ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ವಿಚಾರ: ಕಂದಾಯ ಸಚಿವ ಆರ್. ಅಶೋಕ್  ಪ್ರತಿಕ್ರಿಯಿಸಿದ್ದು ಹೀಗೆ…?

ಬೆಂಗಳೂರು,ಜೂ,23,2020(www.justkannada.in):  ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆ ಬಳಿಕ  ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಸರ್ಕಾರ ಮತ್ತೆ ಲಾಕ್ ಡೌನ್ ಮಾಡಲಿದೆಯಾ ಎಂಬ ಪ್ರಶ್ನೆ ಉದ್ಬವಿಸಿದೆ.

ಈಕುರಿತು ಇಂದು ಸ್ಪಷ್ಟನೆ ನೀಡಿರುವ ಕಂದಾಯ ಸಚಿವ ಆರ್.ಅಶೋಕ್ , ಕೇಂದ್ರದ ನಿರ್ದೇಶನ ಇಲ್ಲದೆ ರಾಜ್ಯ ಸರ್ಕಾರ ಲಾಕ್ ಡೌನ್ ಮಾಡಲ್ಲ. ಲಾಕ್ ಡೌನ್ ಬೇಕು ಎಂದಾಗ ಹಾಕೋದು, ಬೇಡ ಎಂದಾಗ ಬಿಡೋದು ಮಾಡಲ್ಲ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್,  ಕೇಂದ್ರ ಸರ್ಕಾರ ಮಿನಿಟ್ ಟು ಮಿನಿಟ್ ಗಮನಿಸುತ್ತಿದೆ. ಕೇಂದ್ರದ ನಿರ್ದೇಶನ ಇಲ್ಲದೆ ರಾಜ್ಯ ಸರ್ಕಾರ ಲಾಕ್ ಡೌನ್ ಮಾಡಲು ಸಾಧ್ಯವಿಲ್ಲ. ತಜ್ಞರ ಜತೆ ಸಭೆ ಮಾಡ್ತಾಇದ್ದೀವಿ. ನುರಿತ ತಜ್ಞರಿಂದ ವರದಿ ಪಡೆದು  ರಾಜ್ಯ ಸರ್ಕಾರ ಮುಂದಿನ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.lockdown-revenue-minister-r-ashok-bangalore

ಹಾಗೆಯೇ ಗುರುವಾರ ಸಚಿವ ಸಂಪುಟ ಸಭೆ ಇದೆ.  ಕೊರೋನಾ ಹಿನ್ನೆಲೆ ವಾರ್ಡ್ ವೈಸ್ ಸೀಲ್ ಮಾಡಬೇಕಾ…? ವಿಧಾನಸಭೆ ವೈಸ್ ಸೀಲ್ ಮಾಡಬೇಕಾ..? ಈ ಬಗ್ಗೆ ತಜ್ಞರ ಜತೆ ಚರ್ಚಿಸಿ ನಿರ್ಧಾರ ಮಾಡಲಾಗುತ್ತದೆ ಎಂದು ಸಚಿವ ಆರ್ ಅಶೋಕ್ ತಿಳಿಸಿದರು.

Key words: lockdown-Revenue Minister –R.Ashok -bangalore