ಶೋಕಿ ಜೀವನಕ್ಕಾಗಿ ಈ ಕಳ್ಳರು ಏನು ಮಾಡಿದ್ದಾರೆ ನೋಡಿ…!

ಬೆಂಗಳೂರು,ನವೆಂಬರ್,08,2020(www.justkannada.in) :  ಮನೆ ಮುಂದೆ ನಿಲ್ಲಿಸಿದ ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧಿಸಿ, 2,69,000 ಬೆಲೆಬಾಳುವ ನಾಲ್ಕು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. kannada-journalist-media-fourth-estate-under-loss

ಜಬೀವುಲ್ಲಾ, ಅಬ್ದುಲ್ ಹಫೀಜ್, ಸೈಫ್ ಹುಸೇನ್ ಆರೋಪಿಗಳನ್ನು ಬಂಧಿಸುವಲ್ಲಿ ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾತ್ರಿ ಕಳೆದು ಬೆಳಗಾಗುವುದರೊಳಗೆ ಮನೆಯ ಮುಂದಿದ್ದ ಬೈಕ್ ಮಾಯ

ವಿಜಯನಗರ ಆರ್.ಪಿ.ಸಿ ಲೇಔಟ್ ನಲ್ಲಿ ವಿನಯ್ ಎಂಬುವರು ಮನೆ ಮುಂದೆ ಟಿ.ಎಸ್.ಜುಪಿಟರ್ ಸ್ಕೂಟರ್ ಕೆ.ಎ: 2 -ಜೆಟಿ-4421 ವಾಹನವನ್ನು ನಿಲ್ಲಿಸಿದ್ದರು. ಆದರೆ, ರಾತ್ರಿ ಕಳೆದು ಬೆಳಗಾಗುವುದರೊಳಗೆ ಮನೆಯ ಎದುರು ನಿಲ್ಲಿಸಿದ್ದ ಬೈಕ್​ಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಈ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ವಿನಯ್​ ದೂರು‌ ದಾಖಲಿಸಿದ್ದಾರೆ.

ಶೋಕಿ ಜೀವನಕ್ಕಾಗಿ ಮನೆಯ ಮುಂದೆ ನಿಲ್ಲಿಸಿದ ಬೈಕ್​ಗಳ ಕಳ್ಳತನ

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬೈಕ್​ ಕಳ್ಳರಿಗಾಗಿ ಶೋಧ ಮಾಡಿದಾಗ ಆರೋಪಿಗಳ ಸುಳಿವು ಸಿಕ್ಕಿದೆ. ‌ಬಂಧಿತ ಆರೋಪಿಗಳು ಶೋಕಿ ಜೀವನಕ್ಕಾಗಿ, ಹಣ ಗಳಿಸುವ ಉದ್ದೇಶದಿಂದ ಮನೆಯ ಮುಂದೆ ನಿಲ್ಲಿಸಿದ ಬೈಕ್​ಗಳ ಹ್ಯಾಂಡಲ್ ಮುರಿದು ಕ್ಷಣಾರ್ಧದಲ್ಲಿ ಎಗರಿಸ್ತಿದ್ರು. ಸದ್ಯ ಬಂಧಿತ ಆರೋಪಿಗಳಿಂದ 2,69,000 ಬೆಲೆಬಾಳುವ ನಾಲ್ಕು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

ಬೈಕ್​ ಕಳ್ಳತನ ಮಾಡಿ,  ನಂಬರ್​ ಪ್ಲೇಟ್​ ಬದಲಿಸಿ ಮಾರಾಟ

ಕೆಲ ಬೈಕ್​ಗಳ ನಂಬರ್ ಪ್ಲೇಟ್ ಬದಲಿಸಿ ಬೇರೆಡೆ ಮಾರಾಟ ಮಾಡಿರುವ ವಿಚಾರ ಕೂಡ ಬೆಳಕಿಗೆ ಬಂದಿದ್ದು, ತನಿಖೆ ಮುಂದುವರೆದಿದೆ. ಬಂಧಿತರ ವಿರುದ್ಧ ಈ ಹಿಂದೆಯೇ ನಗರದ ಹಲವು ಠಾಣೆಗಳಲ್ಲಿ ಪ್ರಕರಣಗಳು ಕೂಡ ದಾಖಲಾಗಿದೆ‌. ಬೈಕ್​ ಕಳ್ಳತನ ಮಾಡಿ, ಅವುಗಳ ನಂಬರ್​ ಪ್ಲೇಟ್​ ಬದಲು ಮಾಡಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.Look,what,these,thieves,done,Shockie,life ...!

key words : Look-what-these-thieves-done-Shockie-life …!