ಲೋಕಸಭಾ ಚುನಾವಣೆ ಮತ ಎಣಿಕೆ ಆರಂಭ: ಚಾಮುಂಡೇಶ್ವರಿ ಮೊರೆಹೋದ ನಿಖಿಲ್, ಭನಶಂಕರಿ ಮೊರೆಹೋದ ಸಿಎಂ

ಬೆಂಗಳೂರು:ಮೇ-23(www.justkannada.in) ಲೋಕಸಭಾ ಚುನಾವಣೆ-2019ರ ಮತಎಣಿಕೆ ಆರಂಭವಾಗಿದೆ. ಅಭ್ಯರ್ಥಿಗಳಲ್ಲಿ ಫಲಿತಾಂಶದ ಕುರಿತು ಕುತೂಹಲದ ಜತೆಗೆ ಆತಂಕವೂ ಮನೆ ಮಾಡಿದ್ದು, ಹಲವು ಅಭ್ಯರ್ಥಿಗಳು ಗೆಲುವುಗಾಗಿ ದೇವಾಲಯಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಈ ನಡುವೆ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಕುಟುಂಬ ಬೆಳ್ಳಂಬೆಳಗ್ಗೆ ದೇವರ ಮೊರೆಹೋಗಿದೆ. ನಿಖಿಲ್​ ಕುಮಾರಸ್ವಾಮಿ ಬೆಳಗ್ಗೆ 5 ಗಂಟೆಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದಿದ್ದಾರೆ.

ನಿಖಿಲ್​ಕುಮಾರಸ್ವಾಮಿ ಜತೆ ಉಸ್ತುವಾರಿ ಸಚಿವ‌ ಜಿ.ಟಿ.ದೇವೇಗೌಡ, ಶಾಸಕ ಸುರೇಶ್ ಗೌಡ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ, ಸಚಿವರಾದ ಸಿ.ಎಸ್. ಪುಟ್ಟರಾಜು ಪುತ್ರ ಶಿವರಾಜು, ಡಿ.ಸಿ.ತಮ್ಮಣ್ಣ ಪುತ್ರ ಸಂತೋಷ ಜತೆಗಿದ್ದರು.

ಇನ್ನು ಸಿಎಂ ಎಚ್​.ಡಿ.ಕುಮಾರಸ್ವಾಮಿ ದಂಪತಿ ಬೆಂಗಳೂರಿನ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿ ತಂದೆ ಎಚ್.ಡಿ.ದೇವೇಗೌಡ ಹಾಗೂ ಪುತ್ರ ನಿಖಿಲ್ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಲೋಕಸಭಾ ಚುನಾವಣೆ ಮತ ಎಣಿಕೆ ಆರಂಭ: ಚಾಮುಂಡೇಶ್ವರಿ ಮೊರೆಹೋದ ನಿಖಿಲ್, ಭನಶಂಕರಿ ಮೊರೆಹೋದ ಸಿಎಂ

Lokasabha election,vote counting,begins,temple visit,cm hd kumraswamy family