ಜನರ ಸುರಕ್ಷತೆಗೆ ಲಾಕ್ ಡೌನ್ ಒಳ್ಳೆಯದು- ಡಿಸಿಎಂ ಅಶ್ವಥ್ ನಾರಾಯಣ್…

ಬೆಂಗಳೂರು,ಜು,11,2020(www.justkannada.in):  ರಾಜ್ಯದಲ್ಲಿ ಕೊರೋನಾ ಮಹಾಮಾರಿ ದಿನೇ ದಿನೇ ಹೆಚ್ಚುತ್ತಿದ್ದು ವಿಕೆಂಡ್ ಭಾನುವಾರ ಲಾಕ್ ಡೌನ್ ಮಾಡಲಾಗಿದೆ. ಇನ್ನೊಂದೆಡೆ ಶನಿವಾರವೂ ಲಾಕ್ ಡೌನ್ ಬಗ್ಗೆ ಚರ್ಚೆ ಮುನ್ನೆಲೆಗೆ ಬಂದಿದೆ. ಈ ನಡುವೆ ಜನರ ಸುರುಕ್ಷತೆಗೆ ಲಾಕ್ ಡೌನ್ ಒಳ್ಳೆಯದು ಎಂದು ಡಿಸಿಎಂ ಅಶ್ವಥ್ ನಾರಾಯಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ಜನರ ಸುರಕ್ಷತೆಗೆ ಲಾಕ್ ಡೌನ್ ಒಳ್ಳೆಯದು. ಆದ್ರೆ ಕೊರೋನಾ ಸೋಂಕು ತಡೆಯಲು ಲಾಕ್ ಡೌನ್ ಪರಿಹಾರವಲ್ಲ. ಲಾಕ್ ಡೌನ್ ನಿಂದ ಸೋಂಕು ಮುಂದೂಡಬಹುದು ವಿನಹ ತಡೆಯಲು ಆಗಲ್ಲ ಎಂದು ತಿಳಿಸಿದರು.Lockdown - good – people- safety-DCM -Ashwath Narayan.

 ಶನಿವಾರದ ಲಾಕ್​ಡೌನ್ ಅವಶ್ಯಕತೆ ಇಲ್ಲ.  ಒಂದು ವೇಳೆ ಅವಶ್ಯಕತೆ ಇದ್ದರೇ ಸಿಎಂ ಪರಿಸ್ಥಿತಿ ನೋಡಿ ಈ ಬಗ್ಗೆ ನಿರ್ಧರಿಸುತ್ತಾರೆ.  ಶನಿವಾರ ಲಾಕ್ ಡೌನ್ ಮಾಡಬೇಕೋ ಬೇಡವೋ ಎಂದು ಚರ್ಚೆ ಮಾಡಿ ಸಿಎಂ ಬಿಎಸ್ ವೈ ತೀರ್ಮಾನಿಸುತ್ತಾರೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು.

Key words: Lockdown – good – people- safety-DCM -Ashwath Narayan.