ಭಾರತದ ಅತ್ಯಂತ ಜನಪ್ರಿಯ ನಟರ ಪಟ್ಟಿ: ಯಶ್’ಗೆ 5ನೇ ಸ್ಥಾನ

ಬೆಂಗಳೂರು, ಆಗಸ್ಟ್ 25, 2022 (www.justkannada.in): ಭಾರತೀಯ ಅತ್ಯಂತ ಜನಪ್ರಿಯಗೊಂಡ 10 ಸಿನಿಮಾ ನಟರ ಹೆಸರನ್ನು ಬಿಡುಗಡೆಯಾಗಿದೆ.

ಪ್ರತಿ ಬಾರಿ ಈ ಕುರಿತಾಗಿ ಓರ್ಮಾಕ್ಸ್ ಸಮೀಕ್ಷೆ ನಡೆಸುತ್ತದೆ. ಈ ವರದಿ ಪ್ರಕಾರ  ಸೌತ್ ನಟರೇ ಹೆಚ್ಚಾಗಿ ಸ್ಥಾನ ಪಡೆದುಕೊಂಡಿದ್ದಾರೆ.

ಬಾಲಿವುಡ್ ನಟರ ಪೈಕಿ ಕೇವಲ ಒಬ್ಬ ನಟ ಮಾತ್ರವೇ ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.  ಭಾರತದ ಟಾಪ್ 10 ನಟರ ಪಟ್ಟಿಯಲ್ಲಿ ನಟ ವಿಜಯ್ ಅಗ್ರಸ್ಥಾನದಲ್ಲಿದ್ದಾರೆ.

ಬಾಹುಬಲಿ ಸ್ಟಾರ್ ಪ್ರಭಾಸ್ ಅವರು ಟಾಪ್ 10 ಲಿಸ್ಟ್​ನಲ್ಲಿ ಎರಡನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ‘ಕೆಜಿಎಫ್ 2’ ಮೂಲಕ ಹವಾ ಸೃಷ್ಟಿಸಿದ ಯಶ್ 5ನೇ ಸ್ಥಾನದಲ್ಲಿದ್ದಾರೆ. ಟಾಪ್ 10 ನಟರ ಪಟ್ಟಿಯಲ್ಲಿ ಯಶ್ 5ನೇ ಸ್ಥಾನ ಪಡೆದಿದ್ದಾರೆ. ಟಾಲಿವುಡ್ ನಟ ಮಹೇಶ್ ಬಾಬು ಅವರು 8ನೇ ಸ್ಥಾನದಲ್ಲಿದ್ದಾರೆ. ಅಕ್ಷಯ್ ಕುಮಾರ್ ಈ ಲಿಸ್ಟ್​ ಸೇರಿಕೊಂಡ ಬಾಲಿವುಡ್​ನ ಏಕೈಕ ನಟ. ಅಕ್ಷಯ್ ಕುಮಾರ್‌ಗೆ 7ನೇ ಸ್ಥಾನ ಸಿಕ್ಕಿದೆ.