ಮೈಸೂರಿನಲ್ಲಿ ಬೃಹತ್ ಲೋಕ ಅದಾಲತ್:  ನಿರೀಕ್ಷೆಗೂ ಮೀರಿದ ಸಾರ್ವಜನಿಕರ ಪ್ರತಿಕ್ರಿಯೆ…

ಮೈಸೂರು,ಡಿಸೆಂಬರ್,19,2020(www.justkannada.in):   ಮೈಸೂರಿನ ಮಳಲವಾಡಿಯ ನ್ಯಾಯಾಲಯಗಳ ಸಂಕೀರ್ಣದಲ್ಲಿ ನಡೆದ ಬೃಹತ್ ಲೋಕ್ ಅದಾಲತ್  ಗೆ ಜನಸಾಗರ ಹರಿದು ಬಂದಿದ್ದು, ನಿರೀಕ್ಷೆಗೂ ಮೀರಿ ಸಾರ್ವಜನಿಕರು ಆಗಮಿಸಿ ಲೋಕ ಅದಾಲತ್ ನಲ್ಲಿ ಪಾಲ್ಗೊಂಡಿದ್ದರು.Teachers,solve,problems,Government,bound,Minister,R.Ashok

ಪೊಲೀಸ್ ಠಾಣೆ ಹಾಗೂ ನ್ಯಾಯಾಲಯಗಳಲ್ಲಿ ದಾವೆ  ಹೂಡಿರುವ ಸಿವಿಲ್ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ನ್ಯಾಯಾಲಯಗಳು ನೀಡುವ ಆಯ್ಕೆಯೇ ಈ  ಲೋಕ ಅದಾಲತ್ ಕಾರ್ಯಕ್ರಮವಾಗಿದೆ. ಮೈಸೂರು ಜಿಲ್ಲಾದ್ಯಂತ ಏಕಕಾಲದಲ್ಲಿ ಲೋಕ ಅದಾಲತ್ ಕಾರ್ಯಕ್ರಮ ಮಾಡಲಾಗುತ್ತಿದ್ದು, ಮೈಸೂರು ನಗರ ಒಂದರಲ್ಲೇ 38 ನ್ಯಾಯಾಲಯ ಬೆಂಚ್ ಗಳಲ್ಲಿ ಲೋಕ ಅದಾಲತ್ ನಡೆಯುತ್ತಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕು ನ್ಯಾಯಾಲಯಗಳಲ್ಲೂ ಲೋಕ ಅದಾಲತ್ ನಡೆಯುತ್ತಿದ್ದು, ನಿರೀಕ್ಷೆ ಮೀರಿ ಸಾರ್ವಜನಿಕರು ಪಾಲ್ಗೊಂಡು ತಮ್ಮ ಸಮಸ್ಯೆ ಇತ್ಯಾರ್ಥಪಡಿಸಿಕೊಳ್ಳಲು ಮುಂದಾಗಿದ್ದಾರೆ.Lok Adalat – Mysore-Public response -beyond -expectations

ಸಿವಿಲ್ ಸಂಬಂಧ ವ್ಯಾಜ್ಯಗಳು, ಭೂ ವ್ಯಾಜ್ಯಗಳು, ಅಪಘಾತ ಪ್ರಕರಣಗಳ ಸಂಬಂಧಿಸಿದಂತೆ ಸಂಧಾನದ ಮೂಲಕ ಇತ್ಯರ್ಥಕ್ಕಾಗಿ ಲೋಕ ಅದಾಲತ್  ನಡೆಯುತ್ತದೆ. ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳ ಇತ್ಯರ್ಥವಾಗುವ ಸಾಧ್ಯತೆ ಇದೆ ಎಂದು ಲೋಕ ಅದಾಲತ್ ಕಾರ್ಯಕ್ರಮದ ಕುರಿತು ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಪಿ. ದೇವಮಾನೆ ಮಾಹಿತಿ ನೀಡಿದ್ದಾರೆ.

Key words: Lok Adalat – Mysore-Public response -beyond -expectations