ಎನ್ ಅರ್ ಕ್ಷೇತ್ರ ಲಾಕ್ ಡೌನ್ ವಿಚಾರ: ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ಸ್ಪಷ್ಟನೆ…

ಮೈಸೂರು,ಜು,22,2020(www.justkannada.in):  ಸಿಎಂ ಬಿಎಸ್ ಯಡಿಯೂರಪ್ಪ ನಿನ್ನೆ ರಾಜ್ಯದ ಜನತೆಯನ್ನುದ್ದೇಶಿಸಿ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡುತ್ತಾ ನಾಳೆಯಿಂದ ರಾಜ್ಯದಲ್ಲಿ ಲಾಕ್ ಡೌನ್ ಇರಲ್ಲ ಎಂದಿದ್ದರು. ಆದರೂ ಮೈಸೂರಿನ  ಎನ್ ಅರ್ ಕ್ಷೇತ್ರದ ಕೆಲ ಭಾಗಗಳಲ್ಲಿ ಲಾಕ್  ಡೌನ್ ಮುಂದುವರೆಸಲಾಗಿದೆ.jk-logo-justkannada-logo

ಅದ್ದರಿಂದ ಈ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಸ್ಪಷ್ಟನೆ ನೀಡಿದ್ದಾರೆ.  ಸಾವಿನ ಸಂಖ್ಯೆ ಜಾಸ್ತಿ ಆಗಿದರಿಂದ ಪಾರ್ಷಿಯಲ್ ಲಾಕ್ ಡೌನ್ ಮಾಡಲಾಗಿತ್ತು. ಮೃತರ‌ ಮನೆ ಸುತ್ತ ಸಿಲ್ ಡೌನ್ ಮಾಡಿ ಪರೀಕ್ಷೆ ಮಾಡಲಾಗುತ್ತಿದೆ. ಪರೀಕ್ಷೆ ಮಾಡಿಸಲು ಸಾರ್ವಜನಿಕರು ಅಸಹಕಾರ ನೀಡುತ್ತಿದ್ರು. ಈ ಹಿನ್ನಲೆ ಈ ಅದೇಶ ಮಾಡಲಾಗಿತ್ತು ಎಂದು ಅಭಿರಾಂ ಜೀ ಶಂಕರ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿರುವ ಡಿಸಿ ಅಭಿರಾಂ ಜೀ ಶಂಕರ್, ಪಾರ್ಷಿಯಲ್ ಲಾಕ್ ಡೌನ್  ವೇಳೆ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ಇರಲಿಲ್ಲ. ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಲಾಗಿತ್ತು. ಜನರ ಓಡಾಟಕ್ಕೆ ಯಾವುದೇ ತೊಂದರೆ ಇಲ್ಲ. ಡೆಟ್ ರೇಟ್ ಇರುವ ಕಡೆ ಮಾತ್ರ ಹೆಚ್ಚು ಹೆಚ್ಚಿನ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಜಿಲ್ಲಾಡಳಿತದ ಅದೇಶದಲ್ಲಿ ಬದಲಾವಣೆ ಇಲ್ಲ ಎಂದು ಅಭಿರಾಂ ಜೀ ಶಂಕರ್ ತಿಳಿಸಿದ್ದಾರೆ.

ಇದುವರೆಗೆ 550 ಕ್ಕೂ ಹೆಚ್ಚು ಆಂಟಿಜನ್ ಟೆಸ್ಟ್ ಕಿಟ್ ಮೂಲಕ ಪರೀಕ್ಷೆ ಮಾಡಲಾಗಿದೆ. 115 ಪಾಸಿಟೀವ್ ಬಂದಿವೆ. ಇದು ಒಂದಷ್ಟು ಜನರ ಪ್ರಾಣ ಉಳಿಸಲು ಸಹಕಾರಿ ಆಗಿದೆ. ಗ್ರಾಮೀಣ ಭಾಗದಲ್ಲೂ ಟೆಸ್ಟ್ ಮಾಡುವ ಅವಶ್ಯಕತೆ ಇದೆ. ಹೀಗಾಗಿ 10 ಸಾವಿರ ಆಂಟಿಜನ್ ಕಿಟ್ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಬಹುಶಃ ಇಂದು ಸಿಗಬಹುದು. ಈ ರೀತಿ ಶೀಘ್ರ ಪಾಸಿಟಿವ್ ಪ್ರಕರಣ ಗುರುತಿಸುವುದರಿಂದ ಸೂಕ್ತ ಚಿಕಿತ್ಸೆ ನೀಡಲು ಸಹಕಾರಿ ಆಗಲಿದೆ ಎಂದು ಅಭಿರಾಂ ಜೀ ಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.lockdown-mysore-dc-abhiram-jee-shankar-clarified

ಜೆ ಕೆ ಟೈರ್ಸ್ ಕಾರ್ಖಾನೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿ ಅಭಿರಾಂ ಜೀ ಶಂಕರ್, ಕಾರ್ಖಾನೆಯವರಿಗೆ ಈಗಾಗಲೇ ನಿರ್ದೇಶನ ನೀಡಿದ್ದೇವೆ. ಇಂಡಸ್ಟ್ರೀಸ್ ಅವರಿಗೆ ಮೆಡಿಕಲ್ ಇನ್ಶುರೆನ್ಸ್ ಇರುತ್ತೆ. ಹಾಗಾಗಿ ಅವರೇ ಕೋವಿಡ್ ಕೇರ್ ಸೆಂಟರ್ ತೆರೆದು ಚಿಕಿತ್ಸೆ ನೀಡುವಂತೆ ತಿಳಿಸಿದ್ದೇವೆ. ಸರ್ಕಾರ ಎಲ್ಲವನ್ನು ಮಾಡಲು ಆಗಲ್ಲ. ಅದ್ದರಿಂದ ಅವರು ಖಾಸಗಿ ಆಸ್ಪತ್ರೆ ಜೊತೆ ಟೈಅಪ್ ಮಾಡ್ಕೊಂಡಿದ್ದಾರೆ. ಶಂಕಿತರಿಗೆ ಟೆಸ್ಟ್ ಮಾಡಿಸಲಾಗ್ತಿದೆ. ಅದರ ಮಾಹಿತಿ ಜಿಲ್ಲಾಡಳಿತಕ್ಕೆ ನೀಡುತ್ತಿದ್ದಾರೆ ಎಂದು  ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಹೇಳಿದರು.

Key words: lockdown- Mysore –DC- Abhiram Jee Shankar -clarified.