್ಷ ಖರ್ಚು ತೋರಿಸಿದ್ದಾರೆ. ಆನೆಗಳಿಗೆ ಅದೆಂತಹ ಆಹಾರ ಕೊಟ್ಟಿದ್ದಾರೆ. ಇವರಿಗೆಲ್ಲಾ ಮಾನ ಮರ್ಯಾದೆ ಇದೆಯಾ ಎಂದು ಕಿಡಿಕಾರಿದ್ದಾರೆ.

ಎರಡು ಕಡೆ ವೇದಿಕೆ ನಿರ್ಮಾಣಕ್ಕೆ 41 ಲಕ್ಷ ಯಾಕೆ ಖರ್ಚು ಮಾಡಿದ್ದಾರೆ. ಸರ್ಕಾರಿ ಸ್ವಾಮ್ಯದ ಚಂದನ ವಾಹಿನಿಗೆ 6 ಲಕ್ಷ ಕೊಟ್ಟಿದ್ದಾರೆ. ಚಂದನ ವಾಹಿನಿಯಲ್ಲಿ ಲೈವ್ ಕೊಟ್ಟರೂ ಲೈವ್ ಸ್ಟ್ರೀಮಿಂಗ್‌ ಗಾಗಿ ಪ್ರತ್ಯೇಕ ಐದು ಲಕ್ಷ ಕೊಟ್ಟಿದ್ದಾರೆ‌. ಮೈಸೂರು ಜಿಲ್ಲಾ ಮಂತ್ರಿಗಳ ಸುತ್ತಮುತ್ತ ನುಂಗು ಬಾಕರಿದ್ದಾರೆ.  ಜೇನುಗೂಡಿಗೆ ಕೈ ಹಾಕಿ ಡೆಟಾಲ್‌ ನಿಂದ ಕೈ ತೊಳೆದು ಕೊಳ್ಳೋಕೆ ಆಗುತ್ತಾ..? ಕೈ ನೆಕ್ಕಲೇ ಬೇಕು‌. ದಸರಾ ಆಚರಣೆಯಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಪ್ರೊ‌.ನಂಜರಾಜೆ ಅರಸ್ ಆರೋಪಿಸಿದ್ದಾರೆ.looted-name-simple-dasara-40-lakhs-mysore-dynasty-prof-nanjaraje-arus-objection

ನಿನ್ನೆಯಷ್ಟೇ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ದಸರಾ ಖರ್ಚು ವೆಚ್ಚದ ಲೆಕ್ಕ ಕುರಿತು ವಿವರ ನೀಡಿದರು. ಸರಳ ದಸರಾಗೆ ಖರ್ಚಾಗಿದ್ದು ಕೇವಲ 2.91ಕೋಟಿ. ಬಿಡುಗಡೆಯಾದ ಹಣದಲ್ಲಿ ಹತ್ತು ಕೋಟಿ ಉಳಿತಾಯವಾಗಿದೆ ಎಂದು ಜಿಲ್ಲಾ ಉಸ್ತುವರಿ ಸಚಿವ ಎಸ್.ಟಿ.ಸೋಮಶೇಖರ್ ದಸರಾ ಖರ್ಚು ವೆಚ್ಚದ ಲೆಕ್ಕ ನೀಡಿದ್ದರು.

Key words: Looted – name -simple dasara- 40 lakhs –mysore-dynasty – Prof. Nanjaraje Arus -objection.

website developers in mysore