ಈ ಬಾರಿ ಲಾಕ್ ಡೌನ್ ಬಿಗಿಯಾಗಿರಲಿಲ್ಲ: ರೈತರಿಗೆ ಅಷ್ಟು ಸಮಸ್ಯೆಯಾಗಿಲ್ಲ- ಕೃಷಿ ಸಚಿವ ಬಿಸಿ ಪಾಟೀಲ್.

ಬೆಂಗಳೂರು,ಜೂನ್,14,2021(www.justkannada.in):  ಕಳೆದ ಬಾರಿಯಂತೆ ಈ ಬಾರಿ ಲಾಕ್ ಡೌನ್ ಬಿಗಿಯಾಗಿರಲಿಲ್ಲ. ಹೀಗಾಗಿ ರೈತರಿಗೆ ಅಷ್ಟು ಸಂಸ್ಯೆಯಾಗಿಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿಕೆ ನೀಡಿದ್ದಾರೆ.jk

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಬಿ.ಸಿ ಪಾಟೀಲ್, ಲಾಕ್ ಡೌನ್ ವೇಳೆಯಲ್ಲಿ 153 ಮೆಟ್ರಿಲ್ ಟನ್ ಆಹಾರ ಉತ್ಪಾದನೆಯಾಗಿದೆ.  ಲಾಕ್ ಡೌನ್ ಬಿಗಿಯಾಗಿರದ ಕಾರಣ ರೈತರಿಗೆ ಅಷ್ಟೇನು ಸಮಸ್ಯೆಯಾಗಿಲ್ಲ. ಇನ್ನು ಕೃತಕ ಅಭಾವ ಸೃಷ್ಠಿಸಿದ್ಧ 204 ಅಂಗಡಿಗಳ ಲೈಸೆನ್ಸ್ ಅನ್ನ ರದ್ದು ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಇನ್ನು ಫಸಲ್ ಭೀಮಾ ಯೋಜನೆಯಡಿ ಶೇ.85ರಷ್ಟು ಆಧಾರ್ ಕಾರ್ಡ್ ಲಿಂಕ್ ಆಗಿದೆ. ಎಂದರು.

ಸಿಎಂ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಬಿ.ಸಿ ಪಾಟೀಲ್, ಸಿಎಂ ಬದಲಾವಣೆ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಎರಡು ವರ್ಷ ಯಡಿಯೂರಪ್ಪನವರೇ ಮುಂದುವರಿಯುತ್ತಾರೆ. ಇದನ್ನು ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ ಕಟೀಲ್ ಸ್ಪಷ್ಟಪಡಿಸಿದ್ದಾರೆ ಎಂದರು.

Key words: lock down – not tight-no problem – farmers-Agriculture Minister –BC Patil.