ಮೈಸೂರಿನ ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಯ ಲಾಕ್ ಡೌನ್ ಅಂತ್ಯ…

Promotion

ಮೈಸೂರು,ಜು,24,2020(www.justkannada.in): ಮಹಾಮಾರಿ ಕೊರೋನಾ ವೈರಸ್ ಹೆಚ್ಚಳವಾದ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನ ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾರಿ ಮಾಡಲಾಗಿದ್ದ  ಲಾಕ್ ಡೌನ್ ಅಂತ್ಯವಾಗಿದೆ.jk-logo-justkannada-logo

ಕೊರಾನಾ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾದ ಹಿನ್ನೆಲೆ, ನಗರದ ಮಂಡಿ, ನರಸಿಂಹರಾಜ, ಲಷ್ಕರ್ ಹಾಗೂ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾಗಶಃ ಲಾಕ್‌ ಡೌನ್ ಮಾಡಲಾಗಿತ್ತು. ಮೈಸೂರು ಜಿಲ್ಲಾಡಳಿತ ಅಗತ್ಯ ವಸ್ತುಗಳ ಮಾರಾಟ ಹೊರತುಪಡಿಸಿ ಎಲ್ಲವನ್ನ ಬಂದ್ ಮಾಡಿತ್ತು.lockdown-four-police-stations-mysore

ಎನ್ ಅರ್ ಕ್ಷೇತ್ರ, ಚಾಮರಾಜ ಕ್ಷೇತ್ರದ ಕೆಲ ಭಾಗ ಲಾಕ್‌ಡೌನ್ ಆಗಿತ್ತು. ಕೆ ಟಿ ಸ್ಟ್ರೀಟ್, ಅಶೋಕ ರಸ್ತೆ ಸೇರಿ ಹಲವು ಪ್ರಮುಖ ವಾಣಿಜ್ಯ ಮಾರುಕಟ್ಟೆ ಬಂದ್ ಆಗಿತ್ತು. ಇದೀಗ ಲಾಕ್ ಡೌನ್ ಅಂತ್ಯವಾಗಿದ್ದು, ಇಂದಿನಿಂದ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ. ಇನ್ನು  ಕಂಟೈನ್‌ಮೆಂಟ್ ಜೋನ್‌ಗಳಲ್ಲಿ ಸೀಲ್‌ ಡೌನ್ ಏರಿಯಾಗಳಲ್ಲಿ ಮಾತ್ರ ನಿರ್ಬಂಧ ಇರಲಿದ್ದು,  ಈ ಭಾಗಗಳಲ್ಲಿ ರಾಪಿಡ್ ಟೆಸ್ಟ್ ಎಂದಿನಂತೆ ಮುಂದುವರಿಯಲಿದೆ.

Key words: lockdown –four- police stations -Mysore.